»   » 'ಬಾಹುಬಲಿ-2' ನಲ್ಲಿ ಶಾರುಖ್: ಚಿತ್ರತಂಡ ಕೊಟ್ಟ ಉತ್ತರ ಇದು..

'ಬಾಹುಬಲಿ-2' ನಲ್ಲಿ ಶಾರುಖ್: ಚಿತ್ರತಂಡ ಕೊಟ್ಟ ಉತ್ತರ ಇದು..

Posted By:
Subscribe to Filmibeat Kannada

ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದಿನಿಂದ ಫೋಟೋ ಸಹಿತ ಹರಿದಾಡುತ್ತಿತ್ತು. ಆದರೆ ಕಿಂಗ್ ಖಾನ್ ನಟಿಸಿದ್ದಾರೋ ಇಲ್ಲವೋ ಎಂಬ ಸುದ್ದಿ ಖಚಿತವಾಗಿ ತಿಳಿದಿರಲಿಲ್ಲ. ಈಗ ಈ ಗೊಂದಲಕ್ಕೆ ಚಿತ್ರತಂಡವೇ ಉತ್ತರ ಕೊಟ್ಟಿದೆ.[ಬಾಲಿವುಡ್ ಚಿತ್ರಕ್ಕೆ ಪ್ರಭಾಸ್ ಚಾಲನೆ: 150 ಕೋಟಿ ಬಜೆಟ್]

ಎಸ್.ಎಸ್. ರಾಜಮೌಳಿ ಆಕ್ಷನ್ ಕಟ್ ಹೇಳಿರುವ 'ಬಾಹುಬಲಿ-2' ಸಿನಿಮಾ ದಲ್ಲಿ ಬಾಹುಬಲಿ(ಪ್ರಭಾಸ್) ಮತ್ತು ಬಲ್ಲಾಳದೇವಾ (ರಾಣಾ ದಗ್ಗುಬಾಟಿ) ಅವರ ನಡುವೆ ಮಧ್ಯವರ್ತಿಯಾಗಿ ಶಾರುಖ್ ಖಾನ್ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಚಿತ್ರತಂಡ ಇದು ರೂಮರ್ಸ್, ಶಾರುಖ್ ನಟಿಸಿಲ್ಲ ಎಂದು ಹೇಳಿದೆ.['ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್: ನಿಜನಾ?..]

Shah Rukh Khan is NOT a part of 'Baahubali 2'

'ಶಾರುಖ್ ಖಾನ್ ಅವರನ್ನು ಚಿತ್ರಕ್ಕೆ ಸೇರಿಸಿಕೊಳ್ಳುವ ಆಸೆ ನಮಗೂ ಇತ್ತು. ಆದರೆ ಅವರು ಅಭಿನಯಿಸಲಿಲ್ಲ' ಎಂದು 'ಬಾಹುಬಲಿ-2' ಚಿತ್ರತಂಡ ಟ್ವೀಟ್ ಮಾಡಿದೆ. ಎಸ್ ಎಸ್ ರಾಜಮೌಳಿ 'ಬಾಹುಬಲಿ-2' ಟೀಸರ್ ಮತ್ತು ಟ್ರೈಲರ್ ಅನ್ನು ಲಾಂಚ್ ಮಾಡಲು ಶಾರುಖ್ ಖಾನ್ ಅವರಿಗೆ ಆಹ್ವಾನ ನೀಡಿದ್ದರು ಎಂದು ಈ ಹಿಂದೆ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಸುಳ್ಳು ಸುದ್ದಿ ಸಹಜವಾಗಿ ಹರಿದಾಡಿದೆ.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

ಅಂತೂ ಟಾಲಿವುಡ್ ಸಿನಿಮಾ ವೊಂದರಲ್ಲಿ ಶಾರುಖ್ ಖಾನ್ ಅಭಿನಯ ನೋಡಬೇಕು ಎಂದು ಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಮುಂತಾದವರ ತಾರಾಬಳಗ ಇರುವ 'ಬಾಹುಬಲಿ-2' ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

English summary
Baahubali makers team took to Twitter to announce that Shah Rukh Khan will not be part of Baahubali The Conclusion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada