»   » 'ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ

'ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ನೂರು ದಿನ ಪೂರೈಸಿರುವ ಈ ಸಿನಿಮಾ ಇಂದಿಗೆ (ಮೇ 27) ಸರಿಯಾಗಿ 150 ದಿನಗಳನ್ನು ಪೂರೈಸಿದೆ. ಇದೇ ಯಶಸ್ಸನ್ನ ಅದ್ದೂರಿಯಾಗಿ ಸಂಭ್ರಮಿಸಲು 'ಕಿರಿಕ್ ಪಾರ್ಟಿ' ಚಿತ್ರತಂಡ ಪ್ಲಾನ್ ಮಾಡಿದೆ.['ಕಿರಿಕ್ ಪಾರ್ಟಿ' ನೋಡಿ ಫುಲ್ ಖುಷ್ ಆದ ಭಾರತ ಕ್ರಿಕೆಟ್ ತಂಡದ ಆಟಗಾರ]

ಇದೇ ಜೂನ್ 3ಕ್ಕೆ ಬಿಡದಿಯ ಇನೋವಿಟಿವ್ ಫಿಲ್ಮ್ ಸಿಟಿಯಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ 150ನೇ ದಿನದ ಸಂಭ್ರಮಾಚಾರಣೆ ನಡೆಯಲಿದ್ದು, ರಕ್ಷಿತ್ ಶೆಟ್ಟಿ ಅಂಡ್ ಟೀಂ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಕೂಡ ಭಾಗಿಯಾಗಲಿದ್ದಾರಂತೆ.[ವಿಡಿಯೋ: ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ 'ಕಿರಿಕ್ ಪಾರ್ಟಿ' ಹಾಡು.. 'ಅಲೆಲೆಲೆ..']

Kirik Party Movie 150 Days Celebration

ಡ್ಯಾನ್ಸ್, ಹಾಡು ಹೀಗೆ ಮನರಂಜನೆ ಕಾರ್ಯಕ್ರಮವಿರಲಿದ್ದು, ಜೊತೆಗೆ 'ಕಿರಿಕ್ ಪಾರ್ಟಿ' ಚಿತ್ರದ ಯಶಸ್ಸಿಗೆ ಕಾರಣವಾದ ಚಿತ್ರತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸುವ ಉದ್ದೇಶ ಸಹ ಇದಾಗಿದೆಯಂತೆ.['ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ']

ಅಂದ್ಹಾಗೆ, 'ಕಿರಿಕ್ ಪಾರ್ಟಿ' ಸಿನಿಮಾ ಬೆಂಗಳೂರಿನ ಸ್ವಪ್ನ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಯಶಸ್ವಿಯಾಗಿ 150 ದಿನಗಳನ್ನು ಪೂರೈಸಿದೆ. ರಿಶಬ್ ಶೆಟ್ಟಿ ನಿರ್ದೇಶನ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿದ್ದು, ಸಂಯುಕ್ತ ಹೆಗಡೆ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ನಾಯಕಿಯರಿದ್ದರು.[ರಕ್ಷಿತ್ ಶೆಟ್ಟಿ ಮಾಡಿದ ಈ ಒಳ್ಳೆ ಕೆಲಸಕ್ಕೆ ಚಪ್ಪಾಳೆ ಹೊಡೆಯಲೇಬೇಕು!]

English summary
Kannada Actor Rakshit Shetty Starrer Kirik Party 150 Days Celebration. The Movie Directed By Rishab Shetty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada