For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಚಿತ್ರಕ್ಕೆ ಮಾರ್ಕೆಟ್ ಇಲ್ಲ ಅನ್ನೋರಿಗೆ ಇಲ್ಲಿದೆ ಉತ್ತರ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಕ್ಕೆ ಮಾರ್ಕೆಟ್ ಇಲ್ಲ ಎನ್ನುವವರಿಗೆ ಭಜರಂಗಿ ಚಿತ್ರದ ನಿರ್ಮಾಪಕರು ಒಂದು ಮಾತನ್ನು ಹೇಳಿದ್ದಾರೆ.

  ಭಜರಂಗಿ ಚಿತ್ರದ ಟಿವಿ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಈ ಚಿತ್ರದ ರೈಟ್ಸ್ ಮಾರಾಟವಾಗಿರುವ ಸುದ್ದಿ ಶಿವಣ್ಣನಿಗೆ ಉತ್ತಮ ಮಾರುಕಟ್ಟೆಯಿಲ್ಲ ಎನ್ನುವವರಿಗೆ ಸೂಕ್ತ ಉತ್ತರ ನೀಡುತ್ತದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಚಿತ್ರದ ನಿರ್ಮಾಪಕ ಜ್ಯಾಕ್ ಮಂಜು ಹೇಳಿದ್ದಾರೆ.

  ಚಿತ್ರದ ಮತ್ತೊಬ್ಬ ನಿರ್ಮಾಪಕರಾದ ಕೆಪಿ ಶ್ರೀಕಾಂತ್, ಶಿವರಾಜ್ ಕುಮಾರ್ ಹೆಸರಿಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಶಿವಣ್ಣ ಚಿತ್ರ ಹಿಟ್ ಆಗೋಲ್ಲ, ಅವರ ಮಾರ್ಕೆಟ್ ಬಿದ್ದು ಹೋಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಚಿತ್ರದ ಟಿವಿ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಇವರಿಗೆಲ್ಲಾ ಉತ್ತರ ನೀಡುತ್ತದೆ ಎಂದಿದ್ದಾರೆ.

  ಬೇರೆ ವಾಹಿನಿಗಳಿಂದಲೂ ನಮಗೆ ಇದಕ್ಕಿಂತ ಹೆಚ್ಚಿನ ಮೊತ್ತದ ಆಫರ್ ಗಳಿದ್ದವು. ಆದರೆ ನಾವು ಆ ವಾಹಿನಿಗೆ ಕಮಿಟ್ ಆಗಿದ್ದುದರಿಂದ ಆ ಮೊತ್ತಕ್ಕೆ ಒಪ್ಪಿಕೊಂಡೆವು ಎಂದು ನಿರ್ಮಾಪಕರು ಹೇಳಿದ್ದಾರೆ. ಚಿತ್ರದ ಟಿವಿ ರೈಟ್ಸ್ 3.25 ಕೋಟಿ ರೂಪಾಯಿಗೆ ಮಾರಾಟವಾಗಿದೆ, ಕೆಲವು ದಿನಗಳ ಹಿಂದೆ ಅಗ್ರೀಮೆಂಟ್ ಸೈನ್ ಮಾಡಿದ್ದೇವೆ ಎಂದು ನಿರ್ಮಾಪಕರು ಸ್ಪಷ್ಟ ಪಡಿಸಿದ್ದಾರೆ.

  ಇದು ಶಿವಣ್ಣನ ಚಿತ್ರವೊಂದಕ್ಕೆ ಬಂದಿರುವ ಅತಿದೊಡ್ಡ ಮೊತ್ತದ ಟಿವಿ ರೈಟ್ಸ್ ಎನ್ನಲಾಗುತ್ತಿದೆ. (ಭಜರಂಗಿ - ಧ್ವನಿಸುರುಳಿ ವಿಮರ್ಶೆ)

  ಭಾರೀ ಹೈಪ್ ಇರುವ ಚಿತ್ರ

  ಭಾರೀ ಹೈಪ್ ಇರುವ ಚಿತ್ರ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಈ ವರ್ಷದ ಭಾರೀ ಹೈಪ್ ಇರುವ ಚಿತ್ರಗಳಲ್ಲೊಂದು. ಕಳೆದ ವಾರವಷ್ಟೇ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿತ್ತು. ಚಿತ್ರದ ಆಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು 'ಬಾಸು ನಮ್ಮ ಬಾಸು' ಹಾಡು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

  ಟಿವಿ ರೈಟ್ಸ್

  ಟಿವಿ ರೈಟ್ಸ್

  ಭಜರಂಗಿ ಚಿತ್ರತಂಡ ಸಂತೋಷ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರದ ಸಟಿಲೈಟ್ ರೈಟ್ಸ್ ಭರ್ಜರಿಯಾಗಿ ಮಾರಾಟವಾಗಿದೆ. ಇದರಿಂದ ರಾಜ್ಯಾದ್ಯಂತ ಶಿವಣ್ಣನ ಅಭಿಮಾನಿಗಳು ಫುಲ್ ಖುಷ್!

  ಹರ್ಷ

  ಹರ್ಷ

  ಶಿವಣ್ಣ ಮತ್ತು ನಿರ್ದೇಶಕ ಹರ್ಷ ಹೊಂದಾಣಿಕೆಯಲ್ಲಿ ಬರುತ್ತಿರುವ ಮೊದಲ ಚಿತ್ರವಿದು. ಶಿವಣ್ಣ, ಐಂದ್ರಿತಾ, ಬುಲೆಟ್ ಪ್ರಕಾಶ್, ಊರ್ವಶಿ, ಸಾಧು ಕೋಕಿಲ, ಹೊನ್ನವಳ್ಳಿ ಕೃಷ್ಣ, ತಬ್ಲಾ ನಾಣಿ ಪ್ರಮುಖ ಭೂಮಿಕೆಯಲ್ಲಿದ್ದಾರೆ.

  ಸೌರವ್ ಲೋಕೇಶ್

  ಸೌರವ್ ಲೋಕೇಶ್

  ವೃತ್ತಿಪರ ಸ್ಟೇಜ್ ಕಲಾವಿದ ಸೌರವ್ ಲೋಕೇಶ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

  ಅರ್ಜುನ ಜನ್ಯ

  ಅರ್ಜುನ ಜನ್ಯ

  ಹಂಸಲೇಖ, ಗುರುಕಿರಣ್, ಹರಿಕೃಷ್ಣ ಸಾಗಿದ ಯಶಸ್ಸಿನ ಹಾದಿಯಲ್ಲಿ ಯುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಗುತ್ತಿದ್ದಾರೆ. ಭಜರಂಗಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  English summary
  Shivaraj Kumar’s upcoming movie Bajarangi TV rights sold for record price. This is an answer to those who thought that Shivarajkumar movies have no market. Few People Were Trying To Spoil Shivanna's Name, Producers of Bajarangi movie. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X