»   » ಪ್ರಥಮ್ ಮತ್ತು ಹುಚ್ಚ ವೆಂಕಟ್ ಜಂಟಿ ಫೇಸ್‌ಬುಕ್ ಲೈವ್: ಹೇಳಿದ್ದೇನು?

ಪ್ರಥಮ್ ಮತ್ತು ಹುಚ್ಚ ವೆಂಕಟ್ ಜಂಟಿ ಫೇಸ್‌ಬುಕ್ ಲೈವ್: ಹೇಳಿದ್ದೇನು?

Posted By:
Subscribe to Filmibeat Kannada

ಒಂದಾನೊಂದು ಕಾಲದಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಮತ್ತು 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಇಬ್ಬರು ಬದ್ಧ ವೈರಿಗಳಾಗಿ ಕಾಣಿಸಿಕೊಂಡವರು. ಒಬ್ಬರನ್ನ ಕಂಡ್ರೆ, ಮತ್ತೊಬ್ಬರು ಉರಿದು ಬೀಳುವಷ್ಟು ದ್ವೇಷ ಇರುವ ವ್ಯಕ್ತಿಗಳಾಗಿ ಬಿಂಬಿತರಾಗಿದ್ದರು. ಆದರೆ ಸ್ಟಾರ್ ಸುವರ್ಣ ವಾಹಿನಿಯ 'ಸೂಪರ್ ಜೋಡಿ-2' ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಪ್ರಥಮ್ ಗೆಸ್ಟ್ ಆಗಿ ಹೋಗಿದ್ದ ಸಂದರ್ಭದಿಂದ ಈ ಇಬ್ಬರೂ ಪಕ್ಕಾ ಕುಚುಕುಗಳಾದರು. ಅಲ್ಲದೇ ಅಣ್ಣ-ತಮ್ಮನ ರೀತಿ ಒಡನಾಟ ಬೆಳೆಸಿಕೊಂಡಿದ್ದಾರೆ.

ಪ್ರಥಮ್ ಮತ್ತು ಹುಚ್ಚ ವೆಂಕಟ್ ಇಬ್ಬರ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ.. ಇಬ್ಬರು ನಿನ್ನೆಯಷ್ಟೇ ಸಡೆನ್ ಆಗಿ ಜಂಟಿ ಫೇಸ್‌ಬುಕ್ ಲೈವ್ ಬಂದು ಎಲ್ಲರಿಗೂ ಶಾಕ್ ನೀಡಿದ್ದಾರೆ. ಫೇಸ್ ಬುಕ್ ಲೈವ್ ಬಂದೂ ಈ ಇಬ್ಬರೂ ಹೇಳಿದಾದ್ರು ಏನು? ಲೈವ್ ಬರಲು ಕಾರಣ ಏನು ಗೊತ್ತಾ?['ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!]

ಪ್ರಥಮ್ ಸಿನಿಮಾದಲ್ಲಿ ಹುಚ್ಚ ವೆಂಕಟ್ ಅಭಿನಯ

ಹೌದು.. 'ಬಿಗ್ ಬಾಸ್ ವಿನ್ನರ್' ಒಳ್ಳೆ ಹುಡುಗ ಪ್ರಥಮ್ ಅಭಿನಯದ ಚೊಚ್ಚಲ ಚಿತ್ರ 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅಭಿನಯಿಸಲಿದ್ದಾರಂತೆ. ಈ ವಿಷಯ ಹೇಳಲು ನಿನ್ನೆ ಪ್ರಥಮ್ ಮತ್ತು ಹುಚ್ಚ ವೆಂಕಟ್ ಜಂಟಿ ಫೇಸ್ ಬುಕ್ ಲೈವ್ ಬಂದಿದ್ದರು.['ದೇವ್ರಂಥ ಮನುಷ್ಯ'ನ ಟೀಸರ್ ರಿಲೀಸ್! ಪ್ರಥಮ್ ಡೈಲಾಗ್ ಗೆ ತಲೆ ಗಿರಗಿಟ್ಲೆ]

ಹುಚ್ಚ ವೆಂಕಟ್ ನಟಿಸಲಿರುವ ಪಾತ್ರ ಯಾವುದು?

'ದೇವ್ರಂಥ ಮನುಷ್ಯ' ಚಿತ್ರದಲ್ಲಿ ಹುಚ್ಚ ವೆಂಕಟ್ ವಿಜ್ಞಾನಿಯಾಗಿ ಅಭಿನಯಿಸಲಿದ್ದಾರೆ. ಈಗೆಂದು ಫೇಸ್ ಬುಕ್ ಲೈವ್ ನಲ್ಲಿ ಪ್ರಥಮ್ ಹೇಳಿದ್ದಾರೆ. ಈ ಬಗ್ಗೆ ಹುಚ್ಚ ವೆಂಕಟ್ ರವರು ಫೇಸ್ ಬುಕ್ ಲೈವ್ ವೇಳೆ ಹೇಳಿದ್ದೇನು..

ವಿಶೇಷ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ..

"ಮಾರ್ಸ್ ಹಾಗೂ ಜುಪಿಟರ್ ಗ್ರಹಗಳ ಜೊತೆ ವಿಜ್ಞಾನಿಯಾಗಿ ಫೈಟ್ ಮಾಡ್ತೀನಂತೆ. ಇಲ್ಲಿರುವ ಗ್ರಹಗಳ ಜೊತೆ ಫೈಟ್ ಮಾಡಿಯೇ ಸಾಕಾಗಿದೆ. ಈಗ ಆ ಗ್ರಹಗಳ ಜೊತೆ ಬೇರೆ ಫೈಟ್ ಮಾಡಬೇಕು. ಟೈಮ್ ಬಂದ್ರೆ ಅಲ್ಲೇ ಹೋಗಬೇಕಲ್ವಾ ಶೋ ಇವಾಗಿನಿಂದ ಪ್ರ್ಯಾಕ್ಟೀಸ್ ಮಾಡಿಕೊಳ್ಳೋಣ" - ಹುಚ್ಚ ವೆಂಕಟ್

ಪ್ರಥಮ್ ನನ್ನ ತಮ್ಮನ ಥರ

"ಪ್ರಥಮ್ ನನ್ನ ತಮ್ಮನ ತರ. ಶೇಕಡ 100 ರಷ್ಟು ನಿಮಗೆ ಈ ಸಿನಿಮಾ ಖುಷಿಕೊಡುತ್ತೆ. ಚಿತ್ರದಲ್ಲಿ ನನ್ನ ಸ್ಟೈಲ್ ಡಿಫರೆಂಟ್ ಆಗಿ ಇರುತ್ತೆ. ಕಿರುಚಲ್ಲ. ಡಿಟಿಎಸ್ ಇದ್ರೂ ಕಿರುಚಲ್ಲ. ನಗಿಸುತ್ತೇನೆ. ಆದ್ರೆ ನೀವು ನಗಲಿಲ್ಲ ಅಂದ್ರೆ ನಾನೇನು ಮಾಡೋಕೆ ಆಗಲ್ಲ. ಅದು ನಿಮ್ಮ ಡಿಫಾಲ್ಟ್" - ಹುಚ್ಚ ವೆಂಕಟ್

ಫಸ್ಟ್ ಟೈಮ್ ಬೇರೆ ಬ್ಯಾನರ್ ನಲ್ಲಿ ಅಭಿನಯ

"ಪ್ರಥಮ್ ಗೆ ಬೆಸ್ಟ್ ಆಫ್ ಲಕ್ ಹೇಳೋಕೆ ಇಷ್ಟ ಪಡ್ತೀನಿ. ಸಾಮಾನ್ಯವಾಗಿ ನಾನು ನನ್ನ ಬ್ಯಾನರ್ ಬಿಟ್ರೆ ಬೇರೆ ಬ್ಯಾನರ್ ನಲ್ಲಿ ಅಭಿನಯಿಸುವುದಿಲ್ಲ. ಆದರೆ ಭಾವನಾತ್ಮಕವಾಗಿ ಇಬ್ಬರ ನಡುವೆ ಸೆಂಟಿಮೆಂಟ್ ಜಾಸ್ತಿ. ಆದ್ದರಿಂದ ಇದೇ ಮೊದಲ ಬಾರಿಗೆ ಬೇರೆ ಬ್ಯಾನರ್ ನಲ್ಲಿ ಆಕ್ಟ್ ಮಾಡುತ್ತಿದ್ದೇನೆ"- ಹುಚ್ಚ ವೆಂಕಟ್

ವೆಂಕಟ್ ಅವರಿಗೆ ಫ್ಯಾನ್ಸ್ ಎಲ್ಲಿದ್ದಾರೆ ಗೊತ್ತಾ?

"ಹುಚ್ಚ ವೆಂಕಟ್ ಗೆ ಅಭಿಮಾನಿಗಳು ಎಲ್ಲಿದ್ದಾರೆ ಅಂದ್ರೆ ಎಲ್ಲರೂ ಹೇಳ್ತಾರೆ ಮಾರ್ಸ್, ಜುಪಿಟರ್ ನಲ್ಲಿ ಇದ್ದಾರೆ ಅಂತ. ಈ ಚಿತ್ರದಲ್ಲಿ ಸಖತ್ ನಗಿಸುವ ಜೊತೆಗೆ ಹುಚ್ಚ ವೆಂಕಟ್ ರವರ ಒಂದು ಫೈಟ್ ಸಹ ಇದೆ. ಅದು ಬಾಹುಬಲಿ, ಎಂದಿರನ್ ಫೈಟ್ ಗಳನ್ನು ಮೀರಿಸುವಂತಹ ಫೈಟ್" - ಪ್ರಥಮ್, 'ಬಿಗ್ ಬಾಸ್ 4' ರ ವಿನ್ನರ್

ಒಂದು ತಿಳ್ಕೊಳಿ..

"ಹುಚ್ಚ ವೆಂಕಟ್ ಕೂಗಾಡುವುದನ್ನು, ಬೈದಿರುವುದನ್ನು, ಗಲಾಟೆ ಮಾಡಿರುವುದನ್ನು, ಪತ್ರಕರ್ತರ ಮೇಲೆ ಕಿರುಚಾಡುವುದನ್ನು ನೋಡಿದ್ದೀರಿ. ಆದ್ರೆ ಇದೇ ಮೊದಲ ಬಾರಿಗೆ ಫನ್ನಿಯಾಗಿ, ಬ್ರಿಲಿಯಂಟ್ ಆಗಿ, ಸೆನ್ಸ್ ಆಫ್ ಹ್ಯೂಮರ್ ಆಗಿ ಕಾಣಿಸಿಕೊಳ್ಳಲಿರುವ ಹುಚ್ಚ ವೆಂಕಟ್ ರನ್ನು 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ನೋಡುತ್ತೀರಿ" - ಪ್ರಥಮ್, 'ಬಿಗ್ ಬಾಸ್ 4' ರ ವಿನ್ನರ್

ವೆಂಕಟ್ ಬೇರೆ ಬ್ಯಾನರ್ ಗೆ ಬರಲಿಕ್ಕೆ ಕಾರಣ ಏನು?

ಪ್ರಥಮ್ ಅವರೇ ಕೇಳಿದ 'ಬೇರೆ ಬ್ಯಾನರ್ ಗೆ ಬರಲಿಕ್ಕೆ ಕಾರಣ ಏನು?' ಎಂಬ ಪ್ರಶ್ನೆಗೆ ಹುಚ್ಚ ವೆಂಕಟ್ ರವರು ಪ್ರಥಮ್ ಮೇಲಿನ ಅಭಿಮಾನ ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ ವಾರ 'ದೇವ್ರಂಥ ಮನುಷ್ಯ' ಚಿತ್ರದಲ್ಲಿಯ ಹುಚ್ಚ ವೆಂಕಟ್ ಲುಕ್ ಬಿಡುಗಡೆ ಆಗಲಿದೆಯಂತೆ.

ಪಾರ್ವತಮ್ಮ ರಾಜ್ ಕುಮಾರ್ ಅರೋಗ್ಯಕ್ಕಾಗಿ ಪ್ರಾರ್ಥನೆ

ಫೇಸ್ ಬುಕ್ ಲೈವ್ ವೇಳೆ "ಪಾರ್ವತಮ್ಮ ರಾಜ್ ಕುಮಾರ್ ಅವರು ಬಹುಬೇಗ ಗುಣಮುಖವಾಗಿ ಇನ್ನೂ 100 ಕ್ಕೂ ಹೆಚ್ಚು ಸಿನಿಮಾ ನಿರ್ಮಾಣಮಾಡಬೇಕು. ಅದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಪ್ರಥಮ್ ಹೇಳಿದರು.

ಪ್ರಥಮ್ ಮತ್ತು ಹುಚ್ಚ ವೆಂಕಟ್ ಫೇಸ್ ಬುಕ್ ಲೈವ್ ನೋಡಲು ಕ್ಲಿಕ್ ಮಾಡಿ

English summary
Biggboss Kannada 4 Winner, Kannada Actor Pratham and Firing Star Huccha Venkat has come Facebook live to speak about 'Devrantha Manushya Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada