For Quick Alerts
  ALLOW NOTIFICATIONS  
  For Daily Alerts

  ವಿಶ್ವರೂಪಂಗೆ ಹಿನ್ನಡೆ ವರದನಾಯಕನಿಗೆ ಮುನ್ನಡೆ

  |
  ಇದು ಚಿತ್ರ ಬಿಡುಗಡೆಯಾದ ಮೇಲೆ ಕಂಡು ಬರುತ್ತಿರುವ ಪೈಪೋಟಿಯಲ್ಲ, ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಹಿನ್ನಡೆಯಾಗಿರುವ ಪರಿಣಾಮ ಅದು ಸುದೀಪ್, ಚಿರು ಅಭಿನಯದ ವರದನಾಯಕ ಚಿತ್ರಕ್ಕೆ 'ವರ'ವಾಗಿ ಪರಿಣಮಿಸಿದೆ.

  ಕಮಲಹಾಸನ್ ಅಭಿನಯದ ವಿಶ್ವರೂಪಂ ಚಿತ್ರ ಬಿಡುಗಡೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ಇಂದು (ಜ 28) ನೀಡಬೇಕಾಗಿದ್ದ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

  ಹೀಗಾಗಿ ಕಮಲ್ ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇದರ ನೇರ ಲಾಭ ಮುಖ್ಯವಾಗಿ ವರದನಾಯಕನಿಗೆ ಚಿತ್ರಕ್ಕೆ ವಲಿಯುತ್ತಿದೆ.

  ವರದನಾಯಕ ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದ್ದು ವಾರಾಂತ್ಯದ ಕಲೆಕ್ಷನ್ ಜೋರಾಗಿದೆ ಎನ್ನುವ ವರ್ತಮಾನ ನಮ್ಮ ಸಿನಿ ವರದಿಗಾರರು ನೀಡುತ್ತಿದ್ದಾರೆ.

  ಚಿತ್ರಮಂದಿರದ ಮೂಲಗಳ ಪ್ರಕಾರ ವಿಶ್ವರೂಪಂ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಅಭಿಮಾನಿಗಳು ಹೆಚ್ಚಿನವರು ನಮ್ಮವರೇ.

  ಚಿತ್ರ ಬಿಡುಗಡೆ ರದ್ದಾದ ಹಿನ್ನಲೆಯಲ್ಲಿ ಅಭಿಮಾನಿಗಳ ನಂತರದ ಆಯ್ಕೆ ರೇಸ್ 2 ಅಥವಾ ವರದನಾಯಕ ಚಿತ್ರವಾಗಿತ್ತು. ರೇಸ್ 2 ಚಿತ್ರಕ್ಕೆ ಮಾಧ್ಯಮ, ಪತ್ರಿಕೆಗಳಿಂದ ನೆಗೆಟಿವ್ ವಿಮರ್ಶೆ ಬಂದಿತ್ತು, ವರದನಾಯಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಹೀಗಾಗಿ ವಿಶ್ವರೂಪಂ ಚಿತ್ರದ ಬಿಡುಗಡೆ ವಿಳಂಬದ ಲಾಭ ನೇರವಾಗಿ ವರದನಾಯಕ ಚಿತ್ರಕ್ಕಾಗಿದೆ ಎನ್ನುವುದು ಕೆಲ ಚಿತ್ರಮಂದಿರದ ಮಾಲೀಕರ ಅಂಬೋಣ.

  ವರದನಾಯಕ ಚಿತ್ರ ವಿಮರ್ಶೆವರದನಾಯಕ ಚಿತ್ರ ವಿಮರ್ಶೆ

  ವಿಶ್ವರೂಪಂ ಓದುಗರ ವಿಮರ್ಶೆವಿಶ್ವರೂಪಂ ಓದುಗರ ವಿಮರ್ಶೆ

  English summary
  The ban on Tamil film Viswaroopam seems to have turned out to be a blessing for Kannada film Varadanayaka in Karnataka, as the Sudeep starrer film has got a good opening.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X