»   » ದರ್ಶನ್ 'ಕುರುಕ್ಷೇತ್ರ'ಕ್ಕೆ ಮಹಾಗುರು ದ್ರೋಣಾಚಾರ್ಯ ಸಿಕ್ಕಾಯ್ತು.!

ದರ್ಶನ್ 'ಕುರುಕ್ಷೇತ್ರ'ಕ್ಕೆ ಮಹಾಗುರು ದ್ರೋಣಾಚಾರ್ಯ ಸಿಕ್ಕಾಯ್ತು.!

Posted By:
Subscribe to Filmibeat Kannada

ಕೌರವರು ಹಾಗೂ ಪಾಂಡವರಿಗೆ ಧನುರ್ವಿದ್ಯೆ ಕಲಿಸಿದ ಗುರು 'ದ್ರೋಣಾಚಾರ್ಯ'. 'ಕುರುಕ್ಷೇತ್ರ' ಯುದ್ಧದಲ್ಲಿ 'ಕೌರವರ' ಸೈನ್ಯವನ್ನು ಮುನ್ನಡೆಸಿದ ದಂಡನಾಯಕ 'ದ್ರೋಣಾಚಾರ್ಯ'.

ಮಹಾಭಾರತದಲ್ಲಿ ಆತ್ಮಗೌರವಕ್ಕೆ ಹೆಸರಾದ ದ್ರೋಣಾಚಾರ್ಯ ಪಾತ್ರವನ್ನ ಕನ್ನಡದ 'ಕುರುಕ್ಷೇತ್ರ' ಚಿತ್ರದಲ್ಲಿ ಯಾರು ನಿರ್ವಹಿಸಬಹುದು ಎಂಬ ಕುತೂಹಲ 'ಡಿ' ಬಾಸ್ ಅಭಿಮಾನಿಗಳಲ್ಲಿ ಇತ್ತು.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

ಆ ಕುತೂಹಲಕ್ಕೆ ಇವತ್ತು ತೆರೆಬಿದ್ದಿದೆ. 'ದಾಸ' ದರ್ಶನ್ ಅಭಿನಯಿಸುವ 50ನೇ ಚಿತ್ರ 'ಕುರುಕ್ಷೇತ್ರ'ದಲ್ಲಿನ 'ದ್ರೋಣಾಚಾರ್ಯ' ಪಾತ್ರಕ್ಕೆ ಕನ್ನಡದ ಹಿರಿಯ ನಟರೊಬ್ಬರು ಆಯ್ಕೆ ಆಗಿದ್ದಾರೆ. ಅವರು ಯಾರು ಅಂದ್ರೆ....

ಇವರೇ ನೋಡಿ ಕನ್ನಡದ 'ದ್ರೋಣಾಚಾರ್ಯ'

'ಕುರುಕ್ಷೇತ್ರ' ಚಿತ್ರದಲ್ಲಿ ದ್ರೋಣಾಚಾರ್ಯ ಪಾತ್ರಕ್ಕೆ ಆಯ್ಕೆ ಆಗಿರುವವರು ಬೇರೆ ಯಾರೂ ಅಲ್ಲ, ಹಿರಿಯ ನಟ ಶ್ರೀನಿವಾಸ್ ಮೂರ್ತಿ.

ಗುರು ದ್ರೋಣಾಚಾರ್ಯ ಆಗುವ ಅವಕಾಶ

ಹತ್ತತ್ರ 300 ಚಿತ್ರಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಶ್ರೀನಿವಾಸ್ ಮೂರ್ತಿ ತರಹೇವಾರಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಈಗ ಅವರಿಗೆ ಗುರು ದ್ರೋಣಾಚಾರ್ಯ ಆಗುವ ಅವಕಾಶ ಸಿಕ್ಕಿದೆ.

ಧೃತರಾಷ್ಟ್ರನಾಗಿ ಶ್ರೀನಾಥ್

ಇನ್ನೂ 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ತಂದೆ ಧೃತರಾಷ್ಟ್ರನ ಪಾತ್ರದಲ್ಲಿ ನಟ ಶ್ರೀನಾಥ್ ಮಿಂಚಲಿದ್ದಾರೆ ಎನ್ನುತ್ತಿವೆ ಮೂಲಗಳು.['ಕುರುಕ್ಷೇತ್ರ'ದಲ್ಲಿ 'ದುರ್ಯೋಧನ' ದರ್ಶನ್ ತಂದೆ 'ಧೃತರಾಷ್ಟ್ರ' ಯಾರು.?]

ಶ್ರೀಕೃಷ್ಣನಾಗಿ ವಿ.ರವಿಚಂದ್ರನ್

'ಕುರುಕ್ಷೇತ್ರ' ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಕಾಣಿಸಿಕೊಳ್ಳುವುದು ಕೂಡ ಪಕ್ಕಾ ಆಗಿದೆ.[ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!]

ಜುಲೈನಲ್ಲಿ ಸೆಟ್ಟೇರಲಿರುವ 'ಕುರುಕ್ಷೇತ್ರ'

ದುರ್ಯೋಧನ ಪಾತ್ರದಲ್ಲಿ ದರ್ಶನ್ ಅಬ್ಬರಿಸುವ 'ಕುರುಕ್ಷೇತ್ರ' ಸಿನಿಮಾ ಜುಲೈ 23 ರಂದು ಸೆಟ್ಟೇರಲಿದೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Kannada Actor Srinivasa Murthy to play Dronacharya in Darshan starrer Kannada Movie 'Kurukshetra'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada