For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!

  |

  'ಕೆಜಿಎಫ್ 2' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ನಟ ಬಿಎಸ್ ಅವಿನಾಶ್ ಕಾರು ಅಪಘಾತಗೊಂಡಿದೆ. 'ಕೆಜಿಎಫ್ 2' ಸಿನಿಮಾದ ಎರಡೂ ಸರಣಿಯಲ್ಲಿ ಆಂಡ್ರೂವ್ ಪಾತ್ರದಲ್ಲಿ ಅವಿನಾಶ್ ನಟಿಸಿ ಜನಮನ ಗೆದ್ದಿದ್ದಾರೆ. ಇವರ ಬೆಂಜ್ ಕಾರು ಅಪಘಾತಕ್ಕೀಡಾಗಿದೆ.

  ಇಂದು (ಜೂನ್ 29) ಬೆಳಗ್ಗೆ 'ಕೆಜಿಎಫ್ 2' ನಟ ಬಿ ಎಸ್ ಅವಿನಾಶ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿದೆ. ಅವರು ಕಾರು ಜಖಂಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?! ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!

  ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಅಪಘಾತ

  Recommended Video

  KGF ನಟನ ಬೆಂಜ್ ಕಾರು ನಜ್ಜು ಗುಜ್ಜು | B. S. Avinash *Sandalwood

  ಇಂದು (ಜೂನ್ 29) ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ಅವಿನಾಶ್ ಅನಿಲ್ ಕುಂಬ್ಳೆ ಸರ್ಕಲ್ ಬಳಿ ತೆರಳುತ್ತಿದ್ದರು. ಎಂ ರಸ್ತೆಗೆ ತೆರಳುತ್ತಿದ್ದರು. ಈ ವೇಳೆ ಅವರ ಬೆಂಜ್ ಕಾರಿಗೆ ಗೂಡ್ಡ್ ಲಾರಿ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಅವರ ಕಾರು ಜಖಂಗೊಂಡಿತ್ತು.

  ಗೂಡ್ಸ್‌ ಲಾರಿ ಚಾಲಕ ಶಿವಗೌಡನನ್ನು ಕಬ್ಬನ್ ಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಲ್ಲಿ ಸ್ಯಾಂಡಲ್‌ವುಡ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  'ಕೆಜಿಎಫ್' ಸಿನಿಮಾ ಬಳಿಕ ಹೆಚ್ಚಿದ ಬೇಡಿಕೆ

  'ಕೆಜಿಎಫ್' ಸಿನಿಮಾದಲ್ಲಿ ಮಿಂಚಿದ ಖಳನಾಯಕ ಬಿಎಸ್ ಅವಿನಾಶ್ ಬೆಳಗ್ಗೆ ಆರು ಗಂಟೆಗೆ ಜಿಮ್ಮಿಗೆ ಹೊರಟಿದ್ದರು ಎನ್ನಲಾಗಿದೆ ಈ ವೇಳೆ ಗೂಡ್ಸ್ ಚಾಲಕ ಅಜಾರೂಕತೆಯಿಂದ ಗೂಡ್ಸ್ ಲಾರಿ ಬೆಂಜ್ ಕಾರಿಗೆ ಬಂದು ಗುದ್ದಿದೆ ಎನ್ನಲಾಗಿದೆ.

  KGF Chapter 2 Actor BS Avinash Met With Accident In Bangalore

  ಕೆಜಿಎಫ್ ಎರಡೂ ಸಿರೀಸ್‌ನಲ್ಲಿ ಆಂಡ್ರೂವ್ ಪಾತ್ರದಲ್ಲಿ ಬಿಎಸ್ ಅವಿನಾಶ್ ಕಾಣಿಸಿಕೊಂಡಿದ್ದರು. ಅವಿನಾಶ್ ಖಳನಾಯಕನ ಲುಕ್‌ಗೆ ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಕನ್ನಡದಲ್ಲಿ ಮತ್ತೊಬ್ಬ ಸ್ಟಾರ್ ಖಳನಾಯಕ ಹುಟ್ಟಿಕೊಂಡು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಿಂದಲೂ ಆಫರ್‌ಗಳು ಬರುತ್ತಿವೆಯಂತೆ.

  English summary
  KGF Chapter 2 Actor BS Avinash Met With Accident In Bangalore, Know More.
  Thursday, June 30, 2022, 9:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X