»   » 'ಕಿರಿಕ್ ಪಾರ್ಟಿ' ಗ್ಯಾಂಗ್ ನ ಸಕ್ಸಸ್ ಪಾರ್ಟಿ ಸಿಕ್ಕಾಪಟ್ಟೆ ಕಲರ್ ಫುಲ್

'ಕಿರಿಕ್ ಪಾರ್ಟಿ' ಗ್ಯಾಂಗ್ ನ ಸಕ್ಸಸ್ ಪಾರ್ಟಿ ಸಿಕ್ಕಾಪಟ್ಟೆ ಕಲರ್ ಫುಲ್

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ 150 ದಿನಗಳನ್ನು ಪೂರೈಸಿ ಯಶಸ್ವಿ ಸಿನಿಮಾ ಅಂತ ಕರೆಯಿಸಿಕೊಂಡಿದೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ಚಿತ್ರತಂಡ ಇತ್ತೀಚಿಗಷ್ಟೆ ಚಿತ್ರದ ಸಕ್ಸಸ್ ಪಾರ್ಟಿಯನ್ನು ಅದ್ಧೂರಿಯಾಗಿ ಮಾಡಿದೆ.

ಜೂನ್ 3 ರಂದು ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಈ ಕಾರ್ಯಕ್ರಮ ಸಖತ್ ಕಲರ್ ಫುಲ್ ಆಗಿತ್ತು. 'ಕಿರಿಕ್ ಪಾರ್ಟಿ' ಚಿತ್ರದ ಸಕ್ಸಸ್ ಪಾರ್ಟಿಯ ಝಲಕ್ ಮುಂದಿದೆ ಓದಿ...['ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ]


'ಕಿರಿಕ್ ಪಾರ್ಟಿ' ಟೀಂ

ಇಡೀ 'ಕಿರಿಕ್ ಪಾರ್ಟಿ' ಚಿತ್ರತಂಡ 150ನೇ ದಿನದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಎಲ್ಲರೂ ಸಖತ್ ಎಂಜಾಯ್ ಮಾಡಿದ್ದರು.


ರಕ್ಷಿತ್ - ರಶ್ಮಿಕಾ

'ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಕಾರ್ಯಕ್ರಮದಲ್ಲಿ ಮಿರ ಮಿರ ಮಿಂಚಿದ್ದರು. ರಶ್ಮಿಕಾ ಗೋಲ್ಡನ್ ಕಲರ್ ಸೀರೆಯಲ್ಲಿ ಗಮನ ಸೆಳೆದರು.[ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]


ರಿಶಬ್ ಶೆಟ್ಟಿ ದಂಪತಿ

ಕೆಲ ತಿಂಗಳ ಹಿಂದೆಯಷ್ಟೇ ಮದುವೆ ಆದ ನಿರ್ದೇಶಕ ರಿಶಬ್ ಶೆಟ್ಟಿ ತಮ್ಮ ಪತ್ನಿಯೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.


ಸಂಯುಕ್ತ ಡ್ಯಾನ್ಸ್

ಕಿರಿಕ್ ಹುಡುಗಿ ಸಂಯುಕ್ತ ಕಾರ್ಯಕ್ರಮದಲ್ಲಿ ಒಂದು ಡ್ಯಾನ್ಸ್ ಮಾಡಿ ಸಕ್ಸಸ್ ಪಾರ್ಟಿಯ ಜೋಶ್ ಹೆಚ್ಚಿಸಿದರು.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]


ಅಕುಲ್ ಸಾರಥ್ಯ

'ಕಿರಿಕ್ ಪಾರ್ಟಿ' ಸಕ್ಸಸ್ ಕಾರ್ಯಕ್ರಮದ ನಿರೂಪಣೆಯನ್ನು ಅಕುಲ್ ಬಾಲಾಜಿ ಮಾಡಿದ್ದರು. ಎಲ್ಲರ ಕಾಲೆಳೆದು ಅಕುಲ್ ವೀಕ್ಷಕರನ್ನು ನಗಿಸಿದರು.


ರಂಗಿತರಂಗ ಟೀಂ ಹಾಜರಿ

ಕಿರಿಕ್ ಪಾರ್ಟಿ ಸಿನಿಮಾದ ಸಂಭ್ರಮದಲ್ಲಿ ರಂಗಿತರಂಗ ಚಿತ್ರತಂಡ ಸಹ ಭಾಗಿಯಾಗಿತ್ತು.[ಅಭಿಮಾನಿಗಳ ಕದನದ ಕುರಿತು ರಕ್ಷಿತ್ ಶೆಟ್ಟಿ ಮಾಡಿರುವ ಕಾಮೆಂಟ್ ಇದು.!]


ನಟಿಯರ ಸಾಥ್

ನಟಿ ಮೇಘನಾ ಮತ್ತು ಯಜ್ಞಾ ಶೆಟ್ಟಿ ಕಾರ್ಯಕ್ರಮದ ರಂಗನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದರು.


ಅತಿಥಿಗಳು

ಹಿರಿಯ ನಿರ್ದೇಶಕರಾದ ಭಗವಾನ್ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು.['ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ']


ಪ್ರಶಸ್ತಿ

150ನೇ ದಿನದ ಸಂಭ್ರಮದಲ್ಲಿ ಇಡೀ ಚಿತ್ರತಂಡಕ್ಕೆ ಪ್ರಶಸ್ತಿ ನೀಡಿ ಅವರ ಶ್ರಮವನ್ನು ಗೌರವಿಸಲಾಯಿತು.


ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರ

'ಕಿರಿಕ್ ಪಾರ್ಟಿ' ಚಿತ್ರದ ಸಕ್ಸಸ್ ಪಾರ್ಟಿ ಕಾರ್ಯಕ್ರಮ ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.


English summary
Kannada Actor Rakshit Shetty Starrer 'Kirik Party' 150 Days Celebration at Innovative Film City. Check out the Pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada