Don't Miss!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಕ್ಕಾ ಬಾರ್‌ನಲ್ಲಿ ಜನಪ್ರಿಯ ಕಿರುತೆರೆ ನಟಿ ಅರೆಸ್ಟ್
ಜನಪ್ರಿಯ ಟಿವಿ ಸೀರಿಯಲ್ ಒಂದರ ತಾರೆಯಾಗಿರುವ ಜಿಯಾ ಮಾನೇಕ್ ಅಲಿಯಾಸ್ ಗೋಪಿ ಬಹು ಎಂಬ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಹುಕ್ಕಾ ಬಾರ್‌ನಲ್ಲಿ ಒಟ್ಟು 21 ಮಂದಿ ಸಿಕ್ಕಿಬಿದ್ದಿದ್ದು ಅವರಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ.
ಬಂಧನಕ್ಕೊಳಗಾದಾಗ ಈಕೆ ತನ್ನ ಮುಖ ಮುಚ್ಚಿಕೊಂಡು ಕ್ಯಾಮೆರಾಗೆ ತೋರಿಸಿರಲಿಲ್ಲ. ಪೊಲೀಸರಿಗೆ ತನ್ನ ವಿವರಗಳನ್ನು ನೀಡಲು ನಿರಾಕರಿಸಿದ್ದಳು. ತನ್ನ ಚಿತ್ರವನ್ನು ತೆಗೆಯಲು ಹೋದ ಛಾಯಾಗ್ರಾಹಕರನ್ನು ತಳ್ಳಿದ್ದಳು. ಬಳಿಕ ಪೊಲೀಸರು ವಿಚಾರಣೆಯಲ್ಲಿ ಈಕೆಯ ವಿವರಗಳು ಬಹಿರಂಗವಾಗಿವೆ. ಈಕೆ ಹಿಂದಿಯ 'ಸಾಥ್ ನಿಭಾನ್ ಸಾಥಿಯಾ' ಧಾರಾವಾಹಿಯ ತಾರೆ ಎಂದು ಗೊತ್ತಾಗಿದೆ.
ಈಕೆಯೊಂದಿಗೆ ಆರೋಗ್ಯ ಸಚಿವರ ಪುತ್ರನೂ ಹುಕ್ಕಾ ಬಾರ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಮಾರ್ಚ್ 29ರಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಹುಕ್ಕಾ ಬಾರ್ ಒಂದರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ಗೋಪಿ ಬಹು ತನ್ನ ಪಾತ್ರದ ಮೂಲಕ ವೀಕ್ಷಕರ ಹೃದಯ ಗೆದ್ದಿದ್ದರು. ಆದರೆ ಈಗ ಆಕೆ ಹುಕ್ಕಾ ಬಾರ್‌ನಲ್ಲಿ ಸಿಕ್ಕಿಬಿದ್ದಿರುವುದು ಆಕೆಯ ವೃತ್ತಿಜೀವನದಲ್ಲಿ ಕಪ್ಪು ಚುಕ್ಕೆಯಾಗಿದೆ. (ಏಜೆನ್ಸೀಸ್)