For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್‌'ಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿದ ಅಭಿನಯ ಚಕ್ರವರ್ತಿ

  By Suneel
  |

  ಚಂದನವನದಲ್ಲಿ 'ಪ್ರೇಮಲೋಕ' ಸೃಷ್ಟಿಸಿದ 'ಕನಸುಗಾರ' ರವಿಚಂದ್ರನ್ ಅವರಿಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ಕ್ರೇಜಿಸ್ಟಾರ್ ಗೆ ಕನ್ನಡ ಸಿನಿ ಪ್ರಿಯರು ತುಂಬು ಹೃದಯದಿಂದ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಬೆಳ್ಳಿತೆರೆಯ ತಾರೆಯರು ಸಹ 'ರಣಧೀರ'ನಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.[ಸ್ಯಾಂಡಲ್‌ವುಡ್ 'ಕನಸುಗಾರ'ನಿಗೆ 56ನೇ ಜನುಮದಿನ ಸಂಭ್ರಮ]

  ಜನುಮದಿನದ ಸಂತೋಷದಲ್ಲಿರುವ ಕನ್ನಡ ಚಿತ್ರರಂಗದ 'ದಿ ಶೋ ಮ್ಯಾನ್'ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

  ಬೆಳ್ಳಿತೆರೆ ಮೇಲೆ ನಟನಾಗಿ ಅಭಿನಯಿಸುತ್ತಿರುವಾಗಲೇ ರವಿಚಂದ್ರನ್ ರವರು ಸುದೀಪ್ ಮೇಲಿನ ಪ್ರೀತಿಯಿಂದಾಗಿ, ಕಿಚ್ಚನ ಚಿತ್ರಗಳಲ್ಲಿ ಅಪ್ಪ, ಅಣ್ಣನ ಪಾತ್ರಗಳನ್ನು ನಿರ್ವಹಿಸಿದರು. ಯಾವಾಗಲು ರವಿಚಂದ್ರನ್ ರನ್ನು ಅಣ್ಣ ಎಂತಲೇ ಪ್ರೀತಿಯಿಂದ ಕರೆಯುವ ಕಿಚ್ಚ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಗೆ ತಿಳಿಸಿದ್ದಾರೆ ಎಂಬುದನ್ನು ಮುಂದೆ ನೋಡಿ..

  'ಮಲ್ಲ'ನಿಗೆ 'ನಲ್ಲ'ನ ಶುಭಾಶಯ

  'ಮಲ್ಲ'ನಿಗೆ 'ನಲ್ಲ'ನ ಶುಭಾಶಯ

  "ನಿಮ್ಮ ಜೀವನದಲ್ಲಿ ನನಗೆ ವಿಶೇಷ ಸ್ಥಾನ ನೀಡಿ ಸದಾ ಗೌರವದಿಂದ ಸಲಹುವ ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಯಾವಾಗಲು ಸಂತೋಷವಾಗಿರಿ" ಎಂದು ಸುದೀಪ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.['ಹೆಬ್ಬುಲಿ' ಸುದೀಪ್ ಬಗ್ಗೆ ರವಿಚಂದ್ರನ್ ಬಾಯಿಂದ ಉದುರಿದ ಮುತ್ತುಗಳಿವು..]

  ಹುಟ್ಟುಹಬ್ಬ ಆಚರಿಸುತ್ತಿರುವ ಫೋಟೋ ಟ್ವೀಟ್ ಮಾಡಿದ ಕಿಚ್ಚ

  ಹುಟ್ಟುಹಬ್ಬ ಆಚರಿಸುತ್ತಿರುವ ಫೋಟೋ ಟ್ವೀಟ್ ಮಾಡಿದ ಕಿಚ್ಚ

  ಹುಟ್ಟುಹಬ್ಬ ಶುಭಾಶಯ ತಿಳಿಸಲು ಟ್ವಿಟ್ಟರ್ ನಲ್ಲಿ ಸುದೀಪ್ ತಾವು ರವಿಚಂದ್ರನ್ ರವರ ಬರ್ತ್‌ ಡೇ ಆಚರಣೆ ಮಾಡುತ್ತಿರುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಅಲ್ಲದೇ ಆ ಫೋಟೋದಲ್ಲಿ ಸುದೀಪ್ 'ನಿಮ್ಮ ಜೊತೆ(ರವಿಚಂದ್ರನ್) ತೆರೆ ಹಂಚಿಕೊಳ್ಳುವುದು ಯಾವಾಗಲು ನನಗೆ ಅದ್ಭುತ ಅನುಭವ ನೀಡುತ್ತದೆ' ಎಂದು ಬರೆದಿದ್ದಾರೆ.

  ಸುದೀಪ್ ಮೊದಲ ದೊಡ್ಡ ಸಾಧನೆ ಇದು...

  ಸುದೀಪ್ ಮೊದಲ ದೊಡ್ಡ ಸಾಧನೆ ಇದು...

  ರವಿಚಂದ್ರನ್ ರೊಂದಿಗೆ ಹಲವು ವರ್ಷಗಳಿಂದಲೂ ಆತ್ಮೀಯ ಅನುಬಂಧ ಹೊಂದಿರುವ ಸುದೀಪ್ 'ಹೆಬ್ಬುಲಿ' ಚಿತ್ರದ ಪ್ರೆಸ್ ಮೀಟ್ ವೇಳೆ, "ಚಿಕ್ಕಂದಿನಲ್ಲಿ ನಾನು ರವಿಚಂದ್ರನ್ ಸರ್ ಚಿತ್ರ ನೋಡಿ ಬೆಳೆದವನು. ಅವರನ್ನು ನೋಡಲು ನನ್ನ ಅಕ್ಕನ ಮದುವೆ ದಿನದಂದು ದಿನವಿಡೀ ಕಾದಿದ್ದೆ. ನಂತರ ಫಸ್ಟ್ ಟೈಮ್ ರವಿಚಂದ್ರನ್ ಅವರ ಮನೆಗೆ ಹೋಗಿ ಅವರೊಟ್ಟಿಗೆ ಕಾಫಿ ಕುಡಿದಿದ್ದು ನನ್ನ ಜೀವನದ ಮೊದಲ ಸಾಧನೆ" ಎಂದು ಹೇಳಿದ್ದರು.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

  ಸುದೀಪ್ ರನ್ನೂ ಮಗನಂತೆ ನೋಡುವ ರವಿಚಂದ್ರನ್

  ಸುದೀಪ್ ರನ್ನೂ ಮಗನಂತೆ ನೋಡುವ ರವಿಚಂದ್ರನ್

  ರವಿಚಂದ್ರನ್ ರವರು ಸುದೀಪ್ ರನ್ನು ಯಾವಾಗಲು ತಮ್ಮ ಹಿರಿಯ ಮಗನಿದ್ದಂತೆ ಎಂದು ಹೇಳುತ್ತಿರುತ್ತಾರೆ. ಅಲ್ಲದೇ ಸುದೀಪ್ ಯಾವಾಗಲು ರವಿಚಂದ್ರನ್ ರನ್ನು ನನ್ನ ಅಣ್ಣ ಎಂದೇ ಪ್ರೀತಿಯಿಂದ ಕರೆಯುತ್ತಾರೆ.

  ಕ್ರೇಜಿಸ್ಟಾರ್ ಮತ್ತು ಕಿಚ್ಚನ ಜೋಡಿ

  ಕ್ರೇಜಿಸ್ಟಾರ್ ಮತ್ತು ಕಿಚ್ಚನ ಜೋಡಿ

  ತೆರೆಯ ಹಿಂದೆ ಅವಿನಾಭಾವ ಬಾಂಧವ್ಯ ಹೊಂದಿರುವ ರವಿಚಂದ್ರನ್ ಮತ್ತು ಸುದೀಪ್ ಬೆಳ್ಳಿತೆರೆಯ ಮೇಲೆ ಜೊತೆಯಾಗಿ ಮಿಂಚಿದ್ದಾರೆ. ಸುದೀಪ್ ಗೆ 'ಮಾಣಿಕ್ಯ' ಚಿತ್ರದಲ್ಲಿ ಅಪ್ಪನಾಗಿ ಮತ್ತು 'ಹೆಬ್ಬುಲಿ' ಚಿತ್ರದಲ್ಲಿ ಅಣ್ಣನಾಗಿ ರವಿಚಂದ್ರನ್ ಅಭಿನಯಿಸಿದ್ದಾರೆ.

  ರವಿಚಂದ್ರನ್ ಚಿತ್ರಗಳೆಂದರೆ ಕಿಚ್ಚನಿಗೆ ಅಭಿಮಾನ

  ರವಿಚಂದ್ರನ್ ಚಿತ್ರಗಳೆಂದರೆ ಕಿಚ್ಚನಿಗೆ ಅಭಿಮಾನ

  ಕಿಚ್ಚ ಸುದೀಪ್ ಚಿಕ್ಕನಿಂದಲೂ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಅವರ ಸಿನಿಮಾಗಳಿಗೆ ಅವರಿಗೆ ನೀಡುವಷ್ಟೆ ಗೌರವವನ್ನು ಸುದೀಪ್ ನೀಡುತ್ತಾರೆ. ರವಿಚಂದ್ರನ್ ಅವರ 'ಅಪೂರ್ವ' ಸಿನಿಮಾವನ್ನು ಹಲವರು ಟೀಕಿಸಿದಾಗ ಹಾಗೆಲ್ಲ ಮಾತನಾಡಬೇಡಿ ಎಂದು ಸುದೀಪ್ ವಿನಂತಿಸಿಕೊಂಡು, ರವಿ ಸರ್ ಕನ್ನಡ ಆಸ್ತಿ ಎಂದು ಹೇಳಿದ್ದರು.[ಕ್ರೇಜಿಸ್ಟಾರ್ ಅವರನ್ನು ಕಿಚಾಯಿಸುತ್ತಿರುವವರ ವಿರುದ್ಧ ಕಿಚ್ಚನ ಕಿಚ್ಚು]

  English summary
  Kannada Actor Kichcha Sudeep has taken his twitter account to wish to Crazy Star Ravichandran's 56th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X