For Quick Alerts
  ALLOW NOTIFICATIONS  
  For Daily Alerts

  ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ

  |

  ಅದ್ಧೂರಿತನಕ್ಕೆ ಮತ್ತೊಂದು ಹೆಸರು ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾಕ್ಕೆ ಅದ್ಧೂರಿತನ ಪರಿಚಯಿಸಿದ್ದೆ ಅವರು. ರವಿಚಂದ್ರನ್ ಏನೇ ಮಾಡಿದರು ಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಾರೆ.

  ಕನ್ನಡದ ಹಲವಾರು ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ, ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್, ಟ್ವಿಟ್ಟರ್‌ ಮೂಲಕ ಹಂಚಿಕೊಳ್ಳುತ್ತಾರೆ, ಅಭಿಮಾನಿಗಳೊಂದಿಗೆ ಸಂವಾದ ಮಾಡುತ್ತಾರೆ. ಆದರೆ ರವಿಚಂದ್ರನ್ ಅವರು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಈಗ ಅವರೂ ಸಹ ಸಾಮಾಜಿಕ ಜಾಲತಾಣದ ಸೇರಿಕೊಂಡಿದ್ದಾರೆ.

  ಅದೂ ಬಹಳ ಭಿನ್ನವಾಗಿ ತಮ್ಮ ಸಿನಿಮಾದ ಹಾಡುಗಳಂತೆಯೇ ಅದ್ಧೂರಿಯಾಗಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ರವಿಚಂದ್ರನ್. '1 n 1nly ravichandran' ಹೆಸರಿನ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ರವಿಚಂದ್ರನ್ ಯುಗಾದಿ ಹಬ್ಬವಾದ ಇಂದು ಚಾನೆಲ್‌ ಅನ್ನು ಬಿಡುಗಡೆ ಮಾಡಿದ್ದಾರೆ.

  ತಮ್ಮ ಚಾನೆಲ್‌ನಲ್ಲಿ ತಾವೇ ರಚಿಸಿರುವ ಹಾಡು ಬಿಡುಗಡೆ ಮಾಡಿದ್ದಾರೆ ಜೊತೆಗೆ ಕೆಲವು ಸಂದೇಶಗಳನ್ನು ಸಹ ನೀಡಿದ್ದಾರೆ. ತಂದೆ ವೀರಸ್ವಾಮಿ ಅವರಿಗೆ ಗೌರವ ಸಲ್ಲಿಸಿರುವ ರವಿಚಂದ್ರನ್, ಮೊದಲ ದಿನವೇ ಕೆಲವಾರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಯೂಟ್ಯೂಬ್‌ ಚಾನೆಲ್‌ನಲ್ಲಿ.

  KGF ಅಡ್ಡಾದಿಂದ ನೇರವಾಗಿ ತನ್ನ ಜಮೀನಿಗೆ ಬಂದ ಯಶ್ | Filmibeat Kannada

  ಯೂಟ್ಯೂಬ್‌ ಮಾತ್ರವೇ ಅಲ್ಲದೆ ಇನ್‌ಸ್ಟಾಗ್ರಾಂನಲ್ಲೂ ಖಾತೆ ತೆರೆದಿದ್ದಾರೆ ನಟ ವಿ.ರವಿಚಂದ್ರನ್. ಮೊದಲ ದಿನವೇ ನೂರಾರು ಮಂದಿ ಫಾಲೋ ಮಾಡಲು ಆರಂಭಿಸಿದ್ದಾರೆ.

  English summary
  Actor, director, producer V Ravichandran entered social media in his own style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X