»   » ಬಿಗ್ ಬಾಸ್ 8 ಏರ್ ಕ್ರಾಫ್ಟ್ ಟಿಕೆಟ್ ಯಾರಿಗೆ?

ಬಿಗ್ ಬಾಸ್ 8 ಏರ್ ಕ್ರಾಫ್ಟ್ ಟಿಕೆಟ್ ಯಾರಿಗೆ?

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ಸೆ.21 ರಿಂದ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದ್ದು, ಎಂದಿನಂತೆ ಬಾಲಿವುಡ್ ನ ಸ್ಟಾರ್ ಸಲ್ಮಾನ್ ಖಾನ್ ಅವರು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿವಾದಿತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಕುತೂಹಲ ಇನ್ನೂ ಕಾಯ್ದುಕೊಳ್ಳಲಾಗಿದೆ.

ಏರ್ ಕ್ರಾಫ್ಟ್ ಥೀಮ್ ನಲ್ಲಿ ಪೈಲಟ್ ಗೆಟ್ ಅಪ್ ನಲ್ಲಿ ಸಲ್ಮಾನ್ ಖಾನ್ ಮಿಂಚುತ್ತಿದ್ದು, ಕಳೆದ ಎಲ್ಲಾ ಆವೃತ್ತಿಗಳಿಗಿಂತ ಭಿನ್ನವಾಗಿ ಇನ್ನಷ್ಟು ಐಷಾರಾಮಿಯಾಗಿ ಬಿಗ್ ಬಾಸ್ 8 ಮೂಡಿ ಬರಲಿದೆ ಎಂದು ಕಲರ್ಸ್ ವಾಹಿನಿ ಹೇಳಿಕೊಂಡಿದೆ. ಬಿಸಿನೆಸ್ ಕ್ಲಾಸ್, ಎಕಾನಾಮಿ ಕ್ಲಾಸ್ ಜೊತೆಗೆ ವೇಟಿಂಗ್ ಲಾಂಜ್ ಕೂಡಾ ಇರುತ್ತದೆಯಂತೆ. ಸಲ್ಮಾನ್ ಖಾನ್ ಸಂಭಾವನೆ ಕೇಳಿ ಬಾಲಿವುಡ್ ಬೆಚ್ಚಿದೆಯಂತೆ. ['ಸಂಭಾವನೆ,' ಸಲ್ಲೂ ಬಿಗ್ ಬಾಸ್]

ಸ್ಪರ್ಧಿಗಳ ವಿಷಯಕ್ಕೆ ಬಂದರೆ ಜನಪ್ರಿಯ ನಟ, ನಟಿ, ಮಾದಕ ತಾರೆ, ಟಿವಿ ಜಗತ್ತಿನ ಜನಪ್ರಿಯ ಸ್ಟಾರ್, ವಿವಾದಿತ ವ್ಯಕ್ತಿ, ಸಲಿಂಗಿಗಳನ್ನು ಆಯ್ಕೆ ಮಾಡುವ ಮಾದರಿ ಮುಂದುವರೆಯುವ ಸಾಧ್ಯತೆಯಿದೆ..ಲಭ್ಯ ಮಾಹಿತಿ ಪ್ರಕಾರ ದಕ್ಷಿಣ ಭಾರತದ ಹಾಟ್ ನಟಿ ಪ್ರಿಯಾಮಣಿ ಕೂಡಾ ಫ್ಲೈಟ್ ಟಿಕೆಟ್ ಸಿಕ್ಕಿದೆಯಂತೆ ಬಿಗ್ ಬಾಸ್ 8 ರ ಸಂಭಾವ್ಯ ಸ್ಪರ್ಧಿಗಳ ವಿವರ ಇಲ್ಲಿದೆ. [ಸ್ಪರ್ಧಿಯಾಗ್ಬೇಕಾ 21 ಕೋಟಿ ರು ಕೊಡಿ]

ಮೊದಲ ಸಂಭಾವ್ಯ ಪಟ್ಟಿಯಲ್ಲಿ ಶೆರ್ಲಿನ್
  

ಮೊದಲ ಸಂಭಾವ್ಯ ಪಟ್ಟಿಯಲ್ಲಿ ಶೆರ್ಲಿನ್

ಮಾದಕ ನಟಿ ಕಾಮಸೂತ್ರ ಚಿತ್ರದ ಟ್ರೇಲರ್ ಮೂಲಕವೇ ಪಡ್ಡೆಗಳ ನಿದ್ದೆಗೆಡಿಸಿದ ಶೆರ್ಲಿನ್ ರನ್ನು 90 ದಿನಗಳ ಕಾಲ ಮನೆಯಲ್ಲಿ ಉಳಿಯುವಂತೆ ಬಿಗ್ ಬಾಸ್ ಆಯೋಜಕರು ಕೇಳಿದ್ದಾರಂತೆ. [ಸಂಭಾವ್ಯ ಸ್ಪರ್ಧಿಗಳ ವಿವರ]

 

 

ಎರಡನೇ ಪಟ್ಟಿಯಲ್ಲಿ ಪ್ರಿಯಾಮಣಿ
  

ಎರಡನೇ ಪಟ್ಟಿಯಲ್ಲಿ ಪ್ರಿಯಾಮಣಿ

ಎರಡನೇ ಪಟ್ಟಿಯಲ್ಲಿ ಪ್ರಿಯಾಮಣಿ ಹೆಸರು ಕಾಣಿಸಿಕೊಂಡಿದ್ದು, ದಕ್ಷಿಣ ಭಾರತದ ಹೆಸರಾಂತ ನಟಿ ಬೆಂಗಳೂರಿನ ಹುಡುಗಿ ಪ್ರಿಯಾಮಣಿ ಅವರು ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರಾ? ಕಾದು ನೋಡಬೇಕಿದೆ, ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕ ಪ್ರಿಯಾಮಣಿ ಮೋಡಿ ಮಾಡಿದ್ದರು.

ಕರಿಷ್ಮಾ ತನ್ನಾ
  

ಕರಿಷ್ಮಾ ತನ್ನಾ

ಹಲವು ದಿನಗಳಿಂದ ಗ್ಲಾಮರ್ ಜಗತ್ತಿನಲ್ಲಿ ಕಾಣಿಸಿಕೊಳ್ಳದ ಕರಿಷ್ಮಾ ತನ್ನಾ ಈಗ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಪರ್ಧಿಗಳ ಲಿಸ್ಟ್ ನಲ್ಲಿದೆಯಂತೆ

ಮಾಹಿ ವಿಜ್
  

ಮಾಹಿ ವಿಜ್

ನಟಿ ಮಾಹಿ ವಿಜ್ ಹಲವು ಶೋಗಳಲ್ಲಿ ಈಗಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಗೂ ಆಹ್ವಾನ ಸಿಕ್ಕಿದೆಯಂತೆ

ಐ ಚಿತ್ರದ ವಿಲನ್ ಉಪೇನ್ ಪಟೇಲ್
  

ಐ ಚಿತ್ರದ ವಿಲನ್ ಉಪೇನ್ ಪಟೇಲ್

ಐ ಚಿತ್ರದ ವಿಲನ್ ಉಪೇನ್ ಪಟೇಲ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗುವ ಲಕ್ಷಣಗಳು ಹೆಚ್ಚಿದೆ. ಅದರೆ, ಮಾಡೆಲ್ ಕಮ್ ನಟ ಉಪೇನ್ ಇನ್ನೂ ಆಫರ್ ಒಪ್ಪಿಲ್ಲ ಎಂಬ ಸುದ್ದಿಯೂ ಇದೆ. [ಐ ಆಡಿಯೋ ರಿಲೀಸ್ ನೋಡಿ]

ಸಂಗೀತಾ ಬಿಜಲಾನಿ
  

ಸಂಗೀತಾ ಬಿಜಲಾನಿ

ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ಮಾಜಿ ಕ್ರಿಕೆಟರ್ ಹಾಲಿ ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಅವರ ಸಂಗಾತಿ ಸಂಗೀತಾ ಬಿಜಲಾನಿ ಅವರನ್ನು ಬಿಗ್ ಬಾಸ್ ಮನೆಗೆ ಬರುವಂತೆ ಆಹ್ವಾನಿಸಲಾಗಿದೆಯಂತೆ.

ರಾಹುಲ್ ದೇವ್
  

ರಾಹುಲ್ ದೇವ್

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ವಿಲನ್ ರಾಹುಲ್ ದೇವ್ ಅವರನ್ನು ಬಿಗ್ ಬಾಸ್ ಗಾಜಿನ ಮನೆಯಲ್ಲಿ ಕಟ್ಟಿ ಹಾಕಲು ಯೋಚಿಸಲಾಗಿದೆ, ರಾಹುಲ್ ಇನ್ನೂ ಒಪ್ಪಿಗೆ ನೀಡಿಲ್ಲವಂತೆ.

ನಟಿ ರಶ್ಮಿ ದೇಸಾಯಿ
  

ನಟಿ ರಶ್ಮಿ ದೇಸಾಯಿ

ನಟಿ, ಡ್ಯಾನ್ಸರ್, ಕಿರುತೆರೆ ಸ್ಟಾರ್ ರಶ್ಮಿ ದೇಸಾಯಿ ಅವರ ಉತ್ತರನ್ ಧಾರಾವಾಹಿ ಜನಪ್ರಿಯತೆಯನ್ನು ಬಿಗ್ ಬಾಸ್ ಶೋಗೂ ಹರಿಸಲು ಕಲರ್ಸ್ ಯೋಜಿಸಿದೆ.

ಜುಗಲ್ ಹಂಸರಾಜ್
  

ಜುಗಲ್ ಹಂಸರಾಜ್

ಮೊಹಬ್ಬತೇನ್ ಚಿತ್ರದ ನಟ ಜುಗಲ್ ಹಂಸರಾಜ್ ಒಂದು ಕಾಲದಲ್ಲಿ ಹಾಟ್ ನಟರ ಸಾಲಿನಲ್ಲಿ ಕಾಣಿಸಿಕೊಂಡವರು. ಈ ಬಾರಿ ಬಿಗ್ ಬಾಸ್ ಗೆ ಬಂದು ತಮ್ಮ ವೃತ್ತಿ ಬದುಕಿನ ಕಥೆ ಹೇಳಿಕೊಳ್ಳುವರೆ?

ವಿಜೆ ರಘು
  

ವಿಜೆ ರಘು

ಕಿರುತೆರೆ ಅತ್ಯಂತ ಜನಪ್ರಿಯ ವಿಜೆ ರಘು ಅವರು ವಿವಾದಿತ ಎಂಟಿವಿ ರೋಡಿಸ್ ಮೂಲಕ ಎಲ್ಲರಿಗೂ ಚಿರಪರಿಚಿತ. ಬೋಲ್ಡ್ ಮಾತುಗಳಿಗೆ ಫೇಮಸ್ ಆಗಿರುವ ರಘು ಬಿಗ್ ಬಾಸ್ ಮನೆ ಸ್ಪರ್ಧಿಯಾಗಲು ಬಯಸಿದ್ದಾರಂತೆ.

ನಟಿ ರಾಗಿಣಿ ಖನ್ನಾ
  

ನಟಿ ರಾಗಿಣಿ ಖನ್ನಾ

ನಿರೂಪಕಿ ಕಮ್ ನಟಿ ರಾಗಿಣಿ ಖನ್ನಾ ಅವರು ಬಿಗ್ ಬಾಸ್ ಮನೆ ಸ್ಪರ್ಧಿಯಾಗುವರೆ?

ಅರ್ ಜೆ ಪ್ರೀತಮ್
  

ಅರ್ ಜೆ ಪ್ರೀತಮ್

ಜನಪ್ರಿಯ ಆರ್ ಜೆ ಪ್ರೀತಮ್ ಅವರಿಗೂ ಬಿಗ್ ಬಾಸ್ ಮನೆಗೆ ಬರುವಂತೆ ಆಹ್ವಾನ ಸಿಕ್ಕಿದೆಯಂತೆ.

ನಟಿ ಮೋನಾ ಸಿಂಗ್
  

ನಟಿ ಮೋನಾ ಸಿಂಗ್

ಜೆಸ್ಸಿ ಜೈಸಾ ಕೋಯಿ ನಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ಮೋನಾ ಸಿಂಗ್ ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದೆ.

ನಟಿ ಆರತಿ ಛಾಬ್ರಿಯಾ
  

ನಟಿ ಆರತಿ ಛಾಬ್ರಿಯಾ

ಕನ್ನಡದಲ್ಲೂ ನಟಿಸಿರುವ ಆರತಿ ಛಾಬ್ರಿಯಾ ಅವರು ಮತ್ತೊಮ್ಮೆ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರಂತೆ.

ಗಾಯಕಿ ಹರ್ದ್ ಕೌರ್
  

ಗಾಯಕಿ ಹರ್ದ್ ಕೌರ್

ಜನಪ್ರಿಯ ಗಾಯಕಿ ಹರ್ದ್ ಕೌರ್ ಅವರಿಗೆ ಬಿಗ್ ಬಾಸ್ ಮನೆ ಅಹ್ವಾನ ಸಿಕ್ಕಿದೆಯಂತೆ.

ನಟಿ ಕೋಯ್ನಾ ಮಿತ್ರಾ
  

ನಟಿ ಕೋಯ್ನಾ ಮಿತ್ರಾ

ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಕೋಯ್ನಾ ಮಿತ್ರಾ ಬಿಗ್ ಬಾಸ್ ಮನೆ ಪ್ರವೇಶಿಸುವರೇ ಉತ್ತರ ಸೆ.21 ರ ರಾತ್ರಿ ಸಿಗಲಿದೆ.

ಸಂಜಯ್ ದತ್ ಬಿಗ್ ಬಾಸ್ ಮನೆಗೆ ಬರಲಿ
  

ಸಂಜಯ್ ದತ್ ಬಿಗ್ ಬಾಸ್ ಮನೆಗೆ ಬರಲಿ

ಸಂಜಯ್ ದತ್ ಬಿಗ್ ಬಾಸ್ ಮನೆಗೆ ಬರಲಿ, ಜೈಲಿನ ಬದಲು ಇಲ್ಲಿ ಕಾಲ ಕಳೆಯಲಿ ಎಂದು ನಿರೂಪಕ ಸಲ್ಮಾನ್ ಖಾನ್ ಬಯಸಿದ್ದಾರೆ. 55 ವರ್ಷ ವಯಸ್ಸಿನ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಐದು ವರ್ಷ ಶಿಕ್ಷೆ ಅನುಭವಿಸುತ್ತಿದ್ದು, ಮುಂಬೈನ ಯರವಾಡಾ ಜೈಲಿನಲ್ಲಿದ್ದಾರೆ.

ಕಿರುತೆರೆ ನಟ ಗೌತಮ್ ಗುಲಾಟಿ
  

ಕಿರುತೆರೆ ನಟ ಗೌತಮ್ ಗುಲಾಟಿ

ದಿಯಾ ಔರ್ ಬಾತಿ ಹಮ್ ಧಾರಾವಾಹಿಯ ನಟ ಗೌತಮ್ ಗುಲಾಟಿ ಅವರು ಬಿಗ್ ಬಾಸ್ 8 ರ ಸ್ಪರ್ಧಿಯಾಗಿರುವುದು ಖಚಿತವಾಗಿದೆ. ಧಾರಾವಾಹಿಯಲ್ಲಿ ಗೌತಮ್ ನಟಿಸುತ್ತಿದ್ದ ವಿಕ್ರಮ್ ಪಾತ್ರಕ್ಕೆ ಕರಣ್ ಬಂದಿದ್ದಾರೆ ಎಂದು ತಿಳಿದು ಬಂದಿದೆ.

English summary
With Bigg Boss 8 starting from September 21, the controversial reality show hosted by Salman Khan is all everyone is talking about. Colors' TV are keeping the names of contestants close to their chest but here are some of the names that are making rounds and are most likely to be living in the glass house for 90 odd days.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada