»   » 'ಕುರುಕ್ಷೇತ್ರ'ದಲ್ಲಿ 'ದುರ್ಯೋಧನ' ದರ್ಶನ್ ತಂದೆ 'ಧೃತರಾಷ್ಟ್ರ' ಯಾರು.?

'ಕುರುಕ್ಷೇತ್ರ'ದಲ್ಲಿ 'ದುರ್ಯೋಧನ' ದರ್ಶನ್ ತಂದೆ 'ಧೃತರಾಷ್ಟ್ರ' ಯಾರು.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸೌಂಡ್ ಮಾಡುತ್ತಿರುವ ಸಿನಿಮಾ ಯಾವುದು ಅಂದ್ರೆ, ನಿಸ್ಸಂದೇಹವಾಗಿ ಬರುವ ಉತ್ತರ 'ಕುರುಕ್ಷೇತ್ರ'.

'ಕುರುಕ್ಷೇತ್ರ' ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಮುನಿರತ್ನ ನಿರ್ಮಿಸುತ್ತಿರುವ, ನಾಗಣ್ಣ ನಿರ್ದೇಶಿಸುತ್ತಿರುವ, 'ದಾಸ' ದರ್ಶನ್ ಅಭಿನಯಿಸುತ್ತಿರುವ ಸಿನಿಮಾ 'ಕುರುಕ್ಷೇತ್ರ' ಎಂದು ಅನೌನ್ಸ್ ಆಗಿದೆ ಅಷ್ಟೇ. ಆದ್ರೆ, 'ಕುರುಕ್ಷೇತ್ರ' ದರ್ಶನ್ ರವರ 50ನೇ ಚಿತ್ರ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿ ವಲಯದಲ್ಲಿ ಕುತೂಹಲ ಗರಿಗೆದರಿದೆ. ಹೀಗಾಗಿಯೇ, 'ಕುರುಕ್ಷೇತ್ರ' ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಗಾಂಧಿನಗರದಲ್ಲಿ ತಮಟೆ ಬಾರಿಸುತ್ತಿದೆ.

ಇವತ್ತು 'ಕುರುಕ್ಷೇತ್ರ' ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬಂದಿರುವ ಬಿಸಿ ಬಿಸಿ ಸುದ್ದಿ ಏನಪ್ಪಾ ಅಂದ್ರೆ....

'ಕುರುಕ್ಷೇತ್ರ' ಚಿತ್ರದಲ್ಲಿ 'ಧೃತರಾಷ್ಟ್ರ' ಪಾತ್ರ ಫಿಕ್ಸ್

'ಕುರುಕ್ಷೇತ್ರ' ಚಿತ್ರದಲ್ಲಿ 'ಧೃತರಾಷ್ಟ್ರ' ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ಮುಗಿದಿದೆ ಎಂಬ ಸುದ್ದಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಹಾಗಾದ್ರೆ, 'ಧೃತರಾಷ್ಟ್ರ' ಪಾತ್ರಕ್ಕೆ ಆಯ್ಕೆ ಆಗಿರುವ ನಟ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ.?

ಇವರೇ ನೋಡಿ 'ಕುರುಕ್ಷೇತ್ರ'ದ 'ಧೃತರಾಷ್ಟ್ರ'

'ಕುರುಕ್ಷೇತ್ರ' ಚಿತ್ರದಲ್ಲಿ 'ಧೃತರಾಷ್ಟ್ರ' ಪಾತ್ರಕ್ಕೆ ಆಯ್ಕೆ ಆಗಿರುವ ನಟ ಬೇರಾರೂ ಅಲ್ಲ... ಕನ್ನಡ ನಟ 'ಪ್ರಣಯರಾಜ' ಶ್ರೀನಾಥ್.[ಸುಳ್ಳೇ ಸುಳ್ಳು... ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಕೇಳಿಬಂದಿದ್ದೆಲ್ಲ ಬರೀ ಸುಳ್ಳು.!]

ದರ್ಶನ್ ಅಪ್ಪನಾಗಿ ಶ್ರೀನಾಥ್

'ಕುರುಕ್ಷೇತ್ರ' ಚಿತ್ರದಲ್ಲಿ 'ದುರ್ಯೋಧನ'ನಾಗಿ ದರ್ಶನ್ ಕಾಣಿಸಿಕೊಳ್ಳುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ. ದುರ್ಯೋಧನ ತಂದೆ ಧೃತರಾಷ್ಟ್ರನಾಗಿ ನಟ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಈಗ ಬ್ರೇಕ್ ಆಗಿದೆ. ಅಲ್ಲಿಗೆ, ದರ್ಶನ್ ತಂದೆ ಪಾತ್ರದಲ್ಲಿ ಶ್ರೀನಾಥ್ ಮಿಂಚಲಿದ್ದಾರೆ.

'ಕೃಷ್ಣ' ಕೂಡ ನಿಕ್ಕಿ ಆಯ್ತು.!

'ಕುರುಕ್ಷೇತ್ರ' ಚಿತ್ರದಲ್ಲಿ 'ಶ್ರೀಕೃಷ್ಣ'ನ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸುವುದು ಕೂಡ ಪಕ್ಕಾ ಆಗಿದೆ. ಈ ವಿಚಾರವನ್ನ ಸ್ವತಃ ರವಿಚಂದ್ರನ್ ರವರೇ ಸ್ಪಷ್ಟಪಡಿಸಿದ್ದಾರೆ.[ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!]

ಉಳಿದ ಪಾತ್ರಗಳು..?

'ಕುರುಕ್ಷೇತ್ರ' ಚಿತ್ರದಲ್ಲಿ 'ಭೀಮ'ನಾಗಿ ರಾಣಾ ದಗ್ಗುಬಾಟಿ, ಮತ್ತೊಂದು ಪಾತ್ರದಲ್ಲಿ ವಿವೇಕ್ ಒಬೇರಾಯ್ ನಟಿಸಲಿದ್ದಾರಂತೆ ಎಂಬ ಅಂತೆ-ಕಂತೆ ಸುದ್ದಿಗಳೇ ಹೆಚ್ಚಾಗಿ ಹರಿದಾಡುತ್ತಿವೆ. ಆದ್ರೆ, ಚಿತ್ರತಂಡದಿಂದ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.[ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]

'ಭೀಷ್ಮ' ಆಗಲ್ಲ ಎಂದವ್ರೆ ಅಂಬರೀಶ್.!

'ಕುರುಕ್ಷೇತ್ರ' ಚಿತ್ರದ 'ಭೀಷ್ಮ' ಪಾತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ನಟ ಅಂಬರೀಶ್ ಸ್ಪಷ್ಟ ಪಡಿಸಿದ್ದಾರೆ. ಹಾಗಾದ್ರೆ, ಭೀಷ್ಮ ಯಾರಾಗಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

ಹೈದರಾಬಾದ್ ನಲ್ಲಿ ತಲೆಯೆತ್ತುತ್ತಿದೆ ದೊಡ್ಡ ಸೆಟ್

'ಕುರುಕ್ಷೇತ್ರ' ಚಿತ್ರಕ್ಕಾಗಿ ಹೈದರಾಬಾದ್ ನಲ್ಲಿ ದೊಡ್ಡ ಸೆಟ್ ನಿರ್ಮಾಣವಾಗುತ್ತಿದೆ. ಈಗಾಗಲೇ, ಚಿತ್ರಕ್ಕಾಗಿ ಮೊದಲ ಫೋಟೋ ಶೂಟ್ ಕೂಡ ನಟ ದರ್ಶನ್ ಮುಗಿಸಿದ್ದಾರೆ.

ಜುಲೈನಲ್ಲಿ ಸೆಟ್ಟೇರಲಿರುವ 'ಕುರುಕ್ಷೇತ್ರ'

ಜುಲೈ 23 ರಂದು ಮುನಿರತ್ನ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಲಿದೆ. ಅಷ್ಟರೊಳಗೆ ಪಾತ್ರಧಾರಿಗಳ ಪರಿಚಯ ಎಲ್ಲರಿಗೂ ಆಗಲಿದೆ.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

English summary
Kannada Actor Srinath to play Dritharashtra in Darshan starrer Kannada Movie 'Kurukshetra'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada