»   » 'ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?

'ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂಬ ಕಾರಣಕ್ಕೆ 'ಬಾಹುಬಲಿ 2' ಚಿತ್ರದ ಬಿಡುಗಡೆಗೆ ಕರ್ನಾಟಕದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]

ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಆಗಬೇಕೆಂದರೆ ಸತ್ಯರಾಜ್ ಬಹಿರಂಗವಾಗಿ ಕನ್ನಡಿಗರ ಮುಂದೆ ಕ್ಷಮಾಪಣೆ ಕೇಳಬೇಕು ಎಂದು ಕನ್ನಡ ಪರ ಹೋರಾಟ ಸಂಘಟನೆಗಳು ಬೇಡಿಕೆ ಮುಂದಿಟ್ಟಿವೆ. ಆದರೆ ಈ ಬಗ್ಗೆ ಎಂದು ಪ್ರತಿಕ್ರಿಯಿಸದ ನಿರ್ದೇಶಕ ಎಸ್.ಎಸ್.ರಾಜಮೌಳಿ, ಇತ್ತೀಚೆಗೆ ಸತ್ಯರಾಜ್ ವಿವಾದದ ಬಗ್ಗೆ ಇಂಗ್ಲಿಷ್ ಸುದ್ದಿ ವಾಹಿನಿ 'ಇಂಡಿಯಾ ಟುಡೇ' ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 'ಬಾಹುಬಲಿ 2' ನಿರ್ದೇಶಕರು ಹೇಳಿದ್ದಾದರು ಏನು? ಎಂಬುದನ್ನು ಮುಂದೆ ಓದಿ...

'ಸತ್ಯರಾಜ್ ವಿವಾದ' ಬೇಸರದ ಸಂಗತಿ

'ಬಾಹುಬಲಿ 2' ಸದ್ಯದಲ್ಲೇ ರಿಲೀಸ್ ಆಗಲಿದೆ. ಆದರೆ ಕರ್ನಾಟಕದಲ್ಲಿ ಸತ್ಯರಾಜ್ ರವರ ಹೇಳಿಕೆಗೆ ಸಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನ ಹೇಗೆ ನಿಭಾಯಿಸಬೇಕು ಅಂದುಕೊಂಡುದ್ದೀರಿ ಎಂದು 'ಇಂಡಿಯಾ ಟುಡೇ' ನಿರೂಪಕಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಎಸ್.ಎಸ್.ರಾಜಮೌಳಿ, "ಇದು ಬೇಸರದ ಸಂಗತಿ. ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಮಗೆ ಶಾಕ್ ಆಯ್ತು" ಎಂದಿದ್ದಾರೆ.

ಮೊದಲು ನನಗೆ ಅರ್ಥ ಆಗಿರಲಿಲ್ಲ...

"ಒಮ್ಮೆ ಈ ಮಾಹಿತಿ ಬಂದ ನಂತರ, ಹಲವು ಬಾರಿ ವಾಟ್ಸಾಪ್ ನಲ್ಲಿ ಎಲ್ಲಾ ಚೆಕ್ ಮಾಡಿದ್ವಿ. ನಾವು ಸತ್ಯರಾಜ್ ಸರ್ ಜೊತೆ 5 ವರ್ಷಗಳ ಕಾಲ ಕೆಲಸ ಮಾಡಿದೀವಿ. ಆದರೆ ಸತ್ಯರಾಜ್ ಸರ್ ಇತರರನ್ನು ಮನನೋಯಿಸುವ ರೀತಿ ಮಾತನಾಡುತ್ತಾರೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ" - ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ[ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

ಹಲವು ವಿಡಿಯೋಗಳು ಪೋಸ್ಟ್ ಆಗಿವೆ

"ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿವೆ. ಆದರೆ ನನಗೆ ಕನ್ನಡ ಮತ್ತು ತಮಿಳು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಅಲ್ಲದೇ ವಿಡಿಯೋದಲ್ಲಿ ಅವರು ಏನ್ ಹೇಳ್ತಿದ್ದಾರೆ ಗೊತ್ತಿಲ್ಲ. ಬಟ್ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ. ಆಮೇಲೆ ಈ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ವಿಚಾರಣೆ ಮಾಡಿದಾಗ ಶಾಕ್ ಆಯ್ತು" ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

ಶಾಕಿಂಗ್ ಥಿಂಗ್ ಅಂದ್ರೆ...

"ಸತ್ಯರಾಜ್ ರವರು ವಿವಾದಾತ್ಮಕ ಹೇಳಿಕೆ ನೀಡಿರುವುದು 9 ವರ್ಷಗಳ ಹಿಂದೆ. ಆ ನಂತರ 25 ರಿಂದ 30 ಕ್ಕೂ ಹೆಚ್ಚು ಸತ್ಯರಾಜ್ ರವರು ಅಭಿನಯಿಸಿರುವ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗಿವೆ" ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

'ಬಾಹುಬಲಿ - ದಿ ಬಿಗಿನ್ನಿಂಗ್' ಸಹ ರಿಲೀಸ್ ಆಗಿದೆ..

"ಕರ್ನಾಟಕದಲ್ಲಿ 'ಬಾಹುಬಲಿ' ಸಹ ಬಿಡುಗಡೆ ಆಯ್ತು. ಆದರೆ ಆಗಲು ಯಾರಿಂದಲು ತೊಂದರೆ ಆಗಲಿಲ್ಲ. ಅದರೆ ಈಗ ಅದೇ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು 'ಬಾಹುಬಲಿ 2' ಸಂದರ್ಭದಲ್ಲಿ ಸಮಸ್ಯೆ ಸೃಷ್ಟಿಸಲಾಗಿದೆ. ಇದು ಯಾಕೆ ಅಂತ ನನಗೆ ಗೊತ್ತಿಲ್ಲ. ಅಲ್ಲದೇ ಇದು ಸರಿ ಎನಿಸುತ್ತಿಲ್ಲ. ಇದು ಪಾಯಿಂಟ್ ನಂಬರ್ ಒನ್" ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

ಪಾಯಿಂಟ್ ನಂಬರ್ 2

"ಮಿಸ್ಟರ್ ಸತ್ಯರಾಜ್ ರವರು ಚಿತ್ರದ ನಿರ್ಮಾಪಕರಲ್ಲ, ಸ್ಟೋರಿ ರೈಟರ್ ಅಲ್ಲ, ನಿರ್ದೇಶಕರು ಅಲ್ಲ. ಅಲ್ಲದೇ ಚಿತ್ರದ ಹೀರೋ ಸಹ ಅಲ್ಲ. ಸೈಡ್ ಆಕ್ಟರ್ ಅಷ್ಟೆ. ಬಂದ್ರು.. ಅಭಿನಯ ಮಾಡಿದ್ರು. ಸಂಭಾವನೆ ಪಡೆದು ಅವರ ಪಾಡಿಗೆ ಅವರು ಹೋದ್ರು ಅಷ್ಟೆ" - ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

'ಬಾಹುಬಲಿ 2' ವಿರೋಧಿಸುವುದರಿಂದ ಪ್ರಯೋಜನವಿಲ್ಲ

"ಜನರು 'ಬಾಹುಬಲಿ 2' ಬಿಡುಗಡೆಗೆ ವಿರೋಧಿಸುವುದರಿಂದ ಸತ್ಯರಾಜ್ ರವರಿಗೆ ಯಾವ ರೀತಿಯಿಂದಲೂ ಎಫೆಕ್ಟ್ ಆಗುವುದಿಲ್ಲ. ಆದರೆ ಇದು ದುಃಖದ ಸಂಗತಿ" -ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

ಜನರು ಅರ್ಥಮಾಡಿಕೊಳ್ಳುತ್ತಾರೆ ಅನಿಸುತ್ತೆ..

"ಐ ಥಿಂಗ್ ಜನರು ಇದನ್ನ ಅರ್ಥಮಾಡಿಕೊಳ್ಳುತ್ತಾರೆ. 'ಬಾಹುಬಲಿ 2' ಚಿತ್ರದ ಬಿಡುಗಡೆಗೆ ಎದುರಾಗಿರುವ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡಿದ್ದೇನೆ" - ಎಸ್.ಎಸ್.ರಾಜಮೌಳಿ, 'ಬಾಹುಬಲಿ 2' ನಿರ್ದೇಶಕ

ಎಸ್.ಎಸ್.ರಾಜಮೌಳಿ ಇಂಡಿಯಾ ಟುಡೇ ಚಾನೆಲ್ ಗೆ ನೀಡಿದ ಸಂದರ್ಶನದ ವಿಡಿಯೋ ನೋಡಲು ಕ್ಲಿಕ್ ಮಾಡಿ..

English summary
During a recent interview in 'India Today' Channel 'Baahubali 2' director SS Rajamouli spoke about the Kattappa controversy issue in Karnataka and what he said literally makes sense.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada