»   » ಕನ್ನಡ ತಾರೆಯರ ಹೊಸ ವರ್ಷದ ಸಂಭ್ರಮ: ಯಾರ್ಯಾರು? ಎಲ್ಲೆಲ್ಲಿ?

ಕನ್ನಡ ತಾರೆಯರ ಹೊಸ ವರ್ಷದ ಸಂಭ್ರಮ: ಯಾರ್ಯಾರು? ಎಲ್ಲೆಲ್ಲಿ?

Posted By:
Subscribe to Filmibeat Kannada

ಹಳೇ ವರ್ಷ ಮುಗಿಯುವ ಸಮಯ. ಹೊಸ ವರ್ಷ ಬರಮಾಡಿಕೊಳ್ಳುವ ಸಮಯ. ಈ ಫೀಲ್‌ ಹೊಸತನದ ಆತುರದೊಂದಿಗೆ, ಹಳೆಯ ನೆನಪುಗಳನ್ನು ಮೆಲುಕು ಹಾಕಿ ಮೊತ್ತೊಮ್ಮೆ ಮುಗ್ಧತೆಯ ಪ್ರದರ್ಶನ ಮಾಡುತ್ತದೆ.[ಈ ವರ್ಷ ಸೌಂಡ್ ಮಾಡಿ ಮಕಾಡೆ ಮಲಗಿದ ಸಿನಿಮಾಗಳಿವು..]

ನ್ಯೂ ಇಯರ್ ಪಾರ್ಟಿ ಎಲ್ಲಿ ಮಾಡೋದು, ಹೊಸ ವರ್ಷದ ಸೆಲೆಬ್ರೇ‍ಷನ್ ಹೇಗಿರಬೇಕು, ಎಲ್ಲಿ ಹೊಸ ವರ್ಷ ಆಚರಿಸೋಣ ಎಂಬ ಪ್ಲಾನ್‌ ಗಳನ್ನು ಈಗಾಗಲೇ ಬಹುಸಂಖ್ಯಾತರು ಮಾಡಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮವನ್ನು ಎಲ್ಲರೂ ವಿಶೇಷವಾಗೇ ಆಚರಿಸುತ್ತಾರೆ. ಆದ್ರೆ ಸ್ವಲ್ಪ ಕುತೂಹಲ ಎನಿಸುವುದು ನಮ್ಮ ಚಂದನವನದ ತಾರೆಯರ ಹೊಸ ವರ್ಷದ ಸೆಲೆಬ್ರೇಷನ್‌.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

ಅಂದಹಾಗೆ ಹಲವು ಸಿಹಿ-ಕಹಿ ನೆನಪುಗಳನ್ನು ನೀಡಿದ 2016 ನೇ ವರ್ಷಕ್ಕೆ Bye-Bye ಹೇಳಲು ನಮ್ಮ ಸ್ಯಾಂಡಲ್‌ ವುಡ್ ತಾರೆಯರು ತಮ್ಮದೇ ಆದ ಪ್ಲಾನ್ ಮಾಡಿಕೊಂಡಿರುತ್ತಾರೆ. ಹಾಗೆ ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಹಲವು ಸಂಕಲ್ಪಗಳನ್ನು ತೊಟ್ಟಿರುತ್ತಾರೆ. ಫಿಲ್ಮಿಬೀಟ್‌ ನಿಂದ 2017 ಕ್ಕೆ ಹಾಯ್‌ ಹೇಳುವ ಮುನ್ನ ಸ್ಯಾಂಡಲ್ ವುಡ್ ತಾರೆಯರಿಗೆ ಫೋನ್ ಮಾಡಿ ನಿಮ್ಮ ಮುಂದಿನ ವರ್ಷದ ಸಂಕಲ್ಪಗಳು ಏನು? ನ್ಯೂ ಇಯರ್ ಸೆಲೆಬ್ರೇಷನ್‌ ಪ್ಲಾನ್ ಏನು? ಅಂತ ಕೇಳಿದ್ವಿ. ಅದಕ್ಕೆ ಅವರು ಕೊಟ್ಟ ಉತ್ತರಗಳು ಇಲ್ಲಿವೆ ನೋಡಿ.[ಈ ವರ್ಷ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಯರು]

ಸ್ಯಾಂಡಲ್‌ ವುಡ್‌ ತಾರೆಯರಲ್ಲಿ ಯಾರ್ಯಾರು ಹೇಗೆ ನ್ಯೂ ಇಯರ್ ಆಚರಣೆ ಮಾಡುತ್ತಿದ್ದಾರೆ, ಯಾರ್ಯಾರ ಸಂಕಲ್ಪಗಳು ಏನೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅಕುಲ್‌ ಬಾಲಾಜಿ, ನಟ, ಟಿವಿ ನಿರೂಪಕ

" ಪ್ರತಿ ವರ್ಷ ಏನಾದ್ರು ಒಂದು ರೆಸಲ್ಯೂಶನ್ ಇಟ್ಕೋತೀವಿ. ಆದ್ರೆ ಅದನ್ನ ಪೂರ್ಣಗೊಳಿಸಬೇಕಲ್ವಾ..! ಅದೇ ಒಂದು ದೊಡ್ಡ ವಿಷಯ ಆಗಿಬಿಟ್ಟಿದೆ. ಜನರನ್ನು ಕಾರ್ಯಕ್ರಮಗಳ ಮೂಲಕ ಹಿಂದಿಗಿಂತ ಹೆಚ್ಚು ಮನರಂಜನೆ ಮಾಡುವುದು. ಪ್ರತಿ ವರ್ಷ ಅಟ್‌ಲೀಸ್ಟ್ 3 ದೇಶಗಳಿಗೆ ಫ್ಯಾಮಿಲಿ ಜೊತೆ ಟ್ರಾವೆಲ್‌ ಮಾಡಬೇಕು ಅನ್ನೋದು ನನ್ನ ಸಂಕಲ್ಪ. ಈ ವರ್ಷ ದುಬೈಗೆ ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಹೋಗ್‌ತಿದೀವಿ".

ಕಾರುಣ್ಯ ರಾಮ್, ನಟಿ

''ಹಳೇ ವರ್ಷ ಹೋಗಿ, ಹೊಸ ವರ್ಷ ಬರುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ನಾನು ನನ್ನ ಮನೆಯವರ ಜೊತೆ, ನಮ್ಮ ಮನೆಯಲ್ಲೇ ಹೊಸ ವರ್ಷವನ್ನ ಸ್ವಾಗತ ಮಾಡಿಕೊಳ್ಳುತ್ತೇನೆ. ಈ ವರ್ಷ ಬರಿ ಎರಡು ಸಿನಿಮಾ ಮಾಡಿದ್ದೇ, ಆದ್ರೆ, 2017ರಲ್ಲಿ ಹೊಸ ಹೊಸ ಪ್ರಾಜೆಕ್ಟ್ ಗಳು ಶುರುವಾಗುತ್ತಿದೆ. ಹೊಸ ಬಗೆಯ ಪಾತ್ರಗಳನ್ನ ಮಾಡಬೇಕೆಂದುಕೊಂಡಿದ್ದೇನೆ. ಹೆಚ್ಚು ಸಿನಿಮಾ ಮಾಡುವ ಯೋಚನೆ ಕೂಡ ನನಗಿದೆ''.

ಕಿಶೋರ್, ನಟ

"ನ್ಯೂ ಇಯರ್ ಸೆಲೆಬ್ರೇಷನ್ ಅನ್ನೋದು ಪ್ರತಿ ವರ್ಷ ಒಂದು ಹೊಸ ರೀತಿಯ ಸಂತೋಷಕ್ಕೆ ಬೇಕಾಗುತ್ತೆ. ವರ್ಷಗಳು ಹೋಗ್ತಾ ಇರುತ್ತೆ ಬರ್‌ತಾ ಇರುತ್ತೆ. ಆದ್ರೆ ನನ್ನ ಸಂಕಲ್ಪ ಬಂದು ಎಲ್ಲರೂ ತಮ್ಮ ಸುತ್ತ ಮುತ್ತಲಿನ ಸ್ಥಳವನ್ನು ನಮ್ಮದೇ ಅಂದುಕೊಂಡು ಪರಿಸರ ಮಾಲಿನ್ಯ ಮಾಡದೇ, ಯಾವುದೇ ಆಹಾರವನ್ನು ವೇಸ್ಟ್‌ ಮಾಡದೇ, ಮಿತವ್ಯಯವಾಗಿ ಬಳಸುವಂತೆ ಸಾಧ್ಯವಾದಷ್ಟು ಜಾಗೃತಿ ಮೂಡಿಸಬೇಕು ಎಂಬುದು. ಹಾಗೆ ಹೊಸ ವರ್ಷಕ್ಕೆ ನಮ್ಮ ಮಕ್ಕಳನ್ನು ಕರಿಯಪ್ಪನ ದೊಡ್ಡಿ ಯಲ್ಲಿರುವ ನಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಚರಣೆ ಮಾಡಬೇಕು ಎಂಬ ಪ್ಲಾನ್ ಮಾಡಿದೀವಿ".

ನಭಾ ನಟೇಶ್, ನಟಿ

''ಹೊಸ ವರ್ಷಕ್ಕಾಗಿ ಕಾಯುತ್ತಿದ್ದೇನೆ. ಯಾಕಂದ್ರೆ, ವಿದೇಶದಲ್ಲಿರುವ ನನ್ನ ಸ್ನೇಹಿತರೆಲ್ಲ ಬರ್ತಿದ್ದಾರೆ. ಅವರ ಜೊತೆಯಲ್ಲಿ ನನ್ನ ಹೊಸ ವರ್ಷದ ಸಂಭ್ರಮ. ಹೊಸ ವರ್ಷದಿಂದ ತುಂಬಾ ಸಂತೋಷವಾಗಿರುವುಕ್ಕೆ ನಿರ್ಧಾರ ಮಾಡಿದ್ದೀನಿ. ಕೇವಲ ಒಂದೇ ಕೆಲಸವನ್ನ ಮಾಡದೆ, ಬೇರೆ ಬೇರೆ ಕೆಲಸಗಳನ್ನ ಮಾಡುವ ಯೋಚನೆಯಲ್ಲಿದ್ದೀನಿ. ಆರೋಗ್ಯ ಮತ್ತು ಸಂತೋಷ ಕಾಪಾಡಿಕೊಳ್ಳುವುದೇ ನಮ್ಮ ಉದ್ದೇಶ.

''ಹೊಸ ವರ್ಷಕ್ಕಾಗಿ ಕಾಯುತ್ತಿದ್ದೇನೆ. ಯಾಕಂದ್ರೆ, ವಿದೇಶದಲ್ಲಿರುವ ನನ್ನ ಸ್ನೇಹಿತರೆಲ್ಲ ಬರ್ತಿದ್ದಾರೆ. ಅವರ ಜೊತೆಯಲ್ಲಿ ನನ್ನ ಹೊಸ ವರ್ಷದ ಸಂಭ್ರಮ. ಹೊಸ ವರ್ಷದಿಂದ ತುಂಬಾ ಸಂತೋಷವಾಗಿರುವುಕ್ಕೆ ನಿರ್ಧಾರ ಮಾಡಿದ್ದೀನಿ. ಕೇವಲ ಒಂದೇ ಕೆಲಸವನ್ನ ಮಾಡದೆ, ಬೇರೆ ಬೇರೆ ಕೆಲಸಗಳನ್ನ ಮಾಡುವ ಯೋಚನೆಯಲ್ಲಿದ್ದೀನಿ. ಆರೋಗ್ಯ ಮತ್ತು ಸಂತೋಷ ಕಾಪಾಡಿಕೊಳ್ಳುವುದೇ ನಮ್ಮ ಉದ್ದೇಶ.

ಗುರುನಂದನ್, ನಟ

"ವರ್ಷ ಪೂರ್ತಿ ಸ್ನೇಹಿತರ ಜೊತೆ ಆಗಾಗ ಪ್ರವಾಸ ಹೋಗುವುದು, ಪಾರ್ಟಿ ಮಾಡೋದು ಇದ್ದೇ ಇರುತ್ತೆ. ಸೋ ಅದಿಕ್ಕೆ ಹೊಸ ವರ್ಷದಲ್ಲಿ ಬೇರೆ ಕಡೆ ಹೋಗದೇ ಫ್ಯಾಮಿಲಿ ಜೊತೆ ಸೆಲೆಬ್ರೇಷನ್ ಮಾಡ್‌ತಿದೀನಿ. ಪ್ರತಿ ವರ್ಷ ವೃದ್ಧಾಶ್ರಮಕ್ಕೆ ಹೋಗಿ ಕೈಯಲ್ಲಿ ಆದ ಸೇವೆ ಮಾಡಿ ಬರುತ್ತೇನೆ. 2017 ರಲ್ಲಿ ಈಗಾಗಲೇ ಕೈಗೊಂಡಿರುವ 3 ಸಿನಿಮಾಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದೇ ನನ್ನ ಸಂಕಲ್ಪ".

ರೋಜಾ, ನಟಿ

''ಹೊಸ ವರ್ಷವನ್ನ ನಾನು ನಮ್ಮ ಮನೆಯವರ ಜೊತೆಯಲ್ಲಿ ಆಚರಣೆ ಮಾಡಿಕೊಳ್ಳುತ್ತೇನೆ. ಇನ್ನೂ ಈ ವರ್ಷದಲ್ಲಿ ಮತ್ತಷ್ಟು ಸಿನಿಮಾಗಳು ಹೆಚ್ಚಾಗಿವೆ. ಅವಕಾಶಗಳು ಹೆಚ್ಚಾಗುತ್ತಿವೆ. ಹೆಚ್ಚು ಸಿನಿಮಾಗಳು ಮಾಡುವುದು ನನ್ನ ಆಸೆ''.

ಮನೋರಂಜನ್, ನಟ

"ಹೊಸ ವರ್ಷ ಸೆಲೆಬ್ರೇಟ್‌ ಗಾಗಿ ಶ್ರೀಲಂಕಾ ಹೋಗ್‌ ತದೀನಿ. ನಮ್ಮ ಫ್ಯಾಮಿಲಿ ಸಹ ಅಲ್ಲಿಗೆ ಬರಬಹುದು. ಆದ್ರೆ ಖಚಿತವಾಗಿ ಗೊತ್ತಿಲ್ಲ. ಮುಂದಿನ ವರ್ಷದಲ್ಲಿ ಹಿಂದಿಗಿಂತ ಉತ್ತಮ ಸಿನಿಮಾ ಮಾಡಬೇಕೆಂಬ ನಿರ್ಧಾರ ಕೈಗೊಂಡಿದ್ದೇನೆ".

ಪೂಜಾ, ತಿಥಿ ಚಿತ್ರ ನಟಿ

"ಅಕ್ಚುವಲಿ ನನಗೆ 2 ನೇ ತಾರೀಖು ಎಕ್ಸಾಮ್ ಇರುವುದರಿಂದ ಹೊಸ ವರ್ಷ ಅಷ್ಟೊಂದು ಚೆನ್ನಾಗಿ ಸೆಲೆಬ್ರೇಟ್‌ ಮಾಡಲು ಸಮಯ ಸಿಗೋದಿಲ್ಲ. ಸೋ ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಅಂತಾನೆ ಏನು ಪ್ಲಾನ್ ಮಾಡಿಲ್ಲ. 2017 ರಲ್ಲಿ ಉತ್ತಮವಾಗಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ನನ್ನ ಉದ್ದೇಶ".

ಸಂಚಾರಿ ವಿಜಯ್, ನಟ

"ಮೊದಲೆಲ್ಲ ಹೊಸ ವರ್ಷ ಸೆಲೆಬ್ರೇಷನ್ ಮಾಡೋದು ಕ್ರೇಜ್‌ ಇತ್ತು. ಈ ವರ್ಷ ಹಲವು ಕೆಲಸದ ಒತ್ತಡದಿಂದ ನ್ಯೂ ಇಯರ್ ಸೆಲೆಬ್ರೇಷನ್ ಮಾಡೋಕೆ ಆಗ್‌ ತಿಲ್ಲ. ಆದರೆ ಹೊಸ ವರ್ಷದಲ್ಲಿ ಸಾಮಾಜಿಕವಾಗಿ ಏನಾದ್ರು ಒಳ್ಳೇ ಕೆಲಸಗಳನ್ನು ಮಾಡಬೇಕು, ಹಾಗೆ ಈಗಾಗಲೇ ನಿರ್ಮಾಣದಲ್ಲಿರುವ ಸಿನಿಮಾಗಳನ್ನು ಉತ್ತಮವಾಗಿ ಮುಗಿಸಬೇಕು ಎಂಬುದು ನನ್ನ ಸಂಕಲ್ಪ".

English summary
News Year is coming towards. All peoples are making plans. Sandalwood Stars are always celebrates diffrently. So here is what they said about their new year plan and resolution.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X