»   » ಮೋಹನ್ ಲಾಲ್ ಮುಂದಿನ ಚಿತ್ರದಲ್ಲಿ ತಮಿಳು ನಟಿ: ಯಾರವರು?

ಮೋಹನ್ ಲಾಲ್ ಮುಂದಿನ ಚಿತ್ರದಲ್ಲಿ ತಮಿಳು ನಟಿ: ಯಾರವರು?

Posted By:
Subscribe to Filmibeat Kannada

ಮಾಲಿವುಡ್ ಬ್ಯೂಟಿಗಳು ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಇತ್ತೀಚಿನ ವಿಶೇಷತೆ ಅಂದ್ರೆ ತಮಿಳು ಚಿತ್ರರಂಗದ ನಟಿಯರು ಮಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.[14 ವರ್ಷದ ನಂತರ ರೀಮೇಕ್ ಚಿತ್ರದಲ್ಲಿ ಶಿವಣ್ಣ!]

ತ್ರಿಷಾ ಕೃಷ್ಣನ್, ಶ್ಯಾಮಪ್ರಸಾದ್ ಮತ್ತು ನಿವಿನ್ ಪೌಲಿ ಸಿನಿಮಾ ಮೂಲಕ ಮಾಲಿವುಡ್ ಟೌನ್ ನಲ್ಲಿ ಕಾಣಿಸಿಕೊಂಡ ನಂತರ, ಈಗ 'ರೋಮಿಯೊ ಜೂಲಿಯಟ್' ಚಿತ್ರದ ನಟಿ ಹನ್ಸಿಕಾ ಮಲಯಾಳಂ ಚಿತ್ರದಲ್ಲಿ ಅಭಿನಯಿಸಲು ನಿರ್ಧರಿಸಿದ್ದಾರೆ. ವಿಶೇಷ ಅಂದ್ರೆ ಹನ್ಸಿಕಾ ತಮ್ಮ ಮೊದಲ ಮಲಯಾಳಂ ಚಿತ್ರದಲ್ಲಿಯೇ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಅಭಿನಯಿಸುತ್ತಿದ್ದಾರೆ.['ಗಂಡ ಹೆಂಡತಿ' ಸಂಜನಾ ಮಾಲಿವುಡ್ ಎಂಟ್ರಿ]

Tamil Actress Hansika to debut in Mollywood with Mohanlal movie

ಬಿ ಉನ್ನಿಕೃಷ್ಣನ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ, ಮೋಹನ್ ಲಾಲ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಹನ್ಸಿಕಾ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲದೇ ತಮಿಳಿನ ನಟರಾದ ಶ್ರೀಕಾಂತ್ ಮತ್ತು ವಿಶಾಲ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ.

Tamil Actress Hansika to debut in Mollywood with Mohanlal movie

ಹನ್ಸಿಕಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ, ಹಾಗಂತ ಇವರು ಚಿತ್ರದ ನಾಯಕಿ ಅಲ್ಲ. ಚಿತ್ರದಲ್ಲಿ ನಾಯಕನು ಸಹ ಇಲ್ಲ. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕೆಟಗರಿಯ ಅನ್ ಕನ್ವೆನ್ಷನಲ್ ಸಿನಿಮಾ ಆಗಿದ್ದು, ಹನ್ಸಿಕಾ ಸೇರಿದಂತೆ, ವಿಶಾಲ್, ಶ್ರೀಕಾಂತ್, ಅಜು ವರ್ಗಿಸ್, ಚೆಂಬನ್ ವಿನೋದ್ ಅವರು ನಿರ್ಣಾಯಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ 27 ರಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ.[ಕನ್ನಡ ಕಷ್ಟವಾದರೂ, ಇಷ್ಟವಾಗುತ್ತೆ: ಮಲ್ಲೂ ನಟಿ]

English summary
Actress Hansika will be part of B Unnikrishnan's upcoming Mohanlal movie. The director informed "Hansika will be doing a special appearance in the film."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada