»   » ಈ ವರ್ಷ ಸೌಂಡ್ ಮಾಡಿ ಮಕಾಡೆ ಮಲಗಿದ ಸಿನಿಮಾಗಳಿವು..

ಈ ವರ್ಷ ಸೌಂಡ್ ಮಾಡಿ ಮಕಾಡೆ ಮಲಗಿದ ಸಿನಿಮಾಗಳಿವು..

Posted By:
Subscribe to Filmibeat Kannada

ಹೊಸಬರ 'ಕರ್ವ', 'ಯು ಟರ್ನ್', 'ಮಮ್ಮಿ ಸೇವ್ ಮಿ' ಯಾವುದೇ ನಿರೀಕ್ಷೆ ಮೂಡಿಸದೇ ಪ್ರೇಕ್ಷಕರನ್ನು ಗೆದ್ದಿತು. ಆದ್ರೆ, ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿರುವ ಕೆಲವು ಸ್ಟಾರ್‌ ನಟರ ಚಿತ್ರಗಳು ಮಕಾಡೆ ಮಲಗಿದವು. ಇದು 2016 ರ ದುರಂತ.!

2016 ರಲ್ಲಿ ಫ್ಲಾಪ್ ಆದ ಅತಿ ನಿರೀಕ್ಷೆ ಹುಟ್ಟಿಸಿದ ಕನ್ನಡ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ....[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

ನಾಗರಹಾವು

ಇಹಲೋಕ ತ್ಯಜಿಸಿರುವ 'ಸಾಹಸ ಸಿಂಹ' ಡಾ.ವಿಷ್ಣುವರ್ಧನ್ ರವರನ್ನ ತೆರೆ ಮೇಲೆ 'ಜೀವಂತ'ವಾಗಿಸಿದ ಸಿನಿಮಾ 'ನಾಗರಹಾವು'. ಇದೇ ಕಾರಣಕ್ಕೆ 'ನಾಗರಹಾವು' ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡಿತ್ತು. ಇನ್ನೂ ಇದೇ ಚಿತ್ರದಲ್ಲಿ ರಮ್ಯಾ 'ನಾಗಣಿ' ಪಾತ್ರ ನಿರ್ವಹಿಸಿದ್ದರಿಂದ 'ನಾಗರಹಾವು' ಮೇಲೆ ಎಲ್ಲರ ಕಣ್ಣಿತ್ತು. ಆದ್ರೆ, ಚಿತ್ರದಲ್ಲಿ ಗಟ್ಟಿಕಥೆ ಇಲ್ಲದ ಕಾರಣ ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪುವಲ್ಲಿ 'ನಾಗರಹಾವು' ಫೇಲ್ ಆಯ್ತು. ಬಿಡುಗಡೆಗೂ ಮುನ್ನ 'ನಾಗರಹಾವು' ಎಷ್ಟು ಬುಸುಗುಡ್ತೋ, ರಿಲೀಸ್ ಆದ್ಮೇಲೆ ಅಷ್ಟೇ ತಣ್ಣಗಾಗೋಯ್ತು.['ನಾಗರಹಾವು' ವಿಮರ್ಶೆ: ಡಾ.ವಿಷ್ಣುವರ್ಧನ್ 201 ನಾಟೌಟ್]

'ವಿರಾಟ್' ಸಿನಿಮಾ

2012 ರಂದು ಸೆಟ್ಟೇರಿದ 'ವಿರಾಟ್' ಸಿನಿಮಾ ಬಿಡುಗಡೆ ಆಗಿದ್ದು 2016 ರಲ್ಲಿ. ಆದರೂ ಹೈ ಎಕ್ಸ್ ಪೆಕ್ಟೇಷನ್ ಇಟ್ಟುಕೊಂಡು 'ವಿರಾಟ್' ನೋಡಿದ ಸಿನಿ ಪ್ರಿಯರಿಗೆ ಕಿಕ್ ಸಿಗಲಿಲ್ಲ. ರಿಲೀಸ್ ಗೂ ಮೊದಲೇ 'ವಿರಾಟ್' ಮಾಡಿದ್ದ ಸೌಂಡ್, ಥಿಯೇಟರ್‌ ಒಳಗೆ ನಡೆಯಲಿಲ್ಲ. ಇತ್ತ ಕಲೆಕ್ಷನ್‌ ನಲ್ಲೂ 'ವಿರಾಟ್' ಸದ್ದು ಮಾಡಲಿಲ್ಲ.[ದರ್ಶನ್ 'ವಿರಾಟ್' ಒಂದು ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]

ಅಪೂರ್ವ

61 ವರ್ಷದ ಮುದುಕ ಹಾಗೂ 19ರ ಹರೆಯದ ತರುಣಿ ನಡುವಿನ ಅಪರೂಪದ ಪ್ರಯೋಗಾತ್ಮಕ ಪ್ರೇಮ ಕಾವ್ಯ 'ಅಪೂರ್ವ'. ಅದರಲ್ಲೂ 'ಅಪೂರ್ವ' ಸೂತ್ರಧಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಆಗಿದ್ರಿಂದ ಸಿನಿ ಪ್ರೇಕ್ಷಕರು ಸಖತ್ ಕ್ರೇಜಿ ಆಗಿ 'ಅಪೂರ್ವ' ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತು ಕಾಯ್ತಿದ್ರು. ಆದ್ರೆ, ಯಾಕೋ ಏನೋ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 'ಅಪೂರ್ವ' ಸಿನಿಮಾ ಥಿಯೇಟರ್‌ ಗಳಲ್ಲಿ ಅಪರೂಪವಾಯಿತು.[ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]

ನಟರಾಜ ಸರ್ವೀಸ್

'ನಟರಾಜ'ನ ಪ್ಲಾನ್ ಸ್ಯಾಂಡಲ್‌ ವುಡ್‌ನಲ್ಲಿ ಹೆಚ್ಚು ದಿನಗಳ ಕಾಲ ವರ್ಕ್‌ ಔಟ್ ಆಗಲೇಇಲ್ಲ ಎಂಬುದು ಕೂಡ ಸತ್ಯ. 'ನಟರಾಜ್‌ ಸರ್ವೀಸ್' ಸಿನಿಮಾದಲ್ಲಿದ್ದ "ಅಲ್ಲಾ ಅಲ್ಲಾ ನಟರಾಜ ಬರ್ತಾ ನಲ್ಲಾ..' ಸಾಂಗ್ ಹೆಚ್ಚು ಎಕ್ಸ್‌ ಪೆಕ್ಟ್‌ ಟೇಶನ್ ಮೂಡಲು ಕಾರಣವಾಗಿತ್ತು. ಆದ್ರೆ, 'ನಟರಾಜ ಸರ್ವೀಸ್' ಪ್ರೇಕ್ಷಕರಿಗೆ ಖುಷಿ ಕೊಡಲಿಲ್ಲ.[ವಿಮರ್ಶೆ: ನಟರಾಜ 'ಸೂಪರ್', ಸರ್ವೀಸ್ 'ಸುಮಾರು']

ಮುಂಗಾರು ಮಳೆ 2

ಭಟ್ಟರ ನಿರ್ದೇಶನದಲ್ಲಿ 2006 ರಲ್ಲಿ ಮೂಡಿ ಬಂದಿದ್ದ 'ಮುಂಗಾರು ಮಳೆ' ಸಿನಿಮಾ ಯಾವುದೇ ನಿರೀಕ್ಷೆ ಇಲ್ಲದೆಯೇ 865ಕ್ಕಿಂತ ಹೆಚ್ಚು ದಿನ ಯಶಸ್ವಿ ಆಗಿ ಮಲ್ಟಿಪ್ಲೆಕ್ಸ್‌ ಗಳಲ್ಲಿ ಪ್ರದರ್ಶನ ಕಂಡಿತ್ತು. ಇದೇ ಕಾರಣಕ್ಕೆ ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಸ್ಯಾಂಡಲ್‌ ವುಡ್‌ ನಲ್ಲಿ ಬೇಡ ಬೇಡ ಎಂದ್ರು ಸಿನಿ ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಆದ್ರೆ ಅದನ್ನ ಸಮರ್ಥವಾಗಿ ತಲುಪುವಲ್ಲಿ ಚಿತ್ರತಂಡ ಯಶಸ್ವಿ ಆಗಲಿಲ್ಲ.[ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!]

ರನ್‌ ಆಂಟನಿ

ಡಾ.ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಸಿದ್ದಾರ್ಥ' ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಸಾಮಾನ್ಯವಾಗಿ ಡಾ.ರಾಜ್ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುವ ಚಿತ್ರಗಳ ಬಗ್ಗೆ ಕ್ಲಾಸ್ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚು. ಹೀಗಾಗಿ ಸಹಜವಾಗಿ 'ರನ್ ಆಂಟನಿ' ಬಗ್ಗೆ ಕೂಡ ಅಣ್ಣಾವ್ರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಎಕ್ಸ್ ಪೆಕ್ಟೇಷನ್ ಲೆವೆಲ್ ನ ಹೈ ಮಾಡಿಕೊಂಡಿದ್ದರು. ಆದ್ರೆ, ನಿಧಾನಗತಿಯಲ್ಲಿ 'ರನ್ ಆಂಟನಿ' ಓಡಿದ್ದರಿಂದ ಯಶಸ್ವಿ ಚಿತ್ರಗಳ ಸಾಲಿನಿಂದ ಹಿಂದೆ ಬಿತ್ತು.[ವಿಮರ್ಶೆ: ಸ್ಲೋ ಮೋಷನ್ ನಲ್ಲಿ ಓಡುವ 'ರನ್ ಆಂಟನಿ']

English summary
Here is the Complete list of Kannada Movies which did not reach the expectation of Cine-Lovers and turned out to be flop.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada