For Quick Alerts
  ALLOW NOTIFICATIONS  
  For Daily Alerts

  'ಮದಗಜ' ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

  |

  ಶ್ರೀಮುರಳಿ ನಟಿಸಿರುವ 'ಮದಗಜ' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಸಿನಿಮಾದ ಮೇಲೆ ಶ್ರೀಮುರಳಿ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

  'ಮದಗಜ' ಸಿನಿಮಾವನ್ನು ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಗಿದ್ದರೆ ಮೊದಲ ಸಿನಿಮಾ ಎಷ್ಟು ಹಣ ಗಳಿಸಿದೆ ಎಂಬುದು ಕುತೂಹಲ ಕೆರಳಿಸಿದೆ.

  'ಮದಗಜ' ಸಿನಿಮಾವು ಮೊದಲ ದಿನ 7.86 ಕೋಟಿ ರೂಪಾಯಿ ಹಣ ಗಳಿಸಿದೆ. ಇದು ಸಾಮಾನ್ಯ ಮೊತ್ತವೇನಲ್ಲ. ಮೊದಲ ದಿನದ ಕಲೆಕ್ಷನ್ ಕಂಡು, ಉಮಾಪತಿ ಶ್ರೀನಿವಾಸ್, ಶ್ರೀಮುರಳಿ ಖುಷ್ ಆಗಿರುವುದಂತೂ ಖಾತ್ರಿ.

  ಮೊದಲ ದಿನವೇ ಇಷ್ಟೊಳ್ಳೆ ಕಲೆಕ್ಷನ್ ಮಾಡಿರುವ 'ಮದಗಜ' ಶನಿವಾರ, ಭಾನುವಾರದ ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿನ ಹಣ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ.

  'ಮದಗಜ' ಸಿನಿಮಾವನ್ನು 900 ಚಿತ್ರಮಂದಿರಗಳಲ್ಲಿ ಬಹಳ ಗ್ರ್ಯಾಂಡ್ ಆಗಿ ಬಿಡುಗಡೆ ಮಾಡಲಾಗಿತ್ತು. ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿತ್ತು. ಹಾಗಾಗಿ ಮೊದಲ ದಿನದ ಕಲೆಕ್ಷನ್ ಚೆನ್ನಾಗಿಯೇ ಬಂದಿದೆ.

  ಇನ್ನು ಉಮಾಪತಿ ಶ್ರೀನಿವಾಸ್ ಉತ್ತಮ ವ್ಯವಾಹರ ಪ್ರಜ್ಞೆಯ ನಿರ್ಮಾಪಕರಾಗಿದ್ದು, ಸಿನಿಮಾದ ಹಕ್ಕುಗಳನ್ನು ಬಹಳ ಒಳ್ಳೆಯ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಉಮಾಪತಿ ಅವರೇ ಹೇಳಿಕೊಂಡಿದ್ದು, ''ಸಿನಿಮಾದ ಹಕ್ಕುಗಳನ್ನು ಬಹಳ ಒಳ್ಳೆಯ ಬೆಲೆಗೆ ಮಾರಾಟ ಮಾಡಿದ್ದೇನೆ ಈ ಬಗ್ಗೆ ಖುಷಿ ಇದೆ'' ಎಂದಿದ್ದರು.

  ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಆರು ಕೋಟಿ ರುಪಾಯಿ ಬೆಲೆಗೆ ಕಲರ್ಸ್ ಕನ್ನಡಕ್ಕೆ ಮಾರಾಟ ಮಾಡಿದ್ದರು. ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾದ ಮೊದಲ ಶ್ರೀಮುರಳಿ ನಟನೆಯ ಸಿನಿಮಾ ಇದಾಗಿದೆ. ಆಡಿಯೋ ಹಕ್ಕುಗಳನ್ನು ಸಹ ಕೆಲವು ಕೋಟಿಗಳಿಗೆ ಆನಂದ್ ಆಡಿಯೋಗೆ ಮಾರಾಟ ಮಾಡಲಾಗಿದೆ. ಡಿಜಿಟಲ್ ಹಕ್ಕು, ವಿದೇಶದಲ್ಲಿ ಬಿಡುಗಡೆ ಹಕ್ಕುಗಳು ಸಹ ಉತ್ತಮ ಬೆಲೆಗೆ ಮಾರಾಟವಾಗಿವೆ. ಒಟ್ಟಾರೆ 'ಮದಗಜ' ಸಿನಿಮಾವು ಗಳಿಕೆಯ ದೃಷ್ಟಿಯಲ್ಲಿ ಹಿಟ್ ಎನಿಸಿಕೊಂಡಿದೆ.

  'ಮದಗಜ' ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಶ್ರೀಮುರಳಿ ಜೊತೆಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಜಗಪತಿ ಬಾಬು, ಗರುಡ ರಾಮ್, ರಂಗಾಯಣ ರಘು, ಚಿಕ್ಕಣ್ಣ, ಶೀವರಾಜ್ ಕೆ.ಆರ್.ಪೇಟೆ, ಧರ್ಮಣ್ಣ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ನಿರ್ಮಾಪಕ ಉಮಾಪತಿ ಮಹೇಶ್, ವಿತರಣೆಯೂ ಅವರದ್ದೇ.

  English summary
  Sri Murali starer Madagaja movie first day collections were good. Movie collected 7.86 crore rs at box office.
  Saturday, December 4, 2021, 14:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X