»   » 'ಡಬ್ಬಿಂಗ್' & 'ಸರಿಗಮಪ' ಸುಹಾನ ಬಗ್ಗೆ ಕಿಚ್ಚ ಸುದೀಪ್ ಮಾತು..

'ಡಬ್ಬಿಂಗ್' & 'ಸರಿಗಮಪ' ಸುಹಾನ ಬಗ್ಗೆ ಕಿಚ್ಚ ಸುದೀಪ್ ಮಾತು..

Posted By:
Subscribe to Filmibeat Kannada

ರಿಮೇಕ್ ಸಿನಿಮಾ ಗಳಿಗೂ ಹೆಚ್ಚು ಒತ್ತು ನೀಡದೇ ಸ್ವಮೇಕ್ ಚಿತ್ರಗಳಲ್ಲಿ ತೊಡಗಿಕೊಳ್ಳಬೇಕಾದ ಸ್ಯಾಂಡಲ್ ವುಡ್ ನಲ್ಲಿ ಕಳೆದ ಹಲವು ದಿನಗಳಿಂದ 'ಡಬ್ಬಿಂಗ್' ಬೂತ ವಿವಾದ ಸೃಷ್ಟಿಸಿದೆ. ಬೆಳ್ಳಿತೆರೆಯಲ್ಲಿ 'ಡಬ್ಬಿಂಗ್' ವಿರೋಧಿಸಿ ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಬೀದಿಗಿಳಿದು ಪ್ರತಿಭಟನೆ ಮಾಡಿದರು.[ಡಬ್ಬಿಂಗ್ ಮಾಡೋರಿಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಂಕರ್!]

'ಡಬ್ಬಿಂಗ್' ವಿರೋಧಿಸಿ ಮೊನ್ನೆ ನಡೆದ ಬೃಹತ್ ಜಾಥಾದಲ್ಲಿ ನವರಸ ನಾಯಕ ಜಗ್ಗೇಶ್, ನಟ ದರ್ಶನ್, ಬುಲೆಟ್ ಪ್ರಕಾಶ್, ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಜೊತೆಗೆ ಬೆಳ್ಳಿತೆರೆಯ ಇನ್ನೂ ಹಲವರು ಪ್ರತಿಭಟನೆ ವೇಳೆ ಇಲ್ಲದಿದ್ದರೂ, ತಾವು ಇರುವ ಸ್ಥಳದಿಂದಲೇ 'ಡಬ್ಬಿಂಗ್' ವಿರೋಧಿಸಿ, ವಾಗ್ದಾಳಿ ಮಾಡಿದರು.[ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಡಿಚ್ಚಿ ಕೊಟ್ಟ 'ದಾಸ' ದರ್ಶನ್.!]

'ಹೆಬ್ಬುಲಿ' ಯಶಸ್ಸಿನಲ್ಲಿರುವ ಕಿಚ್ಚ ಸುದೀಪ್ ಮತ್ತು ಚಿತ್ರತಂಡ ದಿಢೀರ್ ನಡೆದ 'ಡಬ್ಬಿಂಗ್' ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಿರಲಿಲ್ಲ. ಆದರೆ 'ಹೆಬ್ಬುಲಿ' ವಿಜಯಯಾತ್ರೆಯಲ್ಲಿ ತೊಡಗಿದ್ದ ವೇಳೆಯು ಸುದೀಪ್ 'ಡಬ್ಬಿಂಗ್' ವಿರೋಧಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

ಡಬ್ಬಿಂಗ್ ಬಗ್ಗೆ ಸುದೀಪ್ ಹೇಳಿದ್ದೇನು?

ಮೊನ್ನೆ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ 'ಡಬ್ಬಿಂಗ್' ವಿರೋಧಿ ಪ್ರತಿಭಟನೆ ನಡೆಯಿತು. ಆದರೆ ಈ ವೇಳೆ ಸುದೀಪ್ 'ಹೆಬ್ಬುಲಿ' ವಿಜಯಯಾತ್ರೆಯಲ್ಲಿದ್ದ ಕಾರಣ, ಮಾಧ್ಯಮದವರಿಂದ ಡಬ್ಬಿಂಗ್ ವಿರೋಧಿ ಹೋರಾಟದ ಬಗ್ಗೆ ಸಾಮಾನ್ಯವಾಗಿ ಪ್ರಶ್ನೆಯೊಂದು ತೂರಿಬಂದಿತ್ತು. ಇದಕ್ಕೆ ಉತ್ತರಿಸಿದ ಸುದೀಪ್ ಹೇಳಿದ್ದು....

ಡಬ್ಬಿಂಗ್ ಹೋರಾಟ ತುಂಬಾ ದಿನದಿಂದ ನಡೆಯುತ್ತಿದೆ

"ನಮಗೆ ತಂದೆ-ತಾಯಿ ತುಂಬಾ ಇಂಪಾರ್ಟೆಂಟ್, ಅವರ ಪ್ರೀತಿ ಮುಖ್ಯ. ಆ ಪ್ರೀತಿ ಎಲ್ಲೇ ಇದ್ರು ಇರುತ್ತೆ. ಪಕ್ಕ ಇದ್ರೆ ಮಾತ್ರ ಪ್ರೀತಿ ಇರುತ್ತೆ ಅಂತ ಅಲ್ಲಾ" - ಕಿಚ್ಚ ಸುದೀಪ್

ಕನ್ನಡ ನಮ್ಮದು

ಡಬ್ಬಿಂಬ್ ಹೋರಾಟದ ಬಗ್ಗೆ ಉತ್ತರಿಸುತ್ತ ಮಾತು ಮುಂದುವರೆಸಿದ ಸುದೀಪ್, "ತಂದೆ-ತಾಯಿ ಪಕ್ಕಾ ಇದ್ರೆ ಮಾತ್ರ ಪ್ರೀತಿ ಇರುತ್ತೆ ಅಂತ ಅಂನ್ಕೋಬೇಡಿ. ದೇಶದಲ್ಲಿ ಎಲ್ಲೇ ಇದ್ರು ಅವರಿಗೆ ಕರೆ ಮಾಡ್ತೀವಿ, ಮಾತಡ್ತೀವಿ ಎಂದ ಮೇಲೆ, ಕನ್ನಡ ನಮ್ಮದೇ ತಾನೆ" ಎಂದು ಹೇಳಿದರು.

ಹೀಗೇಳೋದು ತಪ್ಪು...

ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎಂಬ ವಿಚಾರಕ್ಕೆ, " 'ಡಬ್ಬಿಂಗ್' ವಿರುದ್ಧ ಹೋರಾಟ ಜಾಥದಲ್ಲಿ ಭಾಗಿಯಾಗಿ, ವೈಯಕ್ತಿಕವಾಗಿ, ದೈಹಿಕವಾಗಿ ಅಲ್ಲಿದ್ರೆ ಮಾತ್ರ ಕನ್ನಡ ಪರ ಇದೀವಿ ಅನ್ನೋದು ತಪ್ಪಾಗುತ್ತದೆ" ಎಂದು ಸುದೀಪ್ ಪ್ರತಿಕ್ರಿಯಿಸಿದರು.

ರ್ಯಾಲಿ ತುಂಬಾ ದಿನದಿಂದ ನಡೆಯುತ್ತಿದೆ..

"ನಮ್ಮ ಹೋರಾಟವನ್ನು ಎಲ್ಲಿದ್ದರು ಮಾಡುತ್ತೇವೆ. ದಿಢೀರ್ ಎಂದು ನಡೆದ ಪ್ರತಿಭಟನೆಯಲ್ಲಿ ನಾವು ಭಾಗವಹಿಸಲು ಆಗಿಲ್ಲ. ಹಾಗಂತ ನಮ್ಮ ಚಿತ್ರರಂಗವನ್ನು ನಾವು ಬಿಟ್ಟುಕೊಡುವುದಿಲ್ಲ. ನಾವು ಎಲ್ಲಿದ್ದರೂ ಕನ್ನಡ ನಮಗೆ ತಂದೆ ತಾಯಿ ಇದ್ದಹಾಗೆ" ಎಂದು ಹೇಳಿದ ಸುದೀಪ್ 'ಡಬ್ಬಿಂಗ್' ಬೇಡ ಎಂಬ ಕರೆನೀಡಿದರು.

'ಸರಿಗಮಪ' ಸುಹಾನ ಬಗ್ಗೆ ಸುದೀಪ್ ಪ್ರತಿಕ್ರಿಯೆ

'ಸರಿಗಮಪ' ಸುಹಾನ ಧರ್ಮದ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ "ಸುಹಾನಾ ಖಂಡಿತವಾಗಿಯೂ ಹೆಮ್ಮೆ. ಅವರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ. ಮುಂದುವರೆಯುತ್ತಾರೆ" ಎಂದು ಸುದೀಪ್ ಪ್ರತಿಕ್ರಿಯಿಸಿದರು.

English summary
Kannada Actor Kiccha Sudeep speaks on Dubbing and saregamapa 13 contestant Suhana, while he was on 'Hebbuli' Vijayayatre.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada