For Quick Alerts
  ALLOW NOTIFICATIONS  
  For Daily Alerts

  'ವಿಕ್ರಂ' ಗೆದ್ದಿದ್ದಕ್ಕೆ ರೊಚ್ಚಿಗೆದ್ದು ಉಡುಗೊರೆ ನೀಡಿದ ಕಮಲ್: ರೊಲೆಕ್ಸ್, 13 ಬೈಕ್ ಯಾರಿಗೆ ಏನೇನು?

  |

  ಒಂದು ಸಿನಿಮಾ ಸೂಪರ್ ಹಿಟ್ ಆದರೆ, ಆ ಸಿನಿಮಾ ನಿರ್ದೇಶಕರಿಗೆ ನಟರಿಗೆ ದುಬಾರಿ ಉಡುಗೊರೆ ಕೊಡುವುದು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಸ್ಯಾಂಡಲ್‌ವುಡ್‌ನಲ್ಲೂ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದರೆ, ಸ್ಟಾರ್‌ಗಳಿಗೆ ಹಾಗೂ ನಿರ್ದೇಶಕರಿಗೆ ಭರ್ಜರಿ ಉಡುಗೊರೆ ನೀಡುತ್ತಾರೆ.

  ತಮಿಳಿನಲ್ಲೂ 'ವಿಕ್ರಂ' ಸಿನಿಮಾ ಸೂಪರ್‌ ಹಿಟ್ ಆಗಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಈ ಕಾರಣಕ್ಕೆ ಉಳಗನಾಯಗನ್ ಕಮಲ್ ಹಾಸನ್ ಖುಷಿಗೇ ಪಾರವೇ ಇಲ್ಲ. ಈ ಯಶಸ್ಸಿಗೆ ಕಾರಣರಾದವರಿಗೆಲ್ಲಾ ಕಮಲ್ ಹಾಸನ್ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ.

  'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!

  ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅಭಿನಯದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇದೇ ಖುಷಿಯಲ್ಲಿ ಕಮಲ್ ಹಾಸನ್ ನಿರ್ದೇಶಕರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇಲ್ಲಿಂದ ಶುರುವಾಗಿರುವ ಉಡುಗೊರೆಗಳ ಸರಣಿ ಮುಂದುವರೆಯುತ್ತಲೇ ಇದೆ.

  ಸೂರ್ಯಗೆ ರೋಲೆಕ್ಸ್ ವಾಚ್

  ಸೂರ್ಯಗೆ ರೋಲೆಕ್ಸ್ ವಾಚ್

  'ವಿಕ್ರಂ' ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ ದುಬಾರಿ ಉಡುಗೊರೆ ನೀಡಿದ ಬಳಿಕ ಕಮಲ್ ಹಾಸನ್ ಇಲ್ಲಿಗೆ ಸುಮ್ಮನಾಗಬಹುದು ಎಂದುಕೊಂಡಿದ್ದರು. ಆದರೆ, ಕಮಲ್ ಉದಾರ ಮನಸ್ಸು ಹಾಗೇ ಮುಂದುವರೆದಿದೆ. ಸ್ನೇಹಪೂರ್ವಕವಾಗಿ ಸಿನಿಮಾದಲ್ಲಿ 3 ನಿಮಿಷ ಕಾಣಿಸಿಕೊಂಡಿದ್ದ ಸೂರ್ಯಗೆ ಕಮಲ್ ಹಾಸನ್ ದುಬಾರಿ ಬೆಲೆಯ ರೋಲೆಕ್ಸ್ ವಾಚ್ ನೀಡಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಸೂರ್ಯ ಪಾತ್ರದ ಹೆಸರು ಕೂಡ ರೋಲೆಕ್ಸ್.

  ಮೂರೇ ದಿನದಲ್ಲಿ 'ವಿಕ್ರಂ' ಕಲೆಕ್ಷನ್ ₹150 ಕೋಟಿ: ಕಮಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?ಮೂರೇ ದಿನದಲ್ಲಿ 'ವಿಕ್ರಂ' ಕಲೆಕ್ಷನ್ ₹150 ಕೋಟಿ: ಕಮಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

  ಸೂರ್ಯ ಮನೆಯಲ್ಲಿಯೇ ಕಮಲ್ ಗಿಫ್ಟ್

  ಸೂರ್ಯ ಇಡೀ ಸಿನಿಮಾ 3 ನಿಮಿಷ ಕಂಡರೂ, ವಿಮರ್ಶಕರು ಅವರ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸೂರ್ಯ ಪಾತ್ರವೇ ಕಾರಣ ಎನ್ನುತ್ತಿದ್ದಾರೆ. ಈ ಮೂಲಕ 'ವಿಕ್ರಂ 3' ಸೂರ್ಯ ಪಾತ್ರವೇ ಪ್ರಮುಖ ಕಾರಣವಾಗಿದೆ. ಕಮಲ್ ಹಾಸನ್ ಕೂಡ ಈ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದು, ಟಿ ನಗರದಲ್ಲಿರುವ ಸೂರ್ಯ ಮನೆಗೆ ಹೋಗಿ ಉಡುಗೊರೆಯನ್ನು ನೀಡಿದ್ದಾರೆ.

  13 ಬೈಕ್ ನೀಡಿದ ಕಮಲ್ ಹಾಸನ್

  13 ಬೈಕ್ ನೀಡಿದ ಕಮಲ್ ಹಾಸನ್

  ಕಮಲ್ ಹಾಸನ್ ಕೇವಲ ಪ್ರಮುಖರಿಗಷ್ಟೇ ಉಡುಗೊರೆಗಳನ್ನು ನೀಡಿಲ್ಲ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್‌ ಜೊತೆ ಸಹಾಯಕರಾಗಿ ದುಡಿದಿರುವ ನಿರ್ದೇಶಕರುಗಳಿಗೂ ಕಮಲ್ ಹಾಸನ್ ಉಡುಗೊರೆಗಳನ್ನು ನೀಡಿದ್ದಾರೆ. ಸುಮಾರು 13 ಮಂದಿ ನಿರ್ದೇಶಕರಿಗೆ ಅಪಾಚಿ RTR 160 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  'ಪೃಥ್ವಿರಾಜ್‌'ಗೆ ಟಕ್ಕರ್ ಕೊಟ್ಟ ಕಮಲ್ ಹಾಸನ್ 'ವಿಕ್ರಂ': 2 ದಿನದ ಕಲೆಕ್ಷನ್ ಎಷ್ಟು?'ಪೃಥ್ವಿರಾಜ್‌'ಗೆ ಟಕ್ಕರ್ ಕೊಟ್ಟ ಕಮಲ್ ಹಾಸನ್ 'ವಿಕ್ರಂ': 2 ದಿನದ ಕಲೆಕ್ಷನ್ ಎಷ್ಟು?

  ₹200 ಕೋಟಿ ಗಳಿಸಿದ 'ವಿಕ್ರಂ'

  ಕಮಲ್ ಹಾಸನ್ ಸಿನಿಮಾಗೆ ಮೌತ್ ಟಾಕ್ ಚೆನ್ನಾಗಿದೆ. ವಿಶ್ವದಾದ್ಯಂತ 'ವಿಕ್ರಂ' ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಬಿಡುಗಡೆಯಾದ ಒಂದು ವಾರಕ್ಕೆ ಸಿನಿಮಾ ವಿಶ್ವದಾದ್ಯಂತ ₹200 ಕೋಟಿ ಲೂಟಿ ಮಾಡಿದೆ. 'ವಿಕ್ರಂ' ವೇಗ ನೋಡುತ್ತಿದ್ದರೆ, ಈ ಸಿನಿಮಾ ₹500 ಕೋಟಿವರೆಗೂ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ.

  English summary
  Vikram Success: Kamal Haasan Gifts Rolex to Surya and 13 Bikes To Assistant Directors, Know More.
  Thursday, June 9, 2022, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X