For Quick Alerts
  ALLOW NOTIFICATIONS  
  For Daily Alerts

  ನವನ್ 'ಗೋಣಿಚೀಲ'ದಿಂದ ಬಂದ ನವಿರಾದ ಪ್ರೇಮ ಕಥೆ

  By ಮಲೆನಾಡಿಗ
  |

  "ಶಾರ್ಟ್ ಫಿಲಂನ ಬಿಗ್ ಫಿಲಂ ಲಾಜಿಕ್ನಲ್ಲಿ ತೋರ್ಸಿ ಪ್ರೇಕ್ಷಕನನ್ನು ಖುಷಿ ಪಡಿಸ್ಬೇಕು" ಬಹುಶಃ ನಾನ್ ಅನ್ಕೊಂಡಿದ್ದು ಇಷ್ಟೇ, ಅದೇ ಆಗಿದೆ ಅನ್ಕೊಳ್ತಿನಿ....

  ಒಂದೇ ದಿನಕ್ಕೆ 3000 view ದಾಟಿದೆ, ಹೋದ್ ವರ್ಷ ಜೂನ್ ಶುರು ಆದ ಗೋಣಿಚೀಲ ಸತತ 10 ತಿಂಗಳ ತಂಡದ ಪರಿಶ್ರಮದಿಂದ ಈ ಮಟ್ಟಿಗೆ ಬಂದಿದೆ, ಶೂಟಿಂಗ್ ಮಾಡಿದ್ದು ಮೂರೇ ದಿನ ಆದ್ರು, Preproduction & Postproduction ಜಾಸ್ತಿ ಟೈಮ್ ತಗೊಂಡಿದ್ವು, ಎಲ್ಲರ ಸಹಕಾರದಿಂದ ಚಿತ್ರ ತಕ್ಕ ಮಟ್ಟಿಗೆ ಬಂದಿದೆ, ಉಳಿದದ್ದು ನಿಮ್ಮ ಕೈಯಲ್ಲಿದೆ...ಹೀಗೆ ಯುವ ನಿರ್ದೇಶಕ ನವನ್ ಶ್ರೀನಿವಾಸ್ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.[ಬದುಕಿನ ಅರ್ಥ ತಿಳಿಸುವ 'ಸೆವೆಂಟೀನ್' ಚಿತ್ರ]

  ಮಲೆನಾಡಿನ ಸುಂದರ ಪರಿಸರ ಹೊರಗಿನ ಮಂದಿಗೆ ಎಷ್ಟು ಸುಂದರವೋ ಅಷ್ಟೇ ನಿಗೂಢವೂ ಕೂಡಾ. ಗೋಣಿಚೀಲದಲ್ಲಿ ಬಂಧಿತನಾದ ವ್ಯಕ್ತಿಗೆ ಹೊರ ಜಗತ್ತು ಕಂಡರೂ ಹೊರಬರಲಾದ ಸ್ಥಿತಿ ಇದ್ದಂತೆ. ಇಲ್ಲಿ ಎಲ್ಲವೂ ಸರಳ, ಸುಂದರ ಹಾಗೂ ನೂತನವಾಗಿ ಕಾಣುತ್ತದೆ. ಆದರೆ, ಪರಿಸರದ ಒಳಹೊಕ್ಕು ನೋಡಲು ತಾಳ್ಮೆ -ಜಾಣ್ಮೆ ಬೇಕು, ಇದನ್ನು ಪ್ರೇಮ ಕಥೆಯ ಮೂಲಕ ನವನ್ ಸಾಧಿಸಿದ್ದಾರೆ.[ಆಸರೆ ಕನ್ನಡ ಕಿರು ಚಿತ್ರ ನೋಡಿ]

  ಮಲೆನಾಡಿನ ಸಮಸ್ಯೆಗಳ ಬಗ್ಗೆ ಸಾಕ್ಷ್ಯಚಿತ್ರಗಳು ಅನೇಕ ಬಂದಿರಬಹುದು. ಅದರೆ, ಈ ಪರಿಸರದ ಅರಣ್ಯ ಸಂರಕ್ಷಣೆ, ಜಾತಿ, ಮತ ಮೀರಿದ ಪ್ರೇಮ, ಮುಗ್ಧ ಮನಸ್ಸುಗಳ ನಿತ್ಯ ಜೀವನವನ್ನು ಸೂಕ್ಷ್ಮವಾಗಿ ತೆರೆದಿಡುವ ಮೂಲಕ ನವನ್ ಅವರು ಒಳ್ಳೆ ಕುಸುರಿ ಕಲೆಗಾರರಾಗಿ ಬಿಟ್ಟಿದ್ದಾರೆ. ['ಜಯನಗರ 4ನೇ ಬ್ಲಾಕ್' ಒಂದು ವಿಭಿನ್ನ ಕಿರುಚಿತ್ರ]

  ಪುಟ್ಗೋಸಿ ಎಂಬ ಶಾರ್ಟ್ ಸಿನಿಮಾ ನೀಡಿದ್ದ ನವನ್ ಈ ದುರಂತ ಪ್ರೇಮಕಥೆಯ ಹಲವು ವಿಷಯಗಳನ್ನು ಚುಟುಕಾಗಿ ಹೇಳಿ ಮುಗಿಸಿದ್ದಾರೆ. ಮಾತಿಗಿಂತ ದೃಶ್ಯಗಳ ಮೂಲಕವೇ ಕಥೆ ಕಟ್ಟಿದ್ದಾರೆ. ನವನ್ ಯಶಸ್ಸಿಗೆ ಅವರ ಫೇಸ್ ಬುಕ್ ಪುಟ ನೋಡಿದರೆ ತಿಳಿಯುತ್ತದೆ. ಈ ಕಿರುಚಿತ್ರ ನೋಡಿ ನಿಮ್ಮ ಅನಿಸಿಕೆಯನ್ನು ನವನ್ ಗೆ ತಿಳಿಸಿ ...

  ಎಂ80 ಗೂ ಮತ್ತು ಬೈಸಿಕಲ್ಲಿಗೂ ಲವ್

  ಎಂ80 ಗೂ ಮತ್ತು ಬೈಸಿಕಲ್ಲಿಗೂ ಲವ್

  ಬಜಾಜ್ ಎಂ80 ಸವಾರನಿಗೂ ಮತ್ತು ಬೈಸಿಕಲ್ ಪುಟ್ಟಿ ನಡುವಿನ ಸಂಭಾಷಣೆ, ಪುಟ್ಟಿಯ ಮುಗ್ಧತೆ, ನಾಯಕನ ಒರಟುತನ, ನಿರ್ಲಕ್ಷ್ಯತನ ಎಲ್ಲವೂ ನೈಜವಾಗಿ ಮೂಡಿ ಬಂದಿದೆ. ಹೀಗೂ ಲವ್ ಮಾಡ್ತಾರಾ ಎಂದು ಬೆಂಗಳೂರು ಜನಕ್ಕೆ ಅನಿಸಬಹುದು. ಅದರೆ, ಮಲೆನಾಡಿನ ಮುಗ್ಧ ಮುಗ್ಧೆಯರ ಪ್ರೇಮ ಎಷ್ಟೋ ಬಾರಿ ಮೌನದಲ್ಲೇ ಆರಂಭವಾಗಿ ಮೌನದಲ್ಲಿ ಕೊನೆಗೊಂಡಿರುತ್ತದೆ.

   ನಾಯಕನ ಆಯ್ಕೆ ಹಾಗೂ ಇತರೆ ಪಾತ್ರವರ್ಗ

  ನಾಯಕನ ಆಯ್ಕೆ ಹಾಗೂ ಇತರೆ ಪಾತ್ರವರ್ಗ

  ನಾಯಕನ ಆಯ್ಕೆ ಹಾಗೂ ಕ್ಲೈಮಾಕ್ಸ್ ನಲ್ಲಿ ಇನ್ನಷ್ಟು ಹೆಚ್ಚಿನ ಪರಿಶ್ರಮ ವಹಿಸಿ ನಟಿಸಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಅದರೆ, ನಟನೆಯಲ್ಲಿ ಇನ್ನಷ್ಟು ಕಲಿಯಲು ಸಾಕಷ್ಟು ಅವಕಾಶ ಗಳಿವೆ. ವಿಶ್ವ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಲಿ, ಹೀರೋ ಎಂಬಂತೆ ಬಿಂಬಿಸುವುದಾಗಲಿ ನವನ್ ಅವರ ಉದ್ದೇಶವಲ್ಲ ಎಂಬುದನ್ನು ಮನಗಾಣಬಹುದು.

  ಚೀಂಕ್ರ ಪಾತ್ರಧಾರಿಯಾಗಿ ನವನ್ ಅವರೇ ಅಭಿನಯಸಿದ್ದು ಪ್ಲಸ್ ಪಾಯಿಂಟ್ ಆಗಿದೆ. ಡಿಸೋಜ, ಫಾರೆಸ್ಟ್ ಆಫೀಸರ್ ಎಲ್ಲರೂ ಸಹಜ ಅಭಿನಯ ನೀಡಿದ್ದಾರೆ. ಬೈಸಿಕಲ್ ಪುಟ್ಟಿ ಕಣ್ಣರಳಿ ನೋಡಿದರೆ ಸಾಕು ಮಾತುಗಳು ಯಾರಿಗೆ ಬೇಕು!

  ಸಂಭಾಷಣೆ ಇನ್ನಷ್ಟು ಸೇರಿಸಬಹುದಾಗಿತ್ತು

  ಸಂಭಾಷಣೆ ಇನ್ನಷ್ಟು ಸೇರಿಸಬಹುದಾಗಿತ್ತು

  ಬಿದ್ದು ಹೋಗೋ ಮರಗಳನ್ನೆಲ್ಲ ತಂದು ಮರ ಕಾಯೋಕೆ ಬಿಟ್ಟಿದ್ದಾರೆ. ಮಕ್ಕಳಿಗೆ ಮರ ಅಲ್ಲಾ ಮರದ ಎಲೆ ಮುಟ್ಟೋಕು ಬಿಡಲ್ಲ ಎಂಬ ಫಾರೆಸ್ಟ್ ಆಫೀಸರ್ ಡೈಲಾಗ್ ಇರಲಿ, ಚೀಂಕ್ರನ ಡೈಲಾಗ್ ಇರಲಿ ಕೊನೆಯಲ್ಲಿ ನಾಯಕ-ನಾಯಕಿ ಸಂಭಾಷಣೆಯಾಗಲಿ ಇನ್ನಷ್ಟು ಬೆಳೆಸಬಹುದಿತ್ತು. ಅದರೆ, ಚಿಕ್ಕದಾಗಿ ಚೊಕ್ಕವಾಗಿ ಹೇಳಬೇಕಾದ್ದನ್ನು ಹೇಳುವಲ್ಲಿ ಸಫಲರಾಗಿದ್ದಾರೆ.

  ಪಾತ್ರಧಾರಿಗಳ ಜೊತೆ ಪರಿಸರವೂ ಮಾತಾಡಿದೆ

  ಪಾತ್ರಧಾರಿಗಳ ಜೊತೆ ಪರಿಸರವೂ ಮಾತಾಡಿದೆ

  ಓಮ್ನಿ ವಾನ್ ಇರಬಹುದು, ಕೊನೆಯಲ್ಲಿ ಡಿಸೋಜ ಹೆಣ ಏರಲು ಯತ್ನಿಸುವ ಇಂಬಳವಿರಬಹುದು. ತೀರ್ಥಹಳ್ಳಿಯ ನಿಮ್ಮ ನೆಚ್ಚಿನ ಬಸ್ ಇರಬಹುದು, ಬಜಾಜ್ ಎಂ8, ಬೈಸಿಕಲ್, ಕತ್ತಿ, ಕೊಡೆ, ಕಪ್ಪೆ, ಚಾಟಿ ಹುಳ ಎಲ್ಲವೂ ಮನಸ್ಸಿನಲ್ಲಿ ಉಳಿಯುತ್ತದೆ. ದೃಶ್ಯಗಳು ಇಲ್ಲಿ ಮಾತನಾಡುತ್ತವೆ.

  ಚಿತ್ರದಲ್ಲಿ ಏನು ಪ್ಲಸ್ ಏನು ಮೈನಸ್

  ಚಿತ್ರದಲ್ಲಿ ಏನು ಪ್ಲಸ್ ಏನು ಮೈನಸ್

  ಎಲ್ಲವನ್ನು ಸುಂದರವಾಗಿ ಸೆರೆ ಹಿಡಿಯುವಲ್ಲಿ ನಿಶಾಂತ್ ನಾನಿ ಯಶಸ್ವಿಯಾಗಿದ್ದಾರೆ. ಚಿತ್ರದ ಸಂಕಲನವೂ ಫರ್ಫೆಕ್ಟ್ ಆಗಿ ಬಂದಿದೆ. ಹಿನ್ನಲೆ ಸಂಗೀತ ಇನ್ನಷ್ಟು ಆಪ್ತವಾಗಿದ್ದರೆ ದೃಶ್ಯ ಕಾವ್ಯಕ್ಕೆ ಹೆಚ್ಚಿನ ಮೆರಗು ಸಿಗುತ್ತಿತ್ತು. ಎಂದಿನಂತೆ ಟೈಟಲ್ ಕಾರ್ಡ್ ನಲ್ಲಿ ನವನ್ ಕೈಚಳಕ ತೋರಿದ್ದಾರೆ. ಪೇಟೆ ಬೀದಿ ಇನ್ನಷ್ಟು ತೋರಿಸಬಹುದಿತ್ತು. ಚಿತ್ರ ನಮಗರಿವಿಲ್ಲದಂತೆ ಮಲೆನಾಡಿನ ಊರೊಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

  ಗೋಣಿಚೀಲ ಒಂದು ಸುಂದರ ಕಿರುಚಿತ್ರ

  ಗೋಣಿಚೀಲ ಒಂದು ಸುಂದರ ಕಿರುಚಿತ್ರ ಹೇಗಿದೆ ನೀವೇ ನೋಡಿ ನಿರ್ಧರಿಸಿ.. ಪ್ರತಿಕ್ರಿಯೆ ನವನ್ ಗೆ ಕಳಿಸಿ (https://www.facebook.com/navan.srinivas)

  Direct link : https://www.youtube.com/watch?v=nFpK2aE3IDU

  English summary
  Kannada Short Film - Gonichila -Rare and cute love story directed by Navan Srinivas. Gonichila casting include Vishwa, Shruthi, Avin, Siddu and Nuthan most of them featured in Navan's debut film Putgoc. Gonichila technically very sound and covers many aspect of Malenadu region.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X