»   » ಸುಳ್ಳೇ ಸುಳ್ಳು... ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಕೇಳಿಬಂದಿದ್ದೆಲ್ಲ ಬರೀ ಸುಳ್ಳು.!

ಸುಳ್ಳೇ ಸುಳ್ಳು... ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಕೇಳಿಬಂದಿದ್ದೆಲ್ಲ ಬರೀ ಸುಳ್ಳು.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅತಿ ಹೆಚ್ಚು ಬ್ರೇಕಿಂಗ್ ನ್ಯೂಸ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು 'ಕುರುಕ್ಷೇತ್ರ'.!

ಹೇಳಿ ಕೇಳಿ 'ಕುರುಕ್ಷೇತ್ರ' ದರ್ಶನ್ ಅಭಿನಯದ 50ನೇ ಸಿನಿಮಾ. ಪೌರಾಣಿಕ ಕಥಾಹಂದರ ಹೊಂದಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಟಾಪ್ ನಟ-ನಟಿಯರು ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

ಸಾಲದಕ್ಕೆ, 'ಕುರುಕ್ಷೇತ್ರ' ಚಿತ್ರದ ವಿಶೇಷತೆಗಳ ಬಗ್ಗೆ ದಿನಕ್ಕೊಂದು ಖಾಸ್ ಖಬರ್ ಹೊರಬರುತ್ತಲೇ ಇದೆ. ಅದನ್ನೆಲ್ಲ ಕೇಳಿ 'ಡಿ' ಬಾಸ್ ಅಪ್ಪಟ ಭಕ್ತರ ಮೈ ರೋಮಾಂಚನಗೊಂಡಿತ್ತು. ಆದ್ರೀಗ, ಅದೆಲ್ಲ 'ಬರೀ ಸುಳ್ಳು' ಎಂದು ಬಿಡೋದಾ ನಿರ್ಮಾಪಕ ಮುನಿರತ್ನ.! ಯಾವುದು ಸುಳ್ಳು...ಯಾವುದು ಸತ್ಯ..? ಮುಂದೆ ಓದಿರಿ....

ಎಲ್ಲವೂ ಸುಳ್ಳು ಎಂದುಬಿಟ್ಟ ನಿರ್ಮಾಪಕ ಮುನಿರತ್ನ

ದರ್ಶನ್ ರವರ 'ಕುರುಕ್ಷೇತ್ರ' ಸಿನಿಮಾದ ಬಗ್ಗೆ ಇಲ್ಲಿಯವರೆಗೂ ಏನೇನು ಸುದ್ದಿಗಳು ಹರಿದಾಡಿದೆಯೋ, ಅದೆಲ್ಲವೂ 'ಸುಳ್ಳು' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ ನಿರ್ಮಾಪಕ ಮುನಿರತ್ನ.[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.! ]

ಯಾವುದು ಸುಳ್ಳು.?

'ಕುರುಕ್ಷೇತ್ರ' ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು 'ಶ್ರೀಕೃಷ್ಣ'ನ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. 'ಕುರುಕ್ಷೇತ್ರ' ಚಿತ್ರತಂಡ ಈಗಾಗಲೇ ರವಿಚಂದ್ರನ್ ರವರ ಬಳಿ ಮಾತುಕತೆ ನಡೆಸಿದೆ ಎಂದೂ ಕೂಡ ವರದಿ ಆಗಿತ್ತು. ಆದ್ರೆ, ನಿರ್ಮಾಪಕ ಮುನಿರತ್ನ ರವರ ಬಾಯಿಂದ ಬರುವ ಕಥೆಯೇ ಬೇರೆ.[ನಟ ದರ್ಶನ್ ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದು ಯಾಕೆ.?]

ಒಪ್ಪಿಕೊಳ್ಳದ ಮುನಿರತ್ನ

'ಕುರುಕ್ಷೇತ್ರ' ಸಿನಿಮಾದಲ್ಲಿ ವಿ.ರವಿಚಂದ್ರನ್ 'ಶ್ರೀಕೃಷ್ಣ' ಆಗುತ್ತಾರಾ ಅಂತ ಕೇಳಿದ್ರೆ...''ಎಲ್ಲವೂ ಸುಳ್ಳು'' ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

'ಭೀಮ' ರಾಣಾ ದಗ್ಗುಬಾಟಿ.?

ಇನ್ನೂ 'ಕುರುಕ್ಷೇತ್ರ' ಸಿನಿಮಾದಲ್ಲಿ 'ಭೀಮ'ನ ಪಾತ್ರದಲ್ಲಿ 'ಬಾಹುಬಲಿ' ಚಿತ್ರದ 'ಬಲ್ಲಾಳದೇವ' ಪಾತ್ರಧಾರಿ ರಾಣಾ ದಗ್ಗುಬಾಟಿ' ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಸುದ್ದಿಗೆ ಸಂಬಂಧ ಪಟ್ಟ ಹಾಗೆ ನಿರ್ಮಾಪಕ ಮುನಿರತ್ನ ಏನಂತಾರೆ ಗೊತ್ತಾ.? [ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]

ರಾಣಾ ದಗ್ಗುಬಾಟಿ ಬರ್ತಾರಾ.?

'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸಲು ರಾಣಾ ದಗ್ಗುಬಾಟಿ ಒಪ್ಪಿಗೆ ನೀಡಿದ್ದಾರಾ ಅಂತ ಕೇಳಿದ್ರೆ, ನಿರ್ಮಾಪಕ ಮುನಿರತ್ನ ಹೇಳುವುದಿಷ್ಟು - ''ನಿರ್ಮಾಪಕನಾಗಿ ನನಗೇ ಗೊತ್ತಿಲ್ಲ. ರಾಣಾ ಎಲ್ಲಿಂದ ಬಂದ್ರು.?'' ಎಂದು ನಗುತ್ತಾರೆ ನಿರ್ಮಾಪಕ ಮುನಿರತ್ನ.

ಹಾಗಾದ್ರೆ, ಯಾವುದು ಸತ್ಯ.?

''ದರ್ಶನ್ ರವರ 50ನೇ ಚಿತ್ರದ ಹೆಸರು 'ಕುರುಕ್ಷೇತ್ರ'. ಸಿನಿಮಾದಲ್ಲಿ ದರ್ಶನ್ ನಟಿಸುವುದು ಸತ್ಯ. ನಾಗಣ್ಣ ಆಕ್ಷನ್ ಕಟ್ ಹೇಳುವುದು ಸತ್ಯ. ನಾನು ದುಡ್ಡು ಹಾಕುವುದು ಸತ್ಯ'' ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

ಬೇರೆಲ್ಲ ಸುಳ್ಳು....

''ಕುರುಕ್ಷೇತ್ರ' ಸಿನಿಮಾದ ಬಗ್ಗೆ ಏನೇನೆಲ್ಲ ಸುದ್ದಿ ಹರಿದಾಡಿದೆಯೋ, ಅದೆಲ್ಲವೂ ಸುಳ್ಳು. ನಾನು ಈವರೆಗೂ ಪಾತ್ರಕ್ಕಾಗಿ ಯಾರ ಜೊತೆಗೂ ಮಾತುಕತೆ ನಡೆಸಿಲ್ಲ'' ಅಂತ ಫೋನ್ ಕಟ್ ಮಾಡುತ್ತಾರೆ ನಿರ್ಮಾಪಕ ಮುನಿರತ್ನ.

English summary
Producer Muniratna has denied all gossips surrounding Darshan starrer 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada