»   » ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು.!

ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು.!

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪಾಲಿನ ನಿಜವಾದ ಯಜಮಾನ. ''ಅಭಿಮಾನಿಗಳೇ ನನ್ನ ಪ್ರಾಣ, ಅಭಿಮಾನಿಗಳೇ ನನ್ನ ಧ್ಯಾನ'' ಎಂದು ಹೇಳುವ ಮೂಲಕ ಅಭಿಮಾನಗಳಿಗಾಗಿ ಈ ಜೀವ ಆಗಿದ್ದರು.

ಇನ್ನು ಅಭಿಮಾನಿಗಳು ಕೂಡ ಹಾಗೆ, ವಿಷ್ಣುವರ್ಧನ್ ಅವರನ್ನ ದೇವರಂತೆ ಕಾಣುತ್ತಿದ್ದರು. ತಮ್ಮ ಮನೆಗಳಲ್ಲಿ ದೇವರ ಪಕ್ಕದಲ್ಲಿ ವಿಷ್ಣು ಫೋಟೋ ಹಾಕಿ ಪೂಜೆ ಮಾಡುವವರು ಇದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]

ಆದ್ರೆ, ಇಲ್ಲೊಬ್ಬ ವಿಷ್ಣು ಅಭಿಮಾನಿ ಎಲ್ಲರಿಗಿಂತ ವಿಭಿನ್ನ ಹಾಗೂ ವಿಶೇಷ. ಯಾಕೆ ಅಂತ ಮುಂದೆ ನೋಡಿ.....

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಭಿಮಾನ

'ಮದುವೆಯ ಆಮಂತ್ರಣ ಪತ್ರಿಕೆ'ಯಲ್ಲಿ ವಿಷ್ಣು ಅವರ ಅಭಿಮಾನ ಮರೆದಿದ್ದಾರೆ. ಸಾಮಾನ್ಯವಾಗಿ ಲಗ್ನ ಪತ್ರಿಕೆಯ ಮುಂಭಾಗದಲ್ಲಿ ದೇವರ ಫೋಟೋ ಹಾಕಲಾಗುತ್ತೆ. ಆದ್ರೆ, ಈ ಅಭಿಮಾನಿ ವಿಷ್ಣು ವರ್ಧನ್ ಅವರ ಫೋಟೋ ಹಾಕಿದ್ದಾರೆ.

ದಾದಾ ಆಶೀರ್ವಾದ

ಅಷ್ಟೇ ಅಲ್ಲದೇ, ತಮ್ಮ ಕುಟುಂಬದ ಗುರು ಹಿರಿಯರ ಜೊತೆ, ವಿಷ್ಣುವರ್ಧನ್ ಅವರ ಹೆಸರನ್ನ ಹಾಕಲಾಗಿದ್ದು, ಡಾ.ವಿಷ್ಣುವರ್ಧನ್ ಅವರ ಆಶೀರ್ವಾದದೊಂದಿಗೆ ಮದುವೆಯಾಗುತ್ತಿದ್ದಾರೆ.[ಡಾ.ರಾಜ್ ಕುಮಾರ್ ಮದುವೆಯ ಲಗ್ನಪತ್ರಿಕೆ ನೋಡಿ ಹೇಗಿತ್ತು?]

ಮದುವೆ ಯಾವಾಗ

ಪಾಂಡುರಂಗಯ್ಯ ಬಿ.ಆರ್ ಮತ್ತು ಮಹಾಲಕ್ಷ್ಮಿ ಅವರ ಮದುವೆಯ ಆಮಂತ್ರಣ ಪತ್ರಿಕೆ ಇದಾಗಿದ್ದು, ಇದೇ ತಿಂಗಳ 12 ರಂದು ತುಮಕೂರಿನ ಶಿರಾ ಟೌನ್ ನಲ್ಲಿ ಈ ವಿವಾಹ ಜರುಗಲಿದೆ.

ಇದು ಎರಡನೇ ಪತ್ರಿಕೆ

ಅಂದ್ಹಾಗೆ, ಈ ರೀತಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಿಷ್ಣು ಅವರ ಅಭಿಮಾನ ಮೆರೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಒಬ್ಬರು ಈ ರೀತಿಯಾಗಿ ಲಗ್ನ ಪತ್ರಿಕೆಯಲ್ಲಿ ದಾದಾ ಹೆಸರು ಮತ್ತು ಫೋಟೋ ಹಾಕಿಸಿದ್ದರು.

ಈ ಅಭಿಮಾನಕ್ಕೆ ಏನ್ ಹೇಳ್ತಿರಾ?

ಈ ಅಭಿಮಾನಕ್ಕೆ ಏನ್ ಹೇಳ್ಬೇಕು ಅಂತ ಗೊತ್ತಿಲ್ಲ. ಆದ್ರೆ, ವಿಷ್ಣವರ್ಧನ್ ಅವರ ಕನ್ನಡ ಚಿತ್ರರಂಗದ ಯಜಮಾನ ಮಾತ್ರವಲ್ಲ, ಅಭಿಮಾನಿಗಳ ಪಾಲಿಗೆ ಕೂಡ ಅವರೇ ನಿಜವಾದ ಯಜಮಾನ ಎನ್ನುವುದು ಮಾತ್ರ ಸುಳ್ಳಾಲ್ಲ.

English summary
Special Marriage invitation Card From Dr Vishnuvardhan Fan at Tumkur. Check the Details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada