Don't Miss!
- News
ಅಸ್ಸಾಂ: ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಕೇಸ್
- Finance
ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ಹೊಸ ಡೆಡ್ಲೈನ್ ತಿಳಿಯಿರಿ
- Sports
Ranji Trophy: ಕರ್ನಾಟಕದ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಾರ್ಖಂಡ್
- Technology
ಹೆಚ್ಚು ಹಣ ನೀಡಿ ಹೊಸ ಫೋನ್ ಖರೀದಿ ಮಾಡ್ತಾ ಇದ್ದೀರಾ?..ಇಲ್ಲಿ ಗಮನಿಸಿ!
- Lifestyle
Horoscope Today 24 Jan 2023: ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಾಂಧಿ ಕಥೆ ಹೇಳಿ..'ಕಾಂತಾರ'ದ ದಾಖಲೆಯನ್ನೂ ಮುರಿಯಲಿ ಎಂದ ಕಮಲ್ ಹಾಸನ್!
'ಕಾಂತಾರ' ಸಿನಿಮಾದ ಜ್ವರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ.ಥಿಯೇಟರ್‌ಗೆ ಬಂದು, ಥಿಯೇಟರ್‌ನಿಂದ ಓಟಿಟಿಗೆ ಬಂದು, ಓಟಿಟಿಯಿಂದ ಟಿವಿಗೆ ಲಗ್ಗೆ ಇಟ್ಟರೂ ಕಾಂತಾರ ಜಪ ಎಲ್ಲೆಡೆ ಆಗುತ್ತಲೇ ಇದೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ 'ಕಾಂತಾರ' ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಇನ್ನೊಂದು ರಿಷಬ್ ಶೆಟ್ಟಿ ಕೂಡ ಕಮಲ್ ಹಾಸನ್ ಫೋನ್ ಮಾಡಿ ವಿಶ್ ಮಾಡಿದ್ದರ ಬಗ್ಗೆ ಹೇಳಿದ್ದರು.ಈಗ ಅವರು ಬರೆದಿರೋ ಪತ್ರವನ್ನು ಫ್ರೇಮ್ ಹಾಕಿಸಿ, ಆ ಫೋಟೊವನ್ನೇ ಟ್ವೀಟ್ ಮಾಡಿದ್ದಾರೆ.
'ರಿಷಬ್
ಶೆಟ್ಟಿ
ಕಂಡ್ರೆ
ನನಗೆ
ಅಸೂಯೆ':
ಬಾಲಿವುಡ್
ನಟ
ನವಾಜುದ್ದೀನ್
ಸಿದ್ದಿಕಿ
ಹೀಗಂದಿದ್ಯಾಕೆ?
ಜನವರಿ 3, 2023ರಂದು ಕಮಲ್ ಹಾಸನ್ ರಿಷಬ್ ಶೆಟ್ಟಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ರಿಷಬ್ ಶೆಟ್ಟಿ ಈಗ ರಿವೀಲ್ ಮಾಡಿದ್ದಾರೆ. ಕಮಲ್ ಹಾಸನ್, ರಿಷನ್ ಶೆಟ್ಟಿಗೆ ಬರೆದ ಪತ್ರದ ಸಾರಾಂಶ ಹೀಗಿದೆ.

ಇದು ಪ್ರಶಂಸೆಯ ಪತ್ರ
"ಇದು ನಿಮ್ಮ 'ಕಾಂತಾರ' ಸಿನಿಮಾಗಾಗಿ ತಡವಾಗಿ ಬರೆದ ಪ್ರಶಂಸೆಯ ಪತ್ರ.ನಾನು ಸಿನಿಮಾ ನೋಡಿದ ರಾತ್ರಿಯೇ ಈ ಪತ್ರವನ್ನು ಬರೆಯಬೇಕಿತ್ತು.ನಾನು ಹಾಗೆ ಮಾಡಿದ್ದರೆ, ಆ ಪತ್ರ ಏನೂ ಹೇಳದೆ ಹೋಗಬಹುದಿತ್ತು.ಕಾಂತಾರದಂತಹ ಸಿನಿಮಾ ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಿನಿಮಾ ಸದಾ ನಿಮ್ಮಲ್ಲಿ ಅರಳುತ್ತದೆ."

'ದೇವರಿಲ್ಲಿ ತಾಯಿಯಂತೆ ವರ್ತಿಸುತ್ತಾಳೆ'
"ನನ್ನೊಳಗೆ ದೇವರು ಎಂಬುವುದಿಲ್ಲ.ಆದರೂ ದೇವರ ಮೇಲೆ ನಂಬಿಕೆ ಇಟ್ಟವರನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ.ನಮ್ಮ ಪುರಾಣಗಳಲ್ಲಿ ಹೇಳಿರುವಂತೆ ದೇವರುಗಳಲ್ಲಿ ಕರುಣೆಯ ಕೊರತೆಯಿದೆ ಎಂಬುವುದನ್ನು ನಿಜವಾಗಿಯೂ ನಂಬುತ್ತೇನೆ.ನಾವು ದ್ರಾವಿಡರಾಗಿ ಮಾತೃ ಪ್ರಧಾನ ಸಮಾಜವನ್ನು ಹೊಂದಿದ್ದೇವೆ. ನಿಮ್ಮ ಸಿನಿಮಾದ ಕೊನೆ ದೃಶ್ಯ ಕೂಡ ಅದೇನೆ. ಅಲ್ಲಿ ದೇವರು ಆರಂಭದಲ್ಲಿ ತಂದೆಯಂತಿದ್ದದ್ದು ಕೊನೆಯಲ್ಲಿ ತಾಯಿಯಂತೆ ವರ್ತಿಸುತ್ತದೆ."

ಗಾಂಧೀಜಿಯ ಕಥೆ ಹೇಳಿದ ಕಮಲ್ ಹಾಸನ್
ಗಾಂಧೀಜಿಯ ಅಭಿಮಾನಿಯೊಬ್ಬ(ನನ್ನಂತೆ) ವರ್ಣಿಸಿದ ಘಟನೆ ಹೀಗಿದೆ. ಯಾರೋ ಒಬ್ಬರು ಗಾಂಧೀಜಿಯನ್ನು ಹೀಗೆ ಕೇಳುತ್ತಾರೆ." ಜನರು ನಿಮ್ಮನ್ನು ಫಾದರ್ ಆಫ್ ನೇಷನ್ ಎಂದು ಕರೆಯುತ್ತಾರೆ. ನಿಮ್ಮ ಮುಂದಿನ ಗುರಿಯೇನು? ಆಗ ಗಾಂಧೀಜಿ ಹೀಗೆ ಪ್ರತಿಕ್ರಿಯೆ ನೀಡಿದ್ದರು."ನಾನು ಈ ದೇಶದ ತಾಯಿ ಆಗಬೇಕು. ತಾಯಿ ಒಬ್ಬಳಿಂದ ಮಾತ್ರ ಸಹಾನುಭೂತಿ ತೋರಿಸಲು ಸಾಧ್ಯ.ನೀವು ಮಾತಾಡಿದ ತಂದೆಯ ಬಳಿ ಹಲವು ಕೊರತೆಗಳಿವೆ." ಎಂದು ಗಾಂಧೀಜಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

'ಕಾಂತಾರ' ದಾಖಲೆ ಮುರಿಯಲಿ
"ಎಂ ಟಿ ವಾಸುದೇವನ್ ನಾಯರ್ ಅವರ ನಿರ್ಮಲ್ಯಂ ಸಿನಿಮಾವನ್ನು ನೀವು ನೋಡಿರಬಹುದು. ಆ ಕ್ಲಾಸಿಕ್ ಸಿನಿಮಾ ಶೇಡ್ ನಿಮ್ಮ ಸಿನಿಮಾದಲ್ಲಿದೆ. ನಾನು ನಿಮ್ಮ ಬಳಿ ಫೋನ್‌ನಲ್ಲಿ ಹೇಳಿದಂತೆ, ನಿಮ್ಮ ಮುಂದಿನ ಸಿನಿಮಾ ಮೂಲಕ 'ಕಾಂತಾರ'ದ ದಾಖಲೆಗಳನ್ನೂ ಮುರಿದು ಹಾಕಿ." ಎಂದು ಕಮಲ್ ಹಾಸನ್ ಪತ್ರದಲ್ಲಿ ಬರೆದಿದ್ದಾರೆ.