For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರಕ್ಕೆ ಮತ್ತೆ ದರ್ಶನ್ 'ಶಾಸ್ತ್ರಿ' ಎಂಟ್ರಿ.!

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಸಹಿ ಸುದ್ದಿ. ಡಿ-ಬಾಸ್ ಅಭಿಮಾನಿಗಳು ಸದ್ಯ ದರ್ಶನ್ ಅಭಿನಯಿಸುತ್ತಿರುವ 'ತಾರಕ್' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ, ಈ ಚಿತ್ರ ಬರುವುದಕ್ಕೂ ಮುಂಚೆ ಮತ್ತೊಂದು ಚಿತ್ರವನ್ನ ನೋಡುವ ಅವಕಾಶ ಚಾಲೆಂಜಿಗ್ ಸ್ಟಾರ್ ಫ್ಯಾನ್ಸ್ ಗೆ ಸಿಕ್ಕಿದೆ.

  ಹೌದು, ದರ್ಶನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಶಾಸ್ತ್ರಿ' ರೀ-ರಿಲೀಸ್ ಆಗ್ತಿದೆ. ಇದೇ ತಿಂಗಳು ಅಂದ್ರೆ ಜೂನ್ 9 ರಂದು ರಾಜ್ಯಾದ್ಯಂತ ಮತ್ತೆ 'ಶಾಸ್ತ್ರಿ' ಬಿಡುಗಡೆಯಾಗುತ್ತಿದೆ.['ತಾರಕ್'ಗಾಗಿ ಮಲೇಷ್ಯಾದಲ್ಲಿ ದರ್ಶನ್ ಅದ್ಧೂರಿ ಸಾಹಸ]

  ಕೆ.ಜಿ ರಸ್ತೆಯ ಮುಖ್ಯ ಚಿತ್ರಮಂದಿರ ಸೇರಿದಂತೆ ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ದರ್ಶನ್ 'ಶಾಸ್ತ್ರಿ' ರಾರಾಜಿಸಲಿದೆ. ಹೊಸ ತಂತ್ರಜ್ಞಾನದಲ್ಲಿ 5.1 ಡಿಜಿಟಲ್ ಆಡಿಯೋ ವರ್ಷನ್ ನಲ್ಲಿ ದಾಸನ ಸಿನಿಮಾ ಮತ್ತೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.[ದರ್ಶನ್ 'ಕುರುಕ್ಷೇತ್ರ'ಕ್ಕೆ ಮಹಾಗುರು ದ್ರೋಣಾಚಾರ್ಯ ಸಿಕ್ಕಾಯ್ತು.!]

  ಅಂದ್ಹಾಗೆ, 'ಶಾಸ್ತ್ರಿ'.....2006 ರಲ್ಲಿ ಬಿಡುಗಡೆಯಾಗಿದ್ದ ಚಿತ್ರ. ಪಿ.ಎನ್ ಸತ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ದರ್ಶನ್ ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸಿದ್ದರು. ದರ್ಶನ್ ಗೆ ನಾಯಕಿಯಾಗಿ ನಟಿ ಮಾನ್ಯ ಬಣ್ಣ ಹಚ್ಚಿದ್ದರು. ಸಾಧು ಕೋಕಿಲಾ ಅವರು ಸಂಗೀತ ನೀಡಿದ್ದರು.

  English summary
  Challenging star Darshan super hit movie Shastri is re releasing on June 9th. Movie was produced by Anaji Nagaraj and directed by PN Sathya. Manya is the heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X