»   » ಉಳಿದವರು ಕಂಡಂತೆ ನಂತರ ಶೀತಲ್ ಶೆಟ್ಟಿ ಚಿತ್ರ #96

ಉಳಿದವರು ಕಂಡಂತೆ ನಂತರ ಶೀತಲ್ ಶೆಟ್ಟಿ ಚಿತ್ರ #96

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಉಳಿದವರು ಕಂಡಂತೆ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಜಯಂತ್ ಎಸ್ ಅವರು ಈಗ ಸ್ವತಂತ್ರ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ತಮ್ಮ ಹೊಚ್ಚ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಟಿ ಶೀತಲ್ ಶೆಟ್ಟಿ ಅವರು ಉಳಿದವರು ಕಂಡಂತೆ ನಂತರ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [ರಕ್ಷಿತ್ ಶೆಟ್ಟಿ 'ವಾಂಟೆಡ್ ಡೆಡ್ ಆರ್ ಅಲೈವ್']

ಅಂದ ಹಾಗೆ ಈ ಚಿತ್ರದ ಹೆಸರು #96. 48 ಸೆಕೆಂಡುಗಳ ಮೋಷನ್ ಫಸ್ಟ್ ಲುಕ್ ಪೋಸ್ಟರ್ ನ ಹಿನ್ನೆಲೆಯಲ್ಲಿ ಭೂತ ಬಂಗಲೆ, ಮಿಂಚು, ಮಳೆ ಜೊತೆಗೆ ಚಿತ್ರದ ಶೀರ್ಷಿಕೆ, ಪ್ರಮುಖ ಪಾತ್ರಧಾರಿಗಳಾದ ಶೀತಲ್ ಶೆಟ್ಟಿ, ಉಗ್ರರವಿ ಅವರ ಚಿತ್ರಗಳು ಕಾಣಿಸುತ್ತದೆ.

#96

ಮೀಡಿಯಾ ಮನೆ ಹಾಗೂ ರಿ ಚಾರ್ಡ್ ಆಡಿಯೋ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸಿಂಪಾಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ಭರತ್ ಬಿ.ಜೆ ಸಂಗೀತ ನೀಡಿದ್ದಾರೆ. [ಜಾಹೀರಾತು ಲೋಕಕ್ಕೆ ಶೀತಲ್]

ವಿನಿತ್ ಆಚಾರ್ಯ ಅವರ ವಿಎಫ್ ಎಕ್ಸ್, ವಿನ್ಯಾಸ ಹಾಅಗೂ ಉನ್ನಿ ಅಭಿಜಿತ್ ಅವರ ಆಡಿಯೋಗ್ರಾಫಿ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಕಂಡು ಬಂದಿದೆ. [ವಿಮರ್ಶೆ: ಪತ್ರಿಕೆಗಳು ಕಂಡಂತೆ 'ಉಳಿದವರು ಕಂಡಂತೆ']

ಜಯಂತ್ ಸೀಗೆ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ನಿರ್ದೇಶಕ ರಕ್ಷಿತ್ ಶೆಟ್ಟಿ, ಉತ್ತಮ ಪ್ರತಿಭಾವಂತ, ನನಗೆ ನಿಜಕ್ಕೂ ಇದು ಹೆಮ್ಮೆಯ ವಿಷಯವಾಗಿದೆ. ನಿಮಗೆಲ್ಲ ಜಯಂತ್ ಸಿನಿಮಾ ಶೈಲಿ ಇಷ್ಟವಾಗಬಹುದು ಎಂದಿದ್ದಾರೆ. ಜಯಂತ್ ಅವರು ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಫಸ್ಟ್ ಲುಕ್ ನೋಡಲು ಚಿತ್ರವನ್ನು ಕ್ಲಿಕ್ ಮಾಡಿ.

English summary
Jayanth Seege, an associate director for ‪#‎UlidavaruKandante‬ is starting with his debut directorial called #96. Actor, director Rakshith Shetty praised him and said indeed a proud moment for me. He is definitely someone whom I can vouch for and you guys should definitely look forward for his work.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada