For Quick Alerts
  ALLOW NOTIFICATIONS  
  For Daily Alerts

  ಹೊಸ ಪ್ರಮಾಣ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

  |

  ನಟ ಉಪೇಂದ್ರ ಅತ್ತ ಸಿನಿಮಾ, ಇತ್ತ ರಾಜಕೀಯ ಚಟುವಟಿಕೆಗಳು ಎರಡರಲ್ಲಿಯೂ ಸಕ್ರಿಯರಾಗಿದ್ದಾರೆ. ಅದರಲ್ಲಿಯೂ ಲಾಕ್ ಡೌನ್ ಅವಧಿಯ ನಾಲ್ಕೈದು ತಿಂಗಳಲ್ಲಿ ಅವರು ಹೊರ ಜಗತ್ತು ಮತ್ತು ತಮ್ಮ ಪ್ರಜಾಕೀಯ ಪಕ್ಷದ ಕುರಿತು ಸತತವಾಗಿ ಮಾತನಾಡುತ್ತಲೇ ಇದ್ದಾರೆ.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ತಮ್ಮ ಪ್ರಜಾಕೀಯ ಪಕ್ಷದ ಮಹತ್ವವನ್ನು, ಅದು ಈ ಸಂದರ್ಭದಲ್ಲಿ ಏಕೆ ಜನರಿಗೆ ಅತಿಅಗತ್ಯವಾಗಿದೆ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರ, ಅದರ ನಿರ್ಧಾರಗಳು, ಕೊರೊನಾ ವೈರಸ್ ಸಂಕಷ್ಟವನ್ನು ಯಾವ ರೀತಿ ಆಡಳಿತಾಂಗ ನಿಭಾಯಿಸುತ್ತಿದೆ ಎಂಬುದನ್ನು ವಿಮರ್ಶೆಗೆ ಹಚ್ಚುವ, ತಪ್ಪುಗಳನ್ನು ಟೀಕಿಸುವ, ತಮ್ಮ ವಿಚಾರಗಳನ್ನು ಮಂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಅವರು 'ಪ್ರಮಾಣವಚನ' ಸ್ವೀಕರಿಸಿದ್ದಾರೆ. ಮುಂದೆ ಓದಿ.

  ಯಾರದ್ದೋ ಪಾಲಾಗಿದ್ದ 'ರಕ್ತ ಕಣ್ಣೀರು' ಸಾಧುಕೋಕಿಲಾ ಅದೃಷ್ಟ ಬದಲಾಯಿಸಿದ್ದು ಹೇಗೆ?ಯಾರದ್ದೋ ಪಾಲಾಗಿದ್ದ 'ರಕ್ತ ಕಣ್ಣೀರು' ಸಾಧುಕೋಕಿಲಾ ಅದೃಷ್ಟ ಬದಲಾಯಿಸಿದ್ದು ಹೇಗೆ?

  ಉಪೇಂದ್ರ ಎಂಬ ನಾನು...

  ಉಪೇಂದ್ರ ಎಂಬ ನಾನು...

  ಉಪೇಂದ್ರ ಎಂಬ ನಾನು, ಈ ರಾಜ್ಯದ CM (common man) ಪ್ರಜೆಯಾಗಿ (ಜನ ಅಸಾಮಾನ್ಯ) ಎಂದೆಂದೂ ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಜೊತೆ ಪ್ರಜಾಪ್ರಭುತ್ವದ - ಪ್ರಜಾಕೀಯದ ಪ್ರಚಾರ ನಿರಂತರವಾಗಿ ಮಾಡುತ್ತಿರುತ್ತೇನೆ

  ಷರತ್ತು ವಿಧಿಸಿ ಚುನಾವಣೆಗೆ

  ಷರತ್ತು ವಿಧಿಸಿ ಚುನಾವಣೆಗೆ

  ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಬಯಸುವ ಪ್ರಜಾಕಾರ್ಮಿಕರನ್ನು ನೀವು ಬಯಸಿದಂತೆ (ART ) (SOP) ನಿರ್ದಿಷ್ಟ ಕಾರ್ಯ ವೈಖರಿಯ ವಿಧಾನದಂತೆ ಕೆಲಸಮಾಡಲು ಷರತ್ತು ವಿಧಿಸಿ ಚುನಾವಣೆಗೆ ನಿಲ್ಲಿಸುವ ಕೆಲಸ ಮಾಡುತ್ತೇನೆ.

  ಉಪೇಂದ್ರ ವಿರುದ್ಧ ಕಿಡಿಕಾರಿದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ: ಅಭಿಮಾನಿಗಳ ಆಕ್ರೋಶಉಪೇಂದ್ರ ವಿರುದ್ಧ ಕಿಡಿಕಾರಿದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ: ಅಭಿಮಾನಿಗಳ ಆಕ್ರೋಶ

  ನಿರಂತರವಾಗಿ ಗಮನ

  ನಿರಂತರವಾಗಿ ಗಮನ

  ಚುನಾವಣೆಯಲ್ಲಿ ಪ್ರಜಾಕಾರ್ಮಿಕರಿಗೆ ನೀವು ಕೆಲಸ ಕೊಟ್ಟರೆ ಪಕ್ಷದ ಅಧ್ಯಕ್ಷನಾಗಿ ಮತ್ತು ನಿಮ್ಮ ಜೊತೆ ಪ್ರಜೆಯಾಗಿ ನಿಂತು ನೀವು ಬಯಸುವ ಕೆಲಸ (SOP) ( ART ) ಪ್ರಕಾರ ಮಾಡುತ್ತಿದ್ದಾರಾ ಎಂದು ನಿರಂತರವಾಗಿ ನೋಡಿಕೊಳ್ಳುತ್ತೇನೆ.

  ಅಸಮಾಧಾನವಾದರೆ ಇಳಿಸುತ್ತೇನೆ

  ಅಸಮಾಧಾನವಾದರೆ ಇಳಿಸುತ್ತೇನೆ

  ನಮ್ಮ ಕನಸುಗಳು - ಶಿಕ್ಷಣ, ಆರೋಗ್ಯ, ವಸತಿ, ಕೆಲಸ, ಮೂಲಭೂತ ಸೌಕರ್ಯಗಳ ವಿಚಾರ ನಿಮ್ಮ ಮುಂದೆ ಇಟ್ಟು ನೀವು ಒಪ್ಪಿದರೆ ಸಾಕಾರಗೊಳಿಸುತ್ತೇನೆ. ನಿಮಗೆ ಪ್ರಜಾಕಾರ್ಮಿಕನ ಬಗ್ಗೆ ಅಸಮಾಧಾನವಾದರೆ ನಾನು ನಿಮ್ಮ ಮುಂದೆ ನಿಂತು ಹೋರಾಡಿ ಅವನನ್ನು ಕೆಳಗೆ ಇಳಿಸುತ್ತೇನೆ. ಇದು ನಾನು ಪ್ರಮಾಣ ಮಾಡಿ ಹೇಳುತ್ತಿದ್ದೇನೆ !!

  ಲಾಕ್ ಡೌನ್ ನಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ ನಟ ಉಪೇಂದ್ರ
  English summary
  Real Star Upendra has shared some thoughts and promises for the people by his Prajaakeeya political party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X