For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್‌ಗೆ ಅನಾರೋಗ್ಯ: ಚೆನ್ನೈನ ಆಸ್ಪತ್ರೆಗೆ ದಾಖಲು!

  |

  ತಮಿಳು ಚಿತ್ರರಂಗದ ಲೆಜೆಂಡ್ ಕಮಲ್ ಹಾಸನ್ ಆರೋಗ್ಯದಲ್ಲಿ ದಿಢೀರನೇ ಏರು-ಪೇರಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ (ನವೆಂಬರ್ 23) ಕಮಲ್ ಹಾಸನ್ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್‌ಗೆ ದಾಖಲಾಗಿದ್ದಾರೆ.

  ಕಮಲ್ ಹಾಸನ್‌ಗೆ ನಿನ್ನೆಯಿಂದ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೇ ವೇಳೆ ಕಮಲ್ ಹಾಸನ್ ಅವರಿಗೆ ರೆಗ್ಯೂಲರ್ ಚೆಕಪ್‌ ಕೂಡ ಮಾಡಲಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಕಮಲ್ ಹಾಸನ್‌ ವಿರುದ್ಧ ಮಾಜಿ ಬಿಗ್‌ಬಾಸ್ ಸ್ಪರ್ಧಿ ವನಿತಾ ಗಂಭೀರ ಆರೋಪಕಮಲ್ ಹಾಸನ್‌ ವಿರುದ್ಧ ಮಾಜಿ ಬಿಗ್‌ಬಾಸ್ ಸ್ಪರ್ಧಿ ವನಿತಾ ಗಂಭೀರ ಆರೋಪ

  ಕಮಲ್ ಹಾಸನ್ ಕೆಲಸದ ನಿಮಿತ್ತ ಕೆಲವು ದಿನಗಳ ಕಾಲ ಹೈದರಾಬಾದ್‌ನಲ್ಲಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಂತೆ ನವೆಂಬರ್ 23ರಂದು ಕಮಲ್ ಹಾಸನ್‌ ಆಯಾಸಗೊಂಡಿದ್ದರು. ಇದೇ ವೇಳೆ ಜ್ವರ ಕೂಡ ಇತ್ತು. ಈ ಕಾರಣಕ್ಕೆ ತಕ್ಷಣವೇ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್‌ಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಸದ್ಯ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿದುಬಂದಿದ್ದು, ಇಂದು ಆಸ್ಪತ್ರೆಯಿಂದ ಕಮಲ್ ಹಾಸನ್ ಅವರನ್ನು ಡಿಸ್ಚಾರ್ಜ್ ಆಗುತ್ತಾರೆಂದು ವರದಿಯಾಗಿದೆ.

  ಇತ್ತೀಚೆಗೆ ಕಮಲ್ ಹಾಸನ್ ತಮ್ಮ ಮೆಂಟರ್ ಹಾಗೂ ಹಿರಿಯ ನಿರ್ದೇಶಕ ಕೆ.ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದರು. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆ.ವಿಶ್ವನಾಥ್ ಅವರನ್ನು ಕಮಲ್ ಹಾಸನ್ ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದರು. " ಮಾಸ್ಟರ್ ಕೆ.ವಿಶ್ವನಾಥ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದೆ. ಬಹಳಷ್ಟು ಹಳೆ ನೆನಪುಗಳು ಕಾಡಿದವು. ಅವರಿಗೆ ನನ್ನ ಗೌರವ" ಎಂದು ಕಮಲ್ ಹಾಸನ್ ಇನ್‌ಸ್ಟ್ರಾಗಂನಲ್ಲಿ ಬರೆದುಕೊಂಡಿದ್ದರು.

  ಕೆ ವಿಶ್ವನಾಥ್ ಹಾಗೂ ಕಮಲ್ ಹಾಸನ್ ಇಬ್ಬರೂ ಬಹಳ ವರ್ಷಗಳಿಂದ ಒಟ್ಟಿಗೆ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆ.ವಿಶ್ವನಾಥ್ ನಿರ್ದೇಶಿಸಿದ ಹಲವು ಸಿನಿಮಾಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. 'ಕುರುಥಿಪುನಲ್', 'ಮಹಾನದಿ', 'ಉತ್ತಮ ವಿಲನ್'ನಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಹಾಗೇ 'ಸಾಗರ ಸಂಗಮಂ', 'ಸ್ವಾತಿ ಮುತ್ಯಂ', 'ಶುಭ ಸಂಕಲ್ಪಂ' ಅಂತಹ ಸಿಇಮಾವನ್ನು ನಿರ್ದೇಶಿಸಿದ್ದಾರೆ. 'ಸಾಗರ ಸಂಗಮಂ' ಸಿನಿಮಾದ ಅಭಿನಯಕ್ಕೆ ಕಮಲ್ ಹಾಸನ್‌ಗೆ ಫಿಲ್ಮ್ ಅವಾರ್ಡ್ ಕೂಡ ಲಭಿಸಿತ್ತು.

  Kamal Haasan Hospitalized Due To Fever And Regular Checkup In Chennai

  ಕಮಲ್ ಸದ್ಯ ತಮಿಳಿನ ಬಿಗ್ ಬಾಸ್ ಅವತರಣಿಕೆಯನ್ನು ನಿರೂಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಿರ್ದೇಶಕ ಶಂಕರ್ ಜೊತೆಗೆ 'ಇಂಡಿಯನ್ 2' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 'ವಿಕ್ರಂ' ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಕಮಲ್ ಹಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  English summary
  Kamal Haasan Hospitalized Due To Fever And Regular Checkup In Chennai, Know More.
  Thursday, November 24, 2022, 9:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X