»   » ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!

ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!

Posted By:
Subscribe to Filmibeat Kannada

ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗಿಂದು (ಮೇ 30) ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಟ್ಟಿರುವ ರವಿಮಾಮ ತಮ್ಮ ಅಭಿಮಾನಗಳ ಜೊತೆ ಜನುಮದಿನವನ್ನ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ.

ರವಿಚಂದ್ರನ್ ಅವರ ಹುಟ್ಟುಹಬ್ಬ ಎಂಬ ಖುಷಿಯ ಜೊತೆಗೆ 'ಕುರುಕ್ಷೇತ್ರ'ದ ಚಿತ್ರದ ಬಗ್ಗೆ ಏನಾದರೂ ಮಾಹಿತಿ ಬಿಟ್ಟುಕೊಡ್ತಾರ ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಯಾಕಂದ್ರೆ, 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದ ತುಂಬಾ ಹರಿದಾಡುತ್ತಿದೆ. ಹೀಗಾಗಿ, ಕ್ರೇಜಿಸ್ಟಾರ್ ಈ ಸುದ್ದಿ ಬಗ್ಗೆ ಕ್ಲಾರಿಟಿ ಕೊಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.[ಸ್ಯಾಂಡಲ್‌ವುಡ್ 'ಕನಸುಗಾರ'ನಿಗೆ 56ನೇ ಜನುಮದಿನ ಸಂಭ್ರಮ]

ನಿರೀಕ್ಷೆಯಂತೆ ಕನಸುಗಾರ ರವಿಚಂದ್ರನ್ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಮಾತನಾಡಿದ್ದು, ಎಲ್ಲ ಅಂತೆ-ಕಂತೆಗಳಿಗೂ ತೆರೆ ಎಳೆದಿದ್ದಾರೆ. ಮುಂದೆ ಓದಿ.....

'ಕುರುಕ್ಷೇತ್ರ'ದಲ್ಲಿ ಅಭಿನಯಿಸುತ್ತಿದ್ದೇನೆ

ಮುನಿರತ್ನಂ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಅಭಿನಯಿಸ್ತಾರೆ ಎಂಬ ಸುದ್ದಿಯನ್ನ ಈಗ ಸ್ವತಃ ಕ್ರೇಜಿಸ್ಟಾರ್ ಖಚಿತ ಪಡಿಸಿದ್ದು, ''ನಾನು 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ'' ಎಂದು ಬಹಿರಂಗಪಡಿಸಿದ್ದಾರೆ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

'ಕುರುಕ್ಷೇತ್ರ'ದಲ್ಲಿ ನಾನೇ 'ಕೃಷ್ಣ'

'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಅವರ ಹೆಸರು ಕೇಳಿ ಬರುತ್ತಿದ್ದಂತೆ ಯಾವ ಪಾತ್ರ ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಅದೇ ರೀತಿ ರವಿಚಂದ್ರನ್ ಚಿತ್ರದಲ್ಲಿ 'ಕೃಷ್ಣ'ನ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ತೇಲಾಡುತ್ತಿತ್ತು. ಇದೀಗ ''ಕುರುಕ್ಷೇತ್ರದಲ್ಲಿ ನಾನೇ ಕೃಷ್ಣ'' ಎಂದು ಹೇಳುವ ಮೂಲಕ ಅಂತೆ-ಕಂತೆಗಳಿಗೆ ಕ್ರೇಜಿಸ್ಟಾರ್ ಬ್ರೇಕ್ ಹಾಕಿದ್ದಾರೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

ಕೃಷ್ಣನ ಪಾತ್ರಕ್ಕಾಗಿ ಸಖತ್ ತಯಾರಿ

'ಕುರುಕ್ಷೇತ್ರ'ದಲ್ಲಿ ಅಭಿನಯಿಸುವುದು ಪಕ್ಕಾ ಆಗುತ್ತಿದ್ದಂತೆ ರವಿಚಂದ್ರನ್ ತಮ್ಮ ಪಾತ್ರಕ್ಕಾಗಿ ಸಖತ್ ತಯಾರಿ ಮಾಡುತ್ತಿದ್ದಾರೆ. ಕ್ರೇಜಿಸ್ಟಾರ್ ಹೇಳಿರುವಂತೆ ಕಳೆದ ಮೂರು ತಿಂಗಳಿಂದ ಈ ಪಾತ್ರಕ್ಕೆ ಸಿದ್ದವಾಗುತ್ತಿದ್ದಾರಂತೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

ಮಾಂಸದಿಂದ ದೂರ

ಶ್ರೀಕೃಷ್ಣನ ಪಾತ್ರ ಮಾಡುತ್ತಿರುವುದರಿಂದ ಕೆಲವು 'ಆಚಾರ-ವಿಚಾರ'ಗಳನ್ನ ರವಿಚಂದ್ರನ್ ಪಾಲಿಸುತ್ತಿದ್ದಾರೆ. ಅದಕ್ಕಾಗಿ ಮಾಂಸ ಸೇವನೆಯನ್ನ ಬಿಟ್ಟಿದ್ದಾರಂತೆ. ಶಿವರಾತ್ರಿ ಹಬ್ಬದಿಂದ ಮಾಂಸಹಾರದಿಂದ ರವಿಚಂದ್ರನ್ ದೂರವಿದ್ದಾರಂತೆ.['ಕುರುಕ್ಷೇತ್ರ' ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ : ಅಂಬರೀಶ್ ಡೈರೆಕ್ಟ್ ಹಿಟ್]

ಸಣ್ಣ ಆಗ್ಬೇಕಂತೆ!

ರವಿಚಂದ್ರನ್ ಅವರು ಸ್ವಲ್ಪ ದಪ್ಪ ಇರುವುದರಿಂದ, ಈಗ ದೇಹವನ್ನ ದಂಡಿಸಲು ಚಿಂತಿಸಿದ್ದಾರೆ. ಕೃಷ್ಣನ ಪಾತ್ರಕ್ಕಾಗಿ ಸಣ್ಣ ಆಗುತ್ತಿದ್ದೀನಿ ಎಂದು ಸ್ವತಃ ರವಿಚಂದ್ರನ್ ಅವರೇ ಹೇಳಿದ್ದಾರೆ.['ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್]

'ದರ್ಶನ್' ದುರ್ಯೋಧನ

'ಕುರುಕ್ಷೇತ್ರ'ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗ ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಅಂತಿಮವಾಗಿದ್ದಾರೆ. ಇನ್ನುಳಿದಂತೆ ಬೇರೆ ಯಾವ ಪಾತ್ರಗಳು ಫಿಕ್ಸ್ ಆಗಿಲ್ಲವಂತೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

ದರ್ಶನ್-ರವಿಚಂದ್ರನ್ ಜುಗಲ್ ಬಂದಿ

ಇದುವರೆಗೂ ರವಿಚಂದ್ರನ್ ಹಾಗೂ ದರ್ಶನ್ ಯಾವ ಚಿತ್ರದಲ್ಲು ಒಟ್ಟಿಗೆ ಅಭಿನಯಿಸಿಲ್ಲ. ದರ್ಶನ್ ಅಭಿನಯದ 'ಅಯ್ಯ' ಚಿತ್ರಕ್ಕೆ ಕ್ರೇಜಿಸ್ಟಾರ್ ಸಂಗೀತ ನೀಡಿದ್ದಾರೆ. ಇನ್ನು ದರ್ಶನ್ ಅವರ ಹಲವು ಪ್ರಾಜೆಕ್ಟ್ ಗಳಿಗೆ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ ಅಷ್ಟೇ. ಇದೀಗ, 'ಕುರುಕ್ಷೇತ್ರ' ಚಿತ್ರದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.[ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..!]

English summary
Crazy Star Ravichandran Confirms, He Will Play Krishna Role In Darshan Kurukshetra. The Movie Directed by Naganna and Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada