»   » ವಿಕ್ರಮ್ 'ಐ' ಚಿತ್ರಕ್ಕೆ ಕಾಡುತ್ತಿದೆ ಪೈರಸಿ ಗ್ರಹಣ

ವಿಕ್ರಮ್ 'ಐ' ಚಿತ್ರಕ್ಕೆ ಕಾಡುತ್ತಿದೆ ಪೈರಸಿ ಗ್ರಹಣ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಚಿತ್ರ ಬಿಡುಗಡೆಗೆ ಮುನ್ನ ಪೈರಸಿ ಸಿಡಿ ಬಿಡುಗಡೆಯಾಗುತ್ತದೋ ಎಂಬ ಅಳುಕು ಯಾವುದೇ ಚಿತ್ರಕರ್ಮಿಗಳಿಗಾದರೂ ಇದ್ದೇ ಇರುತ್ತದೆ. ಭಾರಿ ಬಜೆಟ್ ಚಿತ್ರವಾದರೆ ಅವರ ಸಂಕಟ ಹೇಳತೀರದು. ಈಗ ವಿಕ್ರಮ್ ಅಭಿನಯದ 'ಐ' ಚಿತ್ರಕ್ಕೆ ಪೈರಸಿ ಸಿಡಿ ಗ್ರಹಣ ಹಿಡಿದಿದೆ. ಚಿತ್ರದ ರಿಲೀಸ್ ಗೂ ಮುನ್ನ ಐ ಚಿತ್ರದ ಸಿಡಿ ಕವರ್ ಗಳ ಚಿತ್ರ ಬಹಿರಂಗ ಮಾಡಿದೆ.

ಐ ಚಿತ್ರದ ನಕಲಿ ಸಿಡಿ ಕವರ್ ಗಳ ಚಿತ್ರಗಳು ಈಗಾಗಲೆ ಎಚ್ಚರಿಕೆ ಗಂಟೆ ಹೊಡೆಯುತ್ತಿದೆ. ಐ ಚಿತ್ರವನ್ನು ಮುಖ್ಯವಾಗಿಸಿಕೊಂಡು ನಾಲ್ಕು ಚಿತ್ರಗಳನ್ನು ಈ ಸಿಡಿಯಲ್ಲಿ ಕೊಡಲಾಗಿದೆ. ['ಐ' ಅಚ್ಚರಿ ಸಂಗತಿಗಳನ್ನು ಬಿಚ್ಚಿಟ್ಟ ವಿಕ್ರಮ್]

ಐ ಚಿತ್ರದ ಜೊತೆಗೆ ಕಾಯಲ್, ಮೀಘಮನ್, ಯಾನ್ ಚಿತ್ರಗಳನ್ನು ನೀಡಲಾಗಿದೆ. ಮತ್ತೊಂದು ಸಿಡಿಯಲ್ಲಿ ಲಿಂಗಾ, ಪೂಜೈ, ಅಜಾನ್ ಹಾಗೂ ಐ ಚಿತ್ರಗಳ ಪ್ಯಾಕೇಜ್ ನೀಡಲಾಗಿದೆ. ಈ ನಕಲಿ ಸಿಡಿಗಳನ್ನು ನಿರ್ಮಿಸಿರುವ ಸಂಸ್ಥೆ ಮಲೇಷಿಯಾ ಮೂಲದ್ದು ತಿಳಿದು ಬಂದಿದೆ.

ಸಿಂಗಪುರ, ಮಲೇಷಿಯಾ, ಇಂಡೋನೇಷಿಯಾಗಳಲ್ಲಿ ತಮಿಳು ಸಿನಿಮಾ ನಕಲಿಯಾಗುವುದರ ದೊಡ್ಡ ಜಾಲವೇ ಇರುವುದು ಎಲ್ಲರಿಗೂ ಗೊತ್ತಿರುವ ತೆರದ ಸತ್ಯವಾಗಿದೆ. ತಮಿಳು ಭಾಷೆ ಚಿತ್ರಗಳ ಜೊತೆಗೆ ಈಗೀಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳು, ಹಿಂದಿ ಚಿತ್ರಗಳ ನಕಲಿ ಸಿಡಿಗಳ ತಯಾರಿಕೆಯೂ ಬೆಳೆಯುತ್ತಿದೆ. [ಐ ಟ್ರೇಲರ್ ನಲ್ಲಿ ಏನಿದೆ?]

FOUND! Pirate CD Covers Of Vikram's 'I'

ಈ ಹಿಂದೆ ತಮಿಳು ಚಿತ್ರರಂಗದ ಪಾರ್ತಿಭನ್,ವಿಶಾಲ್ ಅವರು ಪೈರಸಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದರು. ಅದರೆ, ನಕಲಿ ಸಿಡಿ ಹಾವಳಿ ಮಾತ್ರ ನಿಂತಿಲ್ಲ.

ಶಂಕರ್ ನಿರ್ದೇಶನದ ವಿಕ್ರಮ್, ಏಮಿ ಜಾಕ್ಸನ್ ಅಭಿನಯದ ಎ.ಆರ್.ರೆಹಮಾನ್ ಅವರ ಸಂಗೀತ, ಪಿ.ಸಿ. ಶ್ರೀರಾಮ್ ಅವರ ಛಾಯಾಗ್ರಹಣ ಚಿತ್ರವಿರುವ ಐ ಚಿತ್ರದ ಬಜೆಟ್ ನೂರ ಎಂಬತ್ತೈದು ಕೋಟಿ. ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟ್ ನ ಚಿತ್ರಇದಾಗಿದೆ. ಸಂಕ್ರಾಂತಿ ದಿನದಂದು ವಿಶ್ವದೆಲ್ಲೆಡೆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. [ಚಿತ್ರದ ಟೀಸರ್ ಸೂಪರ್ ಡೂಪರ್ ಹಿಟ್]

ಚಿತ್ರದ ಸ್ಯಾಟಲೈಟ್ ಹಕ್ಕು, ರಿಂಗ್ ಟೋನ್ ಹಕ್ಕು ಎಲ್ಲವೂ ಜಯ ಟಿವಿಗೆ ಸುಮಾರು 20 ಕೋಟಿಗೆ ಮಾರಾಟವಾಗಿದೆ. ಚೆನ್ನೈ, ಬ್ಯಾಂಕಾಕ್, ಜೋಧಪುರ, ಕೋಡೈಕನಾಲ್, ಪೊಲ್ಲಾಚಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಕಂಡಿರುವ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಹೀಗಾಗಿ ತಮಿಳುನಾಡಿನಲ್ಲಿ ತೆರಿಗೆ ವಿನಾಯತಿ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.

English summary
The worst nightmare of any filmmaker or producer has once again taken shape to give sleepless nights to the makers of Vikram's much awaited film I. Yes, pirate CD covers of I has already been designed even before the release of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada