For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಯರು

  By Suneel
  |

  2016 ನೇ ವರ್ಷಕ್ಕೆ ಬಾಯ್‌ ಹೇಳೋ ಸಮಯ. ಹಾಗೆ 2017 ನೇ ವರ್ಷಕ್ಕೆ ಹಾಯ್‌ ಹಾಯ್‌ ಹೇಳಿ ಸ್ವಾಗತಿಸುವ ಸಮಯ ಎರಡೂ ಸಹ ದಿನೇ ದಿನೇ ಹತ್ತಿರಕ್ಕೆ ಬರುತ್ತಿದೆ. ಹೊಸ ವರ್ಷಕ್ಕೆ ಹಾಯ್‌ ಹೇಳೋ ಮುನ್ನ 2016 ರಲ್ಲಿ ಚಂದನವನದಲ್ಲಿ ಯಾರ್ಯಾರು ಯಾವ್ಯಾವ ಪ್ರಶಸ್ತಿಗಳನ್ನು ಪಡೆದ್ರು, ಯಾರ್ಯಾರ್ ಲವ್ ಬ್ರೇಕಪ್ ಆಯ್ತು, ಯಾರ್ಯಾರ್ ನಡುವೆ ಹೆಚ್ಚು ಗಾಸಿಪ್‌ ಗಳಾದವು, ಸ್ಯಾಂಡಲ್‌ ವುಡ್‌ ಬೆಳವಣಿಗೆಗೆ ಪಾತ್ರರಾಗಿ ಸತ್ತವರು ಯಾರ್ಯಾರು, ಸಂಭ್ರಮಗಳೆಷ್ಟು ಅಂತ ಹೇಳೋ ಸಮಯವಿದು. ಸಿನಿಪ್ರಿಯರು ತಿಳಿಯೋ ಸಮಯವು ಸಹ.(ಈ ವರ್ಷ ಹಸೆಮಣೆ ಏರಿ ಚತುರ್ಭಜರಾದ ತಾರೆಯರು )

  ಅಂದಹಾಗೆ ಈ ಬಾರಿ ಹಲವು ಸಂಭ್ರಮಗಳ ಜೊತೆಗೆ ದುರ್ಘಟನೆಗಳು ನಡೆದು ಹೋಗಿವೆ. ಇನ್ನೂ ಹಲವು ಸ್ಯಾಂಟಲ್‌ ವುಡ್ ಸೆಲೆಬ್ರಿಟಿಗಳು ಎಂಗೇಜ್‌ ಆಗಿದಾರೆ. ಹಲವರು ತಮ್ಮ ಬ್ಯಾಚುಲರ್ ಲೈಫ್‌ಗೆ ಬಾಯ್‌ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾವಿಲ್ಲಿ 2016 ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್‌ ವುಡ್‌ ಸೆಲೆಬ್ರಿಟಿಗಳ ಪಟ್ಟಿ ನೀಡುತ್ತಿದ್ದೇವೆ. ಯಾರೆಲ್ಲಾ ಈ ವರ್ಷ ಸಪ್ತಪದಿ ತುಳಿದ್ರು ಅನ್ನೋದನ್ನ ನೋಡಿ.

  ಬ್ಯಾಚುಲರ್ ಲೈಫ್‌ಗೆ ಬಾಯ್‌ ಹೇಳಿದ ರಾಕಿಂಗ್ ಸ್ಟಾರ್ ಯಶ್‌ ಮತ್ತು ರಾಧಿಕಾ ಪಂಡಿತ್

  ಬ್ಯಾಚುಲರ್ ಲೈಫ್‌ಗೆ ಬಾಯ್‌ ಹೇಳಿದ ರಾಕಿಂಗ್ ಸ್ಟಾರ್ ಯಶ್‌ ಮತ್ತು ರಾಧಿಕಾ ಪಂಡಿತ್

  ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ (ಡಿಸೆಂಬರ್ 9) ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ದಿ ತಾಜ್‌ ವೆಸ್ಟ್‌ ಎಂಡ್ ಹೊರಾಂಗಣದಲ್ಲಿ ಯಶ್‌-ರಾಧಿಕಾ ಪಂಡಿತ್ ಮದುವೆ ನಡೆಯಿತು.(ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?)

  (ಯಶ್‌ ಮತ್ತು ರಾಧಿಕಾ ಮದುವೆ ಫೋಟೋ ಗ್ಯಾಲರಿ)

  ನಿಖಿತಾ ತುಕ್ರಲ್ ಅರೇಂಜ್ಡ್ ಮ್ಯಾರೇಜ್‌ ಆದ್ರು

  ನಿಖಿತಾ ತುಕ್ರಲ್ ಅರೇಂಜ್ಡ್ ಮ್ಯಾರೇಜ್‌ ಆದ್ರು

  ತೆಲುಗು, ತಮಿಳು, ಮಲೆಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ನಿಖಿತಾ ತುಕ್ರಲ್‌ ಮತ್ತು ಗಗನ್‌ ದೀಪ್ ಸಿಂಘ್ ಮಗೊ ತಮ್ಮ ದಾಂಪತ್ಯ ಜೀವನಕ್ಕೆ ಅಕ್ಟೋಬರ್ ನಲ್ಲಿ ಕಾಲಿಟ್ಟರು.(ಸೆಕೆಂಡ್ ಇನ್ನಿಂಗ್ಸ್ ಗೆ ಅಣಿಯಾದ ನಟಿ ನಿಖಿತಾ ತುಕ್ರಲ್)

  ದುನಿಯಾ ವಿಜಯ್‌ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

  ದುನಿಯಾ ವಿಜಯ್‌ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

  ನಟ ದುನಿಯ ವಿಜಯ್‌, ನಟಿ ಕೀರ್ತಿ ಪಟಾಡಿ ಅರವರೊಂದಿಗೆ ಎರಡನೇ ವಿವಾಹವಾದರು. ಹೌದು, ಜಸ್ಟ್‌ ಮಾತ್‌ ಮಾತಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ನಟಿ ಕೀತ್ರಿ ಪಟಾಡಿ ಅವರೊಂದಿಗೆ ವಿಜಯ್‌ 2ನೇ ಮದುವೆ ಆದರು. ದೀಪಿಕಾ ಕಾಮಯ್ಯ ಮದುವೆ ಫೋಟೋ ಗ್ಯಾಲರಿ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿಂಗಾರಿ ಹುಡುಗಿ ದೀಪಿಕಾ ಕಾಮಯ್ಯ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿಂಗಾರಿ ಹುಡುಗಿ ದೀಪಿಕಾ ಕಾಮಯ್ಯ

  'ಚಿಂಗಾರಿ' ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ಆಸ್ಟ್ರೇಲಿಯಾ ಮೂಲದ ಉದ್ಯಮಿ ಸುಮಂತ್ ಗೋಪಿ ಜೊತೆ ಅಸಮಣೆ ಏರಿದರು. ಇವರ ವಿವಾಹ ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಮಣಿಪಾಲ್‌ ಕೌಂಟಿ ರೆಸಾರ್ಟ್‌ ನಲ್ಲಿ ಡೆಸೆಂಬರ್ 4 ರಂದು ನೇರವೇರಿತು.(ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಚಿಂಗಾರಿ' ಹುಡುಗಿ ದೀಪಿಕಾ ಕಾಮಯ್ಯ)

  ನವ ಬಾಳಿಗೆ ಕಾಲಿಟ್ಟ 'ಜಂಭದ ಹುಡುಗಿ' ನಾಯಕಿ ಪ್ರಿಯಾ ಹಾಸನ್

  ನವ ಬಾಳಿಗೆ ಕಾಲಿಟ್ಟ 'ಜಂಭದ ಹುಡುಗಿ' ನಾಯಕಿ ಪ್ರಿಯಾ ಹಾಸನ್

  'ಜಂಭದ ಹುಡುಗಿ' ಚಿತ್ರದ ಖ್ಯಾತಿಯ ನಟಿ ಪ್ರಿಯಾ ಹಾಸನ್ ಮತ್ತು ರಾಮ್‌ ಸೆಪ್ಟೆಂಬರ್ 8 ರಂದು ನವ ಬಾಳಿಗೆ ಕಾಲಿಟ್ಟರು. ಇವರ ಮದುವೆ ಯಶವಂತಪುರದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ ಸರಳವಾಗಿಯೇ ನಡೆಯಿರು.(.[ಮದುವೆ ಬಂಧನಕ್ಕೊಳಗಾದ 'ಬಿಂದಾಸ್ ಹುಡುಗಿ' ನಟಿ ಪ್ರಿಯಾ ಹಾಸನ್]

  ಹಸೆಮಣೆ ಏರಿದ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ

  ಹಸೆಮಣೆ ಏರಿದ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ

  ಸ್ಯಾಂಡಲ್‌ ವುಡ್ ನಟಿ ಅನು ಪ್ರಭಾಕರ್ ಮತ್ತು ನಟ ಕಮ್‌ ಮಾಡೆಲ್ ರಘು ಮುಖರ್ಜಿ ಈ ವರ್ಷ ಹಸೆಮಣೆ ಏರಿದರು. ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇವರ ಮದುವೆ ಏಪ್ರಿಲ್ 25 ರಂದು ನಡೆಯಿರು.(ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ)

  ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಿರೂಪ್‌ ಭಂಡಾರಿ

  ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಿರೂಪ್‌ ಭಂಡಾರಿ

  'ರಂಗಿತರಂಗ' ಖ್ಯಾತಿಯ ಚಾಕಲೇಟ್ ಹೀರೋ ನಿರೂಪ್‌ ಭಂಡಾರಿ ತಮ್ಮ ದೀರ್ಘಕಾಲದ ಗೆಳತಿ ಧನ್ಯಾ ಜೊತೆ ಈ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಮಾರ್ಚ್ 27 ರಂದು ಮೈಸೂರಿನ ಸೈಲೆಂಟ್ ಶೋರ್ಸ್ ರೆಸಾರ್ಟ್‌ನಲ್ಲಿ ನಿರೂಪ್ ಭಂಡಾರಿ -ಧನ್ಯಾ ಮದುವೆ ಅದ್ಧೂರಿಯಾಗಿ ನೆರವೇರಿತು.(ಚಿತ್ರಗಳು ; 'ರಂಗಿತರಂಗ' ನಿರೂಪ್ ಭಂಡಾರಿ ಮದುವೆ ಸಂಭ್ರಮ)

  English summary
  In 2016 so many sandalwood stars were got married. So In Filmibeat we are giving the list of who got married in the year 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X