For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ಕಾರು ಸೋಲ್ಡ್! ಕಾರು ಗೆದ್ದ ಲಕ್ಕಿ ಬಾಯ್ ಯಾರು?

  By Suneel
  |

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ 150 ದಿನಗಳ ಭರ್ಜರಿ ಪ್ರದರ್ಶನ ಕಂಡಿದ್ದು, ಚಿತ್ರತಂಡ ಸಕ್ಸಸ್ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿದೆ.['ಕಿರಿಕ್ ಪಾರ್ಟಿ' ಗ್ಯಾಂಗ್ ನ ಸಕ್ಸಸ್ ಪಾರ್ಟಿ ಸಿಕ್ಕಾಪಟ್ಟೆ ಕಲರ್ ಫುಲ್]

  ಅಂದಹಾಗೆ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಬಳಸಿದ ಕಾಂಟೆಸ್ಸಾ ಕಾರು ಚಿತ್ರದಲ್ಲಿ ಅಭಿನಯಿಸಿದ ನಟರಷ್ಟೇ ಗಮನವನ್ನು ಸೆಳೆದಿತ್ತು. ಚಿತ್ರ ಮುಗಿದ ನಂತರ ಈ ಕಾರನ್ನು ಹಾರಾಜು ಹಾಕಿ ಅದರ ಹಣವನ್ನು ಚಿತ್ರತಂಡ ಸಮಾಜ ಸೇವೆಗೆ ಬಳಸುವುದಾಗಿ ಹೇಳಿತ್ತು. ಅದರಂತೆ ಈಗ ಕಾರು ಮಾರಾಟವಾಗಿದ್ದು, ಕಾರಿನ ಹಣವನ್ನು ಚಿತ್ರತಂಡ ಹೇಳಿದಂತೆ ಸಮಾಜ ಸೇವೆಗೆ ಬಳಸಿದೆ.[ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!]

  ಚಿತ್ರದ ಕಲಾವಿದರಷ್ಟೇ ಸಿನಿಪ್ರಿಯರಿಗೆ ಇಷ್ಟವಾಗಿದ್ದ 'ಕಿರಿಕ್ ಪಾರ್ಟಿ'ಯ ಆ ಕಾಂಟೆಸ್ಸಾ ಕಾರನ್ನು ಖರೀದಿಸಿರುವವರು ಯಾರು, ಕಾರಿನ ಮಾರಾಟದ ಹಣವನ್ನು ಯಾರಿಗೆ ಕೊಡಲಾಯಿತು ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿರಿ..

  'ಕಿರಿಕ್ ಪಾರ್ಟಿ' ಕಾರು ಮಾರಾಟವಾಗಿದೆ

  'ಕಿರಿಕ್ ಪಾರ್ಟಿ' ಕಾರು ಮಾರಾಟವಾಗಿದೆ

  'ಕಿರಿಕ್ ಪಾರ್ಟಿ' ಚಿತ್ರತಂಡ ಹಲವು ದಿನಗಳ ಹಿಂದೆ Auto Allot ಎಂಬ ಆನ್ ಲೈನ್ ತಾಣದಲ್ಲಿ ಕಾಂಟೆಸ್ಸಾ ಕಾರನ್ನು ಹಾರಾಜಿಗೆ ಇಟ್ಟಿತ್ತು. ಆ ಕಾರನ್ನು ಈಗ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಖರೀದಿಸಿದ್ದಾರೆ.

  ಕಾಂಟೆಸ್ಸಾ ಕಾರು ಖರೀದಿಸಿದ ಎಂಜಿನಿಯರ್ ಯಾರು?

  ಕಾಂಟೆಸ್ಸಾ ಕಾರು ಖರೀದಿಸಿದ ಎಂಜಿನಿಯರ್ ಯಾರು?

  ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿರುವ ಬೆಳಗಾವಿ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ರವಿ ಕೋರೆ ಎಂಬುವವರು ಕಾರನ್ನು ಹರಾಜಿನಲ್ಲಿ ಗೆದ್ದುಕೊಂಡಿದ್ದಾರೆ. ಇವರಿಗೆ ಚಿತ್ರದ ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ನಲ್ಲಿ ಅವರ ಫೋಟೋ ಹಾಕಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

  ಮಾತು ಉಳಿಸಿಕೊಂಡ ಕಿರಿಕ್ ಪಾರ್ಟಿ ತಂಡ

  ಮಾತು ಉಳಿಸಿಕೊಂಡ ಕಿರಿಕ್ ಪಾರ್ಟಿ ತಂಡ

  'ಕಿರಿಕ್ ಪಾರ್ಟಿ' ಚಿತ್ರತಂಡ ತಾನು ಕೊಟ್ಟ ಮಾತಿನಂತೆ ಕಾರು ಮಾರಾಟದ ಹಣಕ್ಕೆ ತಮ್ಮ ಕೈಯಿಂದಲೂ ಒಂದಷ್ಟು ಹಣಹಾಕಿ 4 ಲಕ್ಷ ರೂಗಳನ್ನು ಬೆಂಗಳೂರಿನ ಜ್ಯೋತಿ ಮಹಿಳಾ ಸಂಘಕ್ಕೆ ನೀಡಿದೆ.

  ಚಿತ್ರದ ಮಾದರಿಯಲ್ಲೇ ಸಹಾಯ

  ಚಿತ್ರದ ಮಾದರಿಯಲ್ಲೇ ಸಹಾಯ

  ಕಾಂಟೆಸ್ಸಾ ಕಾರನ್ನು ಚಿತ್ರಕ್ಕಾಗಿ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರದ ಕೊನೆಯಲ್ಲಿ ನಾಯಕ ರಕ್ಷಿತ್ ಶೆಟ್ಟಿ ಆ ಕಾರನ್ನು ಸೇಲ್ ಮಾಡಿ ಬಂದ ಹಣವನ್ನು ವೇಶ್ಯೆಯೊಬ್ಬಳ ಮಗಳ ಶಿಕ್ಷಣಕ್ಕೆ ನೀಡಿದ್ದ. ಅಂತೆಯೇ ಈಗ ನಿಜವಾಗಿಯೂ ಚಿತ್ರದ ಮಾದರಿಯಲ್ಲೇ ಚಿತ್ರತಂಡ ಕಾರಿನ ಹಣವನ್ನು ವೇಶ್ಯೆಯರ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಜ್ಯೋತಿ ಮಹಿಳಾ ಸಂಘಕ್ಕೆ ನೀಡಿದೆ.

  English summary
  Contessa Car, which used in Actor Rakshit Shetty and Rashmika Mandanna Starrer 'Kirik Party' Film was sold to Mr. Ravi Kore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X