»   » 'ಉರ್ವಿ' & 'ಶುದ್ಧಿ' ಬಿಡುಗಡೆ ಯಾವಾಗ?

'ಉರ್ವಿ' & 'ಶುದ್ಧಿ' ಬಿಡುಗಡೆ ಯಾವಾಗ?

Posted By:
Subscribe to Filmibeat Kannada

ಬೆಳ್ಳಿತೆರೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಪ್ರಯೋಗಾತ್ಮಕ ಸಿನಿಮಾ ಗಳು ಈಗ ಸದ್ದು ಮಾಡುತ್ತಿವೆ. ಆ ಚಿತ್ರಗಳ ಪೈಕಿ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಲ್ಲಿ ಸದ್ಯದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿರುವುದು 'ಉರ್ವಿ' & 'ಶುದ್ಧಿ'.

'ಉರ್ವಿ' & 'ಶುದ್ಧಿ' ಎರಡು ಸಹ ಮಹಿಳಾ ಪ್ರಧಾನ ಚಿತ್ರಗಳಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಆಗಿವೆ. ಈ ಸಿನಿಮಾಗಳು ಈಗಾಗಲೇ ಟ್ರೈಲರ್ ಮತ್ತು ಪೋಸ್ಟರ್ ಗಳಿಂದಲೇ ಸಿನಿ ಪ್ರೇಮಿಗಳಲ್ಲಿ ಚಿತ್ರ ನೋಡುವ ಕಾತುರ ಹೆಚ್ಚಿಸಿದ್ದು, ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದ್ದು 'ಉರ್ವಿ' & 'ಶುದ್ಧಿ' ಒಂದೇ ದಿನ ತೆರೆ ಮೇಲೆ ಬರುತ್ತಿವೆ.[ಮಹಿಳಾ ಪ್ರಧಾನ ಚಿತ್ರ 'ಉರ್ವಿ' ಟ್ರೈಲರ್ ನೋಡಿದ್ರಾ?]

ಹೌದು, 'ಉರ್ವಿ' ಮತ್ತು ಶುದ್ಧಿ' ಎರಡು ಸಿನಿಮಾಗಳು ಒಂದೇ ದಿನ ಮಾರ್ಚ್ 17 ರಂದು ತೆರೆ ಮೇಲೆ ಬರುತ್ತಿವೆ. ಎರಡು ಚಿತ್ರಗಳು ಮಹಿಳಾ ಶೋಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಪ್ರಯೋಗಾತ್ಮಕ ಸಿನಿಮಾ ಎಂದು ಸೆನ್ಷೇಷನ್ ಕ್ರಿಯೇಟ್ ಮಾಡಿವೆ. ಆದರೆ ಮೊದಲು ಯಾವ ಸಿನಿಮಾ ನೋಡಬೇಕು ಎಂಬುದನ್ನ ನೀವೇ ನಿರ್ಧರಿಸಿಕೊಳ್ಳಿ.

Kannada Movie 'Shuddhi' and 'Urvi' Releasing on march 17th

'ಲೂಸಿಯ' ಬೆಡಗಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅವರ ಮುಖ್ಯ ಭೂಮಿಕೆಯಲ್ಲಿ 'ಉರ್ವಿ' ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಈ ಮೂವರು ನಟಿಯರು ಸಹ ಶಕ್ತಿ, ಯುಕ್ತಿ ಮತ್ತು ಭಕ್ತಿ ಎಂಬ ಮೂರು ಪ್ರಧಾನ ಅಂಶಗಳನ್ನು ನಾಯಕಿಯರಾಗಿ ಪ್ರತಿನಿಧಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ಚೆನ್ನೈ, ಕೊಚ್ಚಿ, ಹೈದೆರಾಬಾದ್, ಮುಂಬೈ ನಲ್ಲಿಯೂ ತೆರೆಕಾಣುತ್ತಿದೆ. 'ಉರ್ವಿ' ಚಿತ್ರಕ್ಕೆ ಪ್ರದೀಪ್ ಆಕ್ಷನ್ ಕಟ್ ಹೇಳಿದ್ದಾರೆ.

Kannada Movie 'Shuddhi' and 'Urvi' Releasing on march 17th

'ಶುದ್ಧಿ' ಚಿತ್ರವು ಸಹ ಈ ವಾರ ತೆರೆಗೆ ಬರುತ್ತಿದ್ದು, 'ಯಾರೇ ಕೂಗಾಡಲಿ' ಖ್ಯಾತಿಯ ನಿವೇದಿತಾ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿದೆ. ಜೊತೆಗೆ ಅಮೃತಾ ಕರಗದ ಮತ್ತು ಲಾರೆನ್ ಸ್ಪಾರ್ಟನೊ ಅಭಿನಯಿಸಿದ್ದಾರೆ. ಶುದ್ಧಿ ಚಿತ್ರವನ್ನು ಆದರ್ಶ್ ಎಚ್.ಈಶ್ವರಪ್ಪ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾನ್ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದಾರೆ.[ಅಮೆರಿಕ ಹುಡುಗಿಯ ಭಾರತದ ಜರ್ನಿ 'ಶುದ್ಧಿ' ಸೆನ್ಸಾರ್ ಆಯ್ತು]

English summary
Kannada Actress Sruthi Hariharan, Shradda srinath starrer 'Urvi' and 'Yaare Kugaadali' Fame Nivedita starrer 'Shuddhi movies are releasing on March 17.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada