»   » 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿ ಸದ್ಯದಲ್ಲೇ ಕಿಚ್ಚ ಸುದೀಪ್ ಅವರ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಆದ್ರೆ ಚಿತ್ರ ಶುರು ಮಾಡೋಕು ಮುನ್ನ ಟೈಟಲ್, ಚಿತ್ರಕಥೆ ಸುತ್ತ ಇದ್ದ ಕೆಲವು ಊಹಾಪೋಹಗಳಿಗೆ ಉತ್ತರಿಸಿದ್ದು, ಕಥೆ ಬಗ್ಗೆ ಚಿತ್ರಣ ನೀಡಿದ್ದಾರೆ.['ಇತಿಹಾಸ ಯಾವಾಗಲು ಸರಿ ಎನ್ನಲು ಸಾಧ್ಯ ಇಲ್ಲ!': ರಕ್ಷಿತ್ ಶೆಟ್ಟಿ]

ಹೌದು, ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ನಿರ್ದೇಶನ ಮಾಡುವುದಾಗಿ ಹೇಳಿದಾಗಿನಿಂದಲು, ಚಿತ್ರಕಥೆ ಮತ್ತು ಟೈಟಲ್ ಬಗ್ಗೆ ಹಲವು ಸಮಸ್ಯೆಗಳು ಬರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈ ಯಾವುದೇ ಸಮಸ್ಯೆಗಳನ್ನು ಈ ವರೆಗೆ ಎದುರಿಸದ ರಕ್ಷಿತ್ ಶೆಟ್ಟಿ, ಇತ್ತೀಚೆಗೆ ಕಥೆ ಏನು ಎಂದು ತುಟಿ ಬಿಚ್ಚಿದ್ದಾರೆ.

ಟೈಟಲ್ ಊಹಾಪೋಹಕ್ಕೆ ರಕ್ಷಿತ್ ಶೆಟ್ಟಿ ಉತ್ತರ

ಮಾಲ್ಗುಡಿ ಅನ್ನೋ ಟೈಟಲ್ ನಿರ್ದೇಶಕ ಏಪಿ ಅರ್ಜುನ್ ಅವರ ಕೈಯಲ್ಲಿತ್ತು, ಹಾಗೆ ಶಂಕರಣ್ಣನ 'ಮಾಲ್ಗುಡಿ ಡೇಸ್' ಗೆ ಲಿಂಕ್ ಇರಬಹುದಾ, ಈ ಹಿನ್ನೆಲೆಯಲ್ಲಿ ಟೈಟಲ್ ಸಮಸ್ಯೆ ಆಗಬಹುದಾ ಅನ್ನೋ ಡೌಟ್ ಗಳಿಂದ 'ಥಗ್ಸ್ ಆಫ್ ಮಾಲ್ಗುಡಿ' ಬಚಾವಾಗಿತ್ತು. 'ನಾನು ಈ ಸಿನಿಮಾ ಮಾಡುವುದಾಗಿ ಹೇಳಿ 2 ವರ್ಷ ಆಗಿದೆ. ಆದರೆ ಹಿಂದಿಯಲ್ಲಿ ಈಗ 'ಥಗ್ಸ್ ಆಫ್ ಹಿಂದೂಸ್ತಾನ್' ನಿರ್ಮಾಣ ಆಗುತ್ತಿದೆ. ನಾನು ಆಗಲೇ ಘೋಷಣೆ ಮಾಡದಿದ್ದಲ್ಲಿ ಇದನ್ನು ಕದ್ದಿರುವುದಾಗಿ ಹೇಳುತ್ತಿದ್ದರೇನೋ?' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.[ಶೀರ್ಷಿಕೆಯ ವಿವಾದದಡಿಯಲ್ಲಿ ಶೆಟ್ಟಿಯ ಥಗ್ಸ್ ಆಫ್ ಮಾಲ್ಗುಡಿ]

'ಥಗ್ಸ್ ಆಫ್ ಹಿಂದೂಸ್ತಾನ್' ಗೂ ರಕ್ಷಿತ್ ಚಿತ್ರಕ್ಕೂ ಸಂಬಂಧವಿಲ್ಲ

'ಅಮೀರ್ ಖಾನ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವನ್ನು 'ಕನ್ಫೆಷನ್ ಆಫ್ ಎ ಥಗ್' ಕಾದಂಬರಿ ಆಧರಿಸಿ ನಿರ್ಮಿಸಲಾಗುತ್ತಿದೆ. ಆದರೆ ನಮ್ಮ ಚಿತ್ರದ ಕಥೆಗೂ 'ಥಗ್ಸ್ ಆಫ್ ಹಿಂದೂಸ್ತಾನ್' ಮತ್ತು 'ಕನ್ಫೆಷನ್ ಆಫ್ ಎ ಥಗ್' ಕಾದಂಬರಿಗೂ ಯಾವುದೇ ಸಂಬಂಧವಿಲ್ಲ' ಎಂದು ರಕ್ಷಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಚಿತ್ರದ ಕಥೆ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ..

'ಬ್ರಿಟಿಷರ ಆಡಳಿತ ಕಾಲದಲ್ಲಿ 'ಕ್ರಿಮಿನಲ್ ಟ್ರೈಬ್ ಆಕ್ಟ್' ಪ್ರಕಾರ ಕೆಲವರಿಗೆ ಹುಟ್ಟು ಕ್ರಿಮಿನಲ್ ಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತಿತ್ತು. ಯಾವುದೇ ಅಪರಾಧಗಳನ್ನು ಮಾಡದ, ಆ ಸಮಾಜದ ಮುಂದಿನ ಪೀಳಿಗೆಯ ಅನೇಕರನ್ನೂ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಈ ಒಂದು ಅಂಶವನ್ನೇ ಮುಖ್ಯವಾಗಿ ಪರಿಗಣಿಸಿ ವಿಶ್ವದ ಎದುರು ಭಾರತವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿತ್ತು. ಇಂತಹ ಘಟನೆಗಳನ್ನು ಆಧರಿಸಿ ಇನ್ನೊಂದು ಆಯಾಮದ ಕಥೆಯನ್ನು ಸಿನಿಮಾ ದಲ್ಲಿ ಹೇಳುತ್ತಿದ್ದೇವೆ' ಎಂದು ರಕ್ಷಿತ್ ಶೆಟ್ಟಿ ಕಥೆ ಬಗ್ಗೆ ತುಟಿ ಬಿಚ್ಚಿದ್ದಾರೆ.[ಸುದೀಪ್ ಗೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್: ಮುಹೂರ್ತ ಸಮಯ ಕೂಡಿ ಬಂತು.!]

ಚಿತ್ರ ನಿರ್ಮಾಪಕರು ಯಾರು?

ಅಂದಹಾಗೆ ರಕ್ಷಿತ್ ಅವರ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕ್ಕೆ ನಿರ್ಮಾಪಕರೊಬ್ಬರು ಫಿಕ್ಸ್ ಆಗಿದ್ದು, ಅವರ ಹೆಸರನ್ನು ಸುದೀಪ್ ಅವರೇ ಮುಂದಿನ ದಿನಗಳಲ್ಲಿ ತಿಳಿಸುತ್ತಾರಂತೆ.

2 ವರ್ಷ ಹಿಂದಿನ ಪ್ರಾಜೆಕ್ಟ್ ಲೇಟ್ ಆಗಿದ್ದು ಏಕೆ?

ಬಜೆಟ್ ಸಮಸ್ಯೆಯಿಂದ ಈ ಪ್ರಾಜೆಕ್ಟ್ ಅನ್ನು ಎರಡು ವರ್ಷದಿಂದ ಮುಂದೂಡಿಕೊಂಡು ಬರಲಾಗಿತ್ತಂತೆ. ಆದರೆ ಈಗ ಸುದೀಪ್ ಅವರು ನಾಯಕರಾಗಿರುವುದರಿಂದ ಈ ಸಮಸ್ಯೆ ಇಲ್ಲ ಎಂದು ರಕ್ಷಿತ್ ಹೇಳಿದ್ದಾರೆ.

English summary
Kannada actor and director Rakshit Shetty recently revealed story of 'Thugs Of Malgudi' Starring Sudeep!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada