twitter
    For Quick Alerts
    ALLOW NOTIFICATIONS  
    For Daily Alerts

    'ಪೃಥ್ವಿರಾಜ್‌'ಗೆ ಟಕ್ಕರ್ ಕೊಟ್ಟ ಕಮಲ್ ಹಾಸನ್ 'ವಿಕ್ರಂ': 2 ದಿನದ ಕಲೆಕ್ಷನ್ ಎಷ್ಟು?

    |

    ಬಾಕ್ಸಾಫೀಸ್‌ನಲ್ಲಿ ದಕ್ಷಿಣದ ಸಿನಿಮಾಗಳ ಅಧಿಪತ್ಯ ಮುಂದುವರೆದಿದೆ. 'ಕೆಜಿಎಫ್ 2', RRR, 'ಪುಷ್ಪ' ಸಿನಿಮಾ ಮೂಲಕಗಳ ಬಳಿಕ ಮತ್ತೊಂದು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಅದುವೇ ಉಳಗನಾಯಗನ್ ಕಮಲ್ ಹಾಸನ್ ಅಭಿನಯದ 'ವಿಕ್ರಂ'. ಈ ಸಿನಿಮಾ ಎರಡೇ ಎರಡು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡಿದೆ.

    'ವಿಕ್ರಂ' ತಾರಾಗಣ ದೊಡ್ಡದಿದೆ. ಕಮಲ್ ಹಾಸನ್ ಮತ್ತೆ ತನ್ನ ಖದರ್ ತೋರಿಸುತ್ತಿದ್ದಾರೆ. ಬಹಳ ದಿನಗಳ ಬಳಿಕ ಕಮಲ್ ಹಾಸನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಮೆಚ್ಚಿಕೊಂಡಾಡಿದ್ದಾರೆ. ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಹಾಗೂ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ವಿಕ್ರಂ'ಗೆ ಮತ್ತಷ್ಟು ಬೂಸ್ಟ್ ಕೊಟ್ಟಂತಾಗಿದೆ.

    ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್! ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

    'ವಿಕ್ರಂ' ಸಿನಿಮಾ ಜೂನ್ 03ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ ಆಗಿತ್ತು. ಮೊದಲ ದಿನವೇ ಸಿನಿಮಾದ ಕಲೆಕ್ಷನ್ ಸಿನಿಮಾ ಪಂಡಿತರನ್ನು ಬೆಚ್ಚಿಬೀಳಿಸಿತ್ತು. ಎರಡನೇ ದಿನ ಕೂಡ ಕಲೆಕ್ಷನ್ ಸಖತ್ತಾಗಿಯೇ ಇದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವಿಕ್ರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ದಾಟಿದೆ. ಹಾಗಿದ್ದರೆ, ಈ ಎರಡು ದಿನಗಳ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    'ಕೆಜಿಎಫ್ 2', 'RRR' ಈಗಿನವು, ಪ್ಯಾನ್ ಇಂಡಿಯಾ ಸಿನಿಮಾಗಳು ಆಗಲೇ ಬಂದಿದ್ದವು: ಕಮಲ್ ಹಾಸನ್'ಕೆಜಿಎಫ್ 2', 'RRR' ಈಗಿನವು, ಪ್ಯಾನ್ ಇಂಡಿಯಾ ಸಿನಿಮಾಗಳು ಆಗಲೇ ಬಂದಿದ್ದವು: ಕಮಲ್ ಹಾಸನ್

    'ವಿಕ್ರಂ' 2 ದಿನಗಳ ಗಳಿಕೆ 100 ಕೋಟಿ ರೂ.

    ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಗೆಲುವಿನ ಕೇಕೆ ಹಾಕಿದೆ. 100 ಕೋಟಿ ರೂ. ಗಳಿಸುವ ಮೂಲಕ ಎರಡೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನ 'ವಿಕ್ರಂ' ಸಿನಿಮಾ ಸುಮಾರು 58 ಕೋಟಿ ರೂಪಾಯಿ ಕಲೆ ಹಾಕಿತ್ತು. ಅದೇ ರೀತಿ ಎರಡನೇ ದಿನವೂ ಕೂಡ ಸುಮಾರು 39 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ, 97 ಕೋಟಿ ಕಲೆಕ್ಷನ್ ಆಗಿದೆ ಎಂದು ಒಂದು ಲೆಕ್ಕ ಕೊಡುತ್ತಿದೆ. ಇನ್ನೊಂದು ಕಡೆ ಟ್ರೇಡ್ ಅನಲಿಸ್ಟ್ ರಮೇಶ್ ಬಾಲ 'ವಿಕ್ರಂ' 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

    2 ದಿನಗಳಲ್ಲಿ ಭಾರತದಲ್ಲಿ ಗಳಿಸಿದ್ದೆಷ್ಟು?

    2 ದಿನಗಳಲ್ಲಿ ಭಾರತದಲ್ಲಿ ಗಳಿಸಿದ್ದೆಷ್ಟು?

    ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅಭಿನಯದ 'ವಿಕ್ರಂ' ವಿಶ್ವದಾದ್ಯಂತ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಭಾರತದಲ್ಲೂ ಎರಡು ದಿನಗಳ ಕಲೆಕ್ಷನ್ ಅದ್ಭುತವಾಗಿದೆ. ಮೊದಲ ದಿನ ಹಾಗೂ ಎರಡನೇ ದಿನದ ಕಲೆಕ್ಷನ್ ಹೀಗಿದೆ.

    ಶುಕ್ರವಾರ ₹ 34 ಕೋಟಿ
    ಶನಿವಾರ ₹ 31.50 ಕೋಟಿ

    ಒಟ್ಟು ₹65.50 ಕೋಟಿ

    'ವಿಕ್ರಂ' ಎಲ್ಲೆಲ್ಲಿ ಎಷ್ಟೆಷ್ಟು?

    'ವಿಕ್ರಂ' ಎಲ್ಲೆಲ್ಲಿ ಎಷ್ಟೆಷ್ಟು?

    'ವಿಕ್ರಂ' ಸಿನಿಮಾ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಉತ್ತಮ ಕಲೆಕ್ಷನ್ ಚೆನ್ನಾಗಿದೆ. ಮೂರನೇ ದಿನವೂ ಕಲೆಕ್ಷನ್ ಅದ್ಭುತವಾಗಿರುತ್ತೆ ಎಂದು ಅಂದಾಜಿಸಲಾಗಿದೆ. ವಿಕ್ರಂ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದರ ಡಿಟೈಲ್ಸ್ ಇಲ್ಲಿದೆ.

    ತಮಿಳು ನಾಡು ₹ 41 ಕೋಟಿ
    ಆಂಧ್ರ/ತೆಲಂಗಾಣ ₹ 6.25 ಕೋಟಿ
    ಕರ್ನಾಟಕ ₹ 6.75 ಕೋಟಿ
    ಕೇರಳ ₹ 9.75 ಕೋಟಿ
    ಭಾರತ ಇತರೆ ರಾಜ್ಯಗಳು ₹ 1.75 ಕೋಟಿ

    ಒಟ್ಟು ₹ 65.50 ಕೋಟಿ

    ಪೃಥ್ವಿರಾಜ್ ಕಲೆಕ್ಷನ್ ಡಲ್

    ಪೃಥ್ವಿರಾಜ್ ಕಲೆಕ್ಷನ್ ಡಲ್

    'ವಿಕ್ರಂ' ಸಿನಿಮಾದ ಕಲೆಕ್ಷನ್ ನೋಡಿದರೆ, ಪೃಥ್ವಿರಾಜ್ ಸಿನಿಮಾದ ಗಳಿಕೆ ಏನಿಲ್ಲ. ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಮೊದಲ ದಿನ ₹10.70 ಕೋಟಿ ಗಳಿಸಿತ್ತು. ಎರಡನೇ ದಿನ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದ್ದು, ₹12.75 ಕೋಟಿ ಗಳಿಸಿದೆ. ಒಟ್ಟು ಎರಡು ದಿನಗಳಲ್ಲಿ ₹23.45 ಕೋಟಿ ಲೂಟಿ ಮಾಡಿದೆ. 'ವಿಕ್ರಂ' ಸಿನಿಮಾ ಅರ್ಧದಷ್ಟು ಗಳಿಸುವಲ್ಲಿ ಅಕ್ಷಯ್ ಕುಮಾರ್ ಸಿನಿಮಾ ಹಿಂದೆ ಬಿದ್ದದೆ.

    English summary
    Kamal Haasan Starrer Vikram BoxOffice Collection Day 2: Collects Rs 100 crore, Know More.
    Monday, June 6, 2022, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X