»   » ಅವಂತಿಕಾ ಶೆಟ್ಟಿ ವಿರುದ್ಧ ವಾಣಿಜ್ಯ ಮಂಡಳಿಗೆ ಸುರೇಶ್ ದೂರು

ಅವಂತಿಕಾ ಶೆಟ್ಟಿ ವಿರುದ್ಧ ವಾಣಿಜ್ಯ ಮಂಡಳಿಗೆ ಸುರೇಶ್ ದೂರು

Posted By:
Subscribe to Filmibeat Kannada

'ರಾಜು ಕನ್ನಡ ಮೀಡಿಯಂ' ನಾಯಕ ನಟಿ ಅವಂತಿಕಾ ಶೆಟ್ಟಿ ವಿರುದ್ಧ ನಿರ್ಮಾಪಕ ಕೆ.ಎ.ಸುರೇಶ್ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದಾರೆ. ಅವಂತಿಕಾ ಶೆಟ್ಟಿ ರವರನ್ನು ಚಿತ್ರದಲ್ಲಿ ಮುಂದುವರೆಸುವುದಿಲ್ಲ, ಅವರನ್ನು ಬಿಟ್ಟು ಸಿನಿಮಾ ಚಿತ್ರೀಕರಣ ಮುಂದುವರೆಸಲು ಅನುಮತಿ ನೀಡಬೇಕು ಎಂದು ಕೆ.ಎ.ಸುರೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.[ಸುರೇಶ್ ಮೇಲೆ ಅವಂತಿಕಾ ಆರೋಪ: ನಟ ಗುರುನಂದನ್ ಹೇಳಿದ್ದೇನು?]

ಇದಕ್ಕೂ ಮುನ್ನ 'ರಾಜು ಕನ್ನಡ ಮೀಡಿಯಂ' ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಲ್ಲದೇ ನಾವು ಅಬ್ರಾಡ್ ಗೆ ಚಿತ್ರೀಕರಣಕ್ಕೆ ಕರೆದರು ಬಂದಿರಲಿಲ್ಲ ಎಂದು ಚಿತ್ರ ನಿರ್ಮಾಪಕ ಕೆ.ಎ.ಸುರೇಶ್ ರವರು ಅವಂತಿಕಾ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತ್ಯಾರೋಪ ಮಾಡಿದ್ದ ಅವಂತಿಕಾ ಶೆಟ್ಟಿ ನಿರ್ಮಾಪಕರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿತ್ತು.

Producer K.A.Suresh Files a Complaint Against Avantika Shetty at KFCC

ನಟ ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ನಟಿಸುತ್ತಿದ್ದ ನಟಿ ಅವಂತಿಕಾ ಶೆಟ್ಟಿ ರವರನ್ನು ಇತ್ತೀಚೆಗೆ ಸರಿಯಾಗಿ ಚಿತ್ರೀಕರಣಕ್ಕೆ ಬರುತ್ತಿಲ್ಲ ಎಂಬ ಕಾರಣದಿಂದ ಚಿತ್ರದಿಂದ ಕೋಕ್ ನೀಡಲಾಗಿತ್ತು ಎಂದು ಸುದ್ದಿ ಕೇಳಿಬಂದಿತ್ತು. ನಂತರ ತಮ್ಮ ಬಗ್ಗೆ ಮಾಡಿದ ಆರೋಪಗಳನ್ನು ತಳ್ಳಿಹಾಕಿದ್ದ ಅವಂತಿಕಾ ನಿರ್ಮಾಪಕರು ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಹೇಳಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣ ಮೊರೆ ಹೋಗಿ ನಿರ್ಮಾಪಕರೇ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕಾಸ್ಟ್ಯೂಮರ್‌ ಸಹ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.[ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ]

English summary
Producer K.A.Suresh Files a Complaint Against Avantika Shetty at KFCC
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada