»   » ಟ್ರೈಲರ್ ನೋಡಿ: 'ಮರಿ ಹುಲಿ' ವಿನೋದ್ ಪ್ರಭಾಕರ್ ಈಗ 'ಕ್ರ್ಯಾಕ್'

ಟ್ರೈಲರ್ ನೋಡಿ: 'ಮರಿ ಹುಲಿ' ವಿನೋದ್ ಪ್ರಭಾಕರ್ ಈಗ 'ಕ್ರ್ಯಾಕ್'

Posted By:
Subscribe to Filmibeat Kannada

ಹುಲಿ ಘರ್ಜಿಸುತ್ತಿದೆ...
ಈ ಹುಲಿ ಯಾವಾಗ ಯಾರ ಮೇಲೆ ಎಲ್ಲಿ ಎರಗುತ್ತದೆ... ಯಾವ ಪಾತಕಿಗಳ ಎದೆ ಬಗೆದು ರಕ್ತ ಹೀರುತ್ತೋ ಗೊತ್ತಿಲ್ಲ.!
ಈ ಹುಲಿ ಒಂಥರಾ 'ಕ್ರ್ಯಾಕ್'... ಇದರದ್ದೇ ಸೆಪರೇಟ್ ಟ್ರ್ಯಾಕ್.!

'ಮರಿ ಟೈಗರ್' ಆಗಿದ್ದ ಈ ಹುಲಿ ಈಗ ಬೆಳೆದು ರಿಯಲ್ ಟೈಗರ್ ಆಗಿದೆ. ವಿನೋದ್ ಪ್ರಭಾಕರ್ ಈಗ ಪರಿಪೂರ್ಣ ಹುಲಿಯಾಗಿ ಅಭಿಮಾನಿಗಳ ಹೃದಯದಲ್ಲಿ ನೆಲೆಯೂರಲಿದ್ದಾರೆ.[ತಂದೆಯ ಸಾವಿನ ಕಾರಣ ಬಿಚ್ಚಿಟ್ಟ ವಿನೋದ್ ಪ್ರಭಾಕರ್]

Watch Vinod Prabhakar starrer Kannada Movie 'Crack' trailer

ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರದ ಚಿತ್ರೀಕರಣ ಮುಗಿದಿದ್ದು ಇಂದು ಟ್ರೈಲರ್ ಬಿಡುಗಡೆ ಆಗಿದೆ. ಖಾಕಿ ತೊಟ್ಟು ಪೊಲೀಸ್ ಆಫೀಸರ್ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಮಿಂಚಿದ್ದಾರೆ.[ನಟ ಟೈಗರ್ ಪ್ರಭಾಕರ್ 'ಕ್ರಿಶ್ಚಿಯನ್' ಆಗಿದ್ದೇ ತಪ್ಪಾಯ್ತಾ.?]

'ಕ್ರ್ಯಾಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ರಾಮ್ ನಾರಾಯಣ್. ಈಗಾಗಲೇ 'ಸ್ನೇಹಿತರು' ಮತ್ತು 'ಟೈಸನ್' ಚಿತ್ರ ನೀಡಿದ್ದ ರಾಮ್ ನಾರಾಯಣ್ ಈಗ 'ಕ್ರ್ಯಾಕ್' ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ವಿನೋದ್ ಹಾಗೂ ರಾಮ್ ನಾರಾಯಣ್ ಕಾಂಬಿನೇಷನ್ ನಲ್ಲಿ 'ಟೈಸನ್' ತೆರೆಕಂಡು ಯಶಸ್ಸು ಗಳಿಸಿತ್ತು. ಈಗ ಮತ್ತೆ ಈ ಜೋಡಿ 'ಕ್ರ್ಯಾಕ್' ಮೂಲಕ ನಿಮ್ಮ ಮುಂದೆ ಬರುತ್ತಿದೆ.[ಸಿನಿಮಾ 'ಟೈಟಲ್' ಗಾಗಿ ಮರಿ 'ಟೈಗರ್' ಕಿತ್ತಾಟ]

ನಾಯಕಿಯಾಗಿ ಆಕಾಂಕ್ಷ ಬಣ್ಣ ಹಚ್ಚಿದ್ದಾರೆ. ಗಾಯಕಿ ಶಮಿತಾ ಮಲ್ನಾಡ್ ಸಂಗೀತ ನಿರ್ದೇಶಕಿಯಾಗಿ 'ಕ್ರ್ಯಾಕ್' ಚಿತ್ರಕ್ಕೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ನಿರ್ಮಾಪಕರಾಗಿ ವಿತರಕ ವಿಜಯ್, ಮಂಜುನಾಥ್ ಹಾಗೂ ಶಂಕರ್ ಇಳಕಲ್ ಬಂಡವಾಳ ಹೂಡಿದ್ದಾರೆ.

'ಕ್ರ್ಯಾಕ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

English summary
Kannada Actor Vinod Prabhakar starrer Kannada Movie 'Crack' trailer is out. Watch the trailer here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada