For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ಶಿವಣ್ಣ ಚಿತ್ರದ ಆಡಿಯೋ ಬಿಡುಗಡೆ

  By Suneel
  |

  ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಶಿವಣ್ಣನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ ಈಗ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ವಿಶೇಷ ಸುದ್ದಿಯೊಂದನ್ನು ನೀಡಿದೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಧ್ವನಿ ಸುರುಳಿಯನ್ನು ಏಪ್ರಿಲ್ 24 ರಂದು ವರನಟ ಡಾ.ರಾಜ್ ಕುಮಾರ್ ರವರ 89ನೇ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಆಡಿಯೋ ರಿಲೀಸ್ ಬಿಡುಗಡೆ ಎಂಬ ಸಂತೋಷ ಒಂದು ಕಡೆ ಆದರೆ, ಸೆಂಚುರಿ ಸ್ಟಾರ್ ಶಿವಣ್ಣನ ಚಿತ್ರದ ಆಡಿಯೋ ಬಿಡುಗಡೆ ಅಪ್ಪಾಜಿ ಹುಟ್ಟುಹಬ್ಬದ ದಿನ ನೆರವೇರಲಿರುವುದು ಇನ್ನೊಂದು ರೀತಿಯಿಂದ ವಿಶೇಷ ಎನಿಸಿದೆ.

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ಯೋಗಿ ಜಿ ರಾಜ್ ಆಕ್ಷನ್ ಕಟ್ ಹೇಳಿದ್ದು, ಹ್ಯಾಟ್ರಿಕ್ ಹೀರೋಗೆ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಉಳಿದಂತೆ ವಿಶಾಲ್ ಹೆಗಡೆ, ಸಾಧು ಕೋಕಿಲಾ, ಚಿಕ್ಕಣ್ಣ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಯಣ್ಣ-ಭೊಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ.[ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಔಟ್]

  English summary
  Kannada Actor Shiva Rajkumar Starrer 'Bangara s/o Bangaradha Manushya' Film Audio Releasing on Dr.Rajkumar Birthday(April 24).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X