Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರಗ್ಸ್ ಪ್ರಕರಣ: ನಟಿಯರ ಖಾಸಗಿ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಸಿಡಿದೆದ್ದ ನಟಿ ಪಾರುಲ್
ಸ್ಯಾಂಡಲ್ ವುಡ್ ನಟಿ ಪಾರುಲ್ ಯಾದವ್ ಡ್ರಗ್ಸ್ ಪ್ರಕರಣದ ತನಿಖೆ ವಿಧಾನದ ವಿರುದ್ಧ ಸಿಡಿದೆದ್ದಿದ್ದಾರೆ. ಮಾದಕ ವಸ್ತು ಸೇವನೆಯ ಪಿಡುಗು ಎಲ್ಲಾ ವಿಭಾಗದಲ್ಲಿಯೂ ಇದೆ. ಆದರೆ ಚಿತ್ರರಂಗದವರನ್ನ ಮಾತ್ರ ಹೈಲೆಟ್ ಮಾಡುತ್ತಿರುವುದು ಎಷ್ಟು ಸರಿ ಎಂದು ನಟಿ ಪಾರುಲ್ ಪ್ರಶ್ನಿಸಿದ್ದಾರೆ.
ನಟಿಯರನ್ನು ಬಂಧಿಸಿ ಅವರ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತಿರುವ ವಿರುದ್ಧ ಪಾರುಲ್ ಅಸಮಾಧಾನ ಹೊರಹಾಕಿದ್ದಾರೆ. ದೇಶದಲ್ಲಿ ಭಯಾನಕ ಸಮಸ್ಯೆಗಳು ಸಾಕಷ್ಟಿವೆ. ಆದರೆ ಅಂತಹ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ, ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಬೇಕು ಅಂತನೆ ಹೆಣೆದಿರುವ ತಂತ್ರವಿದು ಎಂದು ಪಾರುಲ್ ಹೇಳಿದ್ದಾರೆ. ಈ ಬಗ್ಗೆ ಪಾರುಲ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪತ್ರ ಬರೆದಿದ್ದಾರೆ. ಮುಂದೆ ಓದಿ...
ಮತ್ತೆ
ಐಪಿಎಲ್
ಶುರುವಾಗಿದ್ದಕ್ಕೆ
ಪಾರೂಲ್
ಯಾದವ್
ಫುಲ್
ಖುಷ್

ಜನರ ಗಮನ ಬೇರೆಡೆ ಸೆಳೆಯಲು ಮಾಡುತ್ತಿರುವ ಕೆಲಸವಿದು
"ಮಾದಕ ವಸ್ತು ಸೇವನೆ ಗಂಭೀರ ಸಮಸ್ಯೆ ಎನ್ನುವುದು ನನಗೆ ತಿಳಿದಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲ ರೀತಿಯ ಪ್ರಯತ್ನವೂ ನಡೆಯಬೇಕು. ಡ್ರಗ್ಸ್ ಸೇವನೆಯನ್ನು ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಆದರೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಈ ಮೂವರು ಮಹಿಳೆಯರ ಮೇಲೆ ಕೇಂದ್ರೀಕರಿಸಿವೆ. ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ವಿಫಲ ಆಗಿದೆ. ಆರ್ಥಿಕತೆ ಕುಸಿದಿದೆ. ಚೀನಾದಿಂದ ಅಪಾಯ ಎದುರಾಗಿದೆ. ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರಕ್ಕೆ ಈ ವಿಚಾರ ಬೇಕಾಗಿತ್ತು ಎಂದೆನಿಸುತ್ತದೆ" ಎಂದಿದ್ದಾರೆ ಪಾರುಲ್.

ಈ ಮೂವರನ್ನು ಮಾತ್ರ ಬಂಧಿಸಿದ್ದು ಸರಿಯಲ್ಲ
"ಡ್ರಗ್ಸ್ ಪ್ರಕರಣವನ್ನು ಸೆನ್ಸೇಷನ್ ಮಾಡಿ, ದೊಡ್ಡ ಮಟ್ಟದಲ್ಲಿ ಸುದ್ದಿ ಆಗಬೇಕು ಎಂಬ ಉದ್ದೇಶದಿಂದ ಈ ಮೂವರನ್ನು ಬಂಧಿಸಲಾಗಿದೆ. ಈ ಪಿಡುಗು ಎಲ್ಲ ವಿಭಾಗದಲ್ಲಿಯೂ ಹರಡಿದೆ. ಯಾವುದೋ ಐಟಿ ಇಂಜಿನಿಯರ್ ಗಳನ್ನು ಬಂಧಿಸಿದರೆ ಅಷ್ಟು ಸುದ್ದಿ ಆಗುವುದಿಲ್ಲ. ಈ ಮೂವರನ್ನು ಮಾತ್ರ ಬಂಧಿಸಿರುವುದು ಸರಿಯಲ್ಲ" ಎಂದು ಹೇಳಿದ್ದಾರೆ.
'ಡ್ರಗ್ಸ್
ಪ್ರಕರಣದಲ್ಲಿ
ಮೂವರು
ನಟಿಯರು
ಮಾತ್ರನಾ'?
ಪಾರೂಲ್
ಯಾದವ್
ಪ್ರಶ್ನೆ

ಖಾಸಗಿ ವಿಡಿಯೋ ಲೀಕ್ ಮಾಡಿರುವುದು ಅಸಹ್ಯ ಎನಿಸುತ್ತೆ
"ದೊಡ್ಡ ರಾಜಕಾರಣಿಗಳು ಮತ್ತು ನಟರ ಹೆಸರು ಆಗಾಗ ಕೇಳಿ ಬರುತ್ತಿದ್ದರೂ ಅವರನ್ನು ಪೊಲೀಸರು ಯಾಕೆ ಬಂಧಿಸಲ್ಲ. ರಾಗಿಣಿ, ರಿಯಾ ಮತ್ತು ಸಂಜನಾಗೆ ಸಂಬಂಧಿಸಿದ ಕೆಲವು ಖಾಸಗಿ ವಿಡಿಯೋಗಳನ್ನು ಹಾಗೂ ತನಿಖೆಗೆ ಸಂಬಂಧಿಸದ ವಿಡಿಯೋಗಳನ್ನು ಪೊಲೀಸರು ಲೀಕ್ ಮಾಡುತ್ತಿರುವುದು ಅಹಸ್ಯ ಎನಿಸುತ್ತೆ." ಎಂದಿದ್ದಾರೆ.
Recommended Video

ಪೊಲೀಸರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ?
"ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ನ್ಯೂಸ್ ಚಾನೆಲ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರಾ? ಒಂದು ವಿಡಿಯೋದಲ್ಲಿ ಮಹಿಳಾ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ಸಂಜನಾರನ್ನು ಸೆರೆ ಹಿಡಿಯುತ್ತಿರುವುದು ಗೊತ್ತಾಗುತ್ತಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಸಂಸ್ಥೆ ಆಗಿರಬೇಕು. ಯೆಲ್ಲೋ ಜರ್ನಲಿಸಂ ಮಾಡುವವರಿಗೆ ಮಾಹಿತಿದಾರರಾಗಿ ಪೊಲೀಸರು ಕೆಲಸ ಮಾಡಬಾರದು. ಒಬ್ಬರ ಘನತೆಯನ್ನು ಹಾಳುಮಾಡುವ ಹಕ್ಕು ಯಾರಿಗೂ ಇಲ್ಲ. ಇದು ನಾಚಿಕೆಗೇಡು. ಜೈ ಹಿಂದ್" ಎಂದು ಪಾರುಲ್ ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.