»   » ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ

ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ

Posted By:
Subscribe to Filmibeat Kannada

ಕಿರುತೆರೆ ಕ್ಷೇತ್ರದಿಂದ 2012 ರಲ್ಲಿ ಹಿರಿತೆರೆ ಕ್ಷೇತ್ರಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್ ಅವರು ನಟಿಸಿದ್ದು, ಮಾತ್ರ ಸ್ಯಾಂಡಲ್ ವುಡ್ ನಟ ಸ್ಟಾರ್ ನಟರ ಜೊತೆ. ಕಾಲಿಟ್ಟಾಗಿನಿಂದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್ ಇದೀಗ ಮತ್ತೊಂದು ಬಹು ನಿರೀಕ್ಷಿತ ಚಿತ್ರದ ರಿಲೀಸ್ ಗೆ ಸಜ್ಜಾಗಿದ್ದಾರೆ.

'ಬುಲ್ ಬುಲ್', 'ದಿಲ್ ರಂಗೀಲಾ', 'ಅಂಬರೀಶ', 'ರನ್ನ', ಮತ್ತು 'ರಥಾವರ' ಸಿನಿಮಾಗಳಲ್ಲಿ ನಟಿಸಿ ಹಿಟ್‌ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್ ಅವರು ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.['ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು]


Rachita Ram Feels Special About Song 'Nintalli Nillalaare' From Chakravyuha

ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಚಿತ್ರದ ಕೊನೆಯ ಹಾಡು 'ನಿಂತಲ್ಲೇ ನಿಲ್ಲಲಾರೆ' ತಮಗೆ ತುಂಬಾ ಇಷ್ಟ ಎನ್ನುತ್ತಾರೆ ನಟಿ ರಚಿತಾ ರಾಮ್.


Rachita Ram Feels Special About Song 'Nintalli Nillalaare' From Chakravyuha

ಈ ಹಾಡು ರಚಿತಾ ರಾಮ್ ಅವರ ಮೇಲೆಯೇ ಬರೆಯಲಾಗಿದ್ದು, ನಾಯಕಿಯ ಆವೃತ್ತಿಯಂತೆ. ಈ ಹಾಡನ್ನು ತೆಲುಗಿನ ಖ್ಯಾತ ಗಾಯಕಿ ಮೇಘಾ ಅವರು ಹಾಡಿದ್ದಾರೆ. 'ಇದು ಸಂಪೂರ್ಣವಾಗಿ ನನ್ನ ಕಲ್ಪನೆಯ ಮೇಲೆ ಓಡುವ ಹಾಡು. ಸಾಮಾನ್ಯವಾಗಿ ಪ್ರೀತಿ ಶುರುವಾದ ತಕ್ಷಣ ಡ್ಯುಯೆಟ್ ಇರುತ್ತದೆ. ಆದರೆ ಈ ಹಾಡಿನಲ್ಲಿ ನನ್ನ ಕಲ್ಪನೆಯ ಪ್ರಿಯತಮನನ್ನು ಹೊಗಳುತ್ತಿರುತ್ತೇನೆ' ಎಂದು ನುಡಿಯುತ್ತಾರೆ ರಚಿತಾ ರಾಮ್.[ಪುನೀತ್ ಡ್ಯುಯೆಟ್ ಗೆ ಕಾಜಲ್ ಅಗರ್ ವಾಲ್ ಚಮಕ್]


Rachita Ram Feels Special About Song 'Nintalli Nillalaare' From Chakravyuha

ಯಾವಾಗಲೂ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರೇ ಪ್ರಧಾನವಾಗಿರುವುದರಿಂದ ಮತ್ತು ಅವರಿಗೆ ಮಾತ್ರ ಪರಿಚಯಾತ್ಮಕ ಪ್ರತ್ಯೇಕ ಹಾಡು ಲಭಿಸುವುದರಿಂದ ಈ ಹಾಡು ಬಹಳ ವಿಶಿಷ್ಟ ಎನ್ನುತ್ತಾರೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್.[ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ]


Rachita Ram Feels Special About Song 'Nintalli Nillalaare' From Chakravyuha

ಪುನೀತ್ ರಾಜ್ ಕುಮಾರ್ ಅವರ ಪಾತ್ರಕ್ಕೆ 'ಗೆಳೆಯಾ ಗೆಳೆಯಾ' ಹಾಡು ವಿಶಿಷ್ಟವಾಗಿರುವಂತೆ, 'ನಿಂತಲ್ಲಿ ನಿಲ್ಲಲಾರೆ' ನನ್ನ ಪಾತ್ರಕ್ಕೆ ವಿಶೇಷ. ಇದು ಪರಿಚಯಾತ್ಮಕ ಹಾಡು ಅಲ್ಲವಾದರೂ, ಕಲ್ಪನೆಯ ಸೋಲೋ ಹಾಡು ಎನ್ನುತ್ತಾರೆ ರಚಿತಾ ರಾಮ್.


Rachita Ram Feels Special About Song 'Nintalli Nillalaare' From Chakravyuha

ನಿರ್ಮಾಪಕ ಎನ್.ಕೆ ಲೋಹಿತ್ ಬಂಡವಾಳ ಹೂಡಿರುವ 'ಚಕ್ರವ್ಯೂಹ' ಚಿತ್ರ ಯುಗಾದಿ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

English summary
Rachita Ram is one of the busiest and successful lead actress in Kannada film industry. The beautiful actress is currently waiting for the release of her upcoming movie Chakravyuha opposite Puneeth Rajkumar. Rachita Ram has special connection with song 'Nintalli Nillalaare' from the movie. 'Nintalli Nillalaare' is a imaginary song in which actress dreams about her boyfreind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada