For Quick Alerts
  ALLOW NOTIFICATIONS  
  For Daily Alerts

  ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಮಗೆ ಅಕುಲ್ ಬಾಲಾಜಿ ಅವಮಾನ ಮಾಡಿದ್ದಾರೆ ಎಂದು ಆದಮ್ ಪಾಶಾ ಆರೋಪಿಸಿದ್ದರು. ವೇದಿಕೆ ಮೇಲೆ ಸ್ತ್ರೀಲಿಂಗ-ಪುಲ್ಲಿಂಗದ ಬಗ್ಗೆ ಮಾತನಾಡಿ ತಮಗೆ ನೋವಾಗುವ ಹಾಗೆ ಅಕುಲ್ ನಡೆದುಕೊಂಡಿದ್ದಾರೆ ಅಂತ ಆದಮ್ ಪಾಶಾ ಮುನಿಸಿಕೊಂಡಿದ್ದರು.

  ಇದೇ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಆದಮ್ ಪಾಶಾ ಮನಸ್ಸು ಮಾಡಿದ್ದರು. ಅಲ್ಲದೇ, ತಮಗೆ ಜನ ವೋಟ್ ಮಾಡಿದರೂ ಔಟ್ ಮಾಡುವೆ ಎಂದು ಧಮ್ಕಿ ಹಾಕಿದ ನಿರ್ದೇಶಕಿ ಶ್ರದ್ಧಾ ವಿರುದ್ಧವೂ ಕಂಪ್ಲೇಂಟ್ ಕೊಡಲು ಆದಮ್ ಮುಂದಾಗಿದ್ದರು.

  ಈ ಎಲ್ಲದರ ನಡುವೆ ನಿನ್ನೆ (ಭಾನುವಾರ) 'ತಕಧಿಮಿತ' ನೂತನ ಸಂಚಿಕೆ ಪ್ರಸಾರವಾಗಿದೆ. ಇದರಲ್ಲಿ ಆದಮ್ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಪುನೀತ್ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ. ಅಷ್ಟಕ್ಕೂ, ಇವರಿಬ್ಬರ ನಡುವೆ ಏನಾಯ್ತು.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಆದಮ್ ಪಾಶಾ-ಪುನೀತ್ ನಾಯಕ್

  ಆದಮ್ ಪಾಶಾ-ಪುನೀತ್ ನಾಯಕ್

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಶುರುವಾದ ಡ್ಯಾನ್ಸ್ ರಿಯಾಲಿಟಿ ಶೋ 'ತಕಧಿಮಿತ'. ಇದರಲ್ಲಿರುವ ಸ್ಪರ್ಧಿಗಳ ಪೈಕಿ ಆದಮ್ ಪಾಶಾ ಕೂಡ ಒಬ್ಬರು. ಆದಮ್ ಪಾಶಾಗೆ ಪುನೀತ್ ನಾಯಕ್ ಎಂಬುವರು ಡ್ಯಾನ್ಸ್ ಪಾರ್ಟ್ನರ್ ಆಗಿದ್ದರು.

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.! ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  ಮಿಕ್ಸ್ ಅಂಡ್ ಮ್ಯಾಚ್ ರೌಂಡ್

  ಮಿಕ್ಸ್ ಅಂಡ್ ಮ್ಯಾಚ್ ರೌಂಡ್

  ನಿನ್ನೆ ಮತ್ತು ಮೊನ್ನೆ (ಶನಿವಾರ-ಭಾನುವಾರ) ಪ್ರಸಾರವಾದ ಸಂಚಿಕೆಗಳಲ್ಲಿ ಮಿಕ್ಸ್ ಅಂಡ್ ಮ್ಯಾಚ್ ರೌಂಡ್ ಚಾಲ್ತಿಯಲ್ಲಿತ್ತು. ಇದರಲ್ಲಿ ಆದಮ್ ಪರ್ಫಾಮೆನ್ಸ್ ಚೆನ್ನಾಗಿತ್ತು. ಆದ್ರೆ, ಪುನೀತ್ ಸಿಕ್ಕಾಪಟ್ಟೆ ಡಲ್ ಆಗಿ ಕುಣಿದರು. ಅವರ ಡ್ಯಾನ್ಸ್ ನಲ್ಲಿ ಎನರ್ಜಿ ಇರಲಿಲ್ಲ.

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  ಕಣ್ಣೀರು ಹಾಕಿದ್ದ ಪುನೀತ್

  ಕಣ್ಣೀರು ಹಾಕಿದ್ದ ಪುನೀತ್

  ಕಳೆದ ವಾರದ ಪರ್ಫಾಮೆನ್ಸ್ ನಂತರ ಆದಮ್-ಪುನೀತ್ ಡೇಂಜರ್ ಝೋನ್ ನಲ್ಲಿದ್ದರು. ಬಾಟಂ 2 ಹಂತ ತಲುಪಿದ್ದ ಆದಮ್-ಪುನೀತ್ ಗೆ ಸೆಕೆಂಡ್ ಚಾನ್ಸ್ ಸಿಕ್ತು. ಆಗ ಪುನೀತ್ ಭಾವುಕರಾದರು.

  ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!

  ಪುನೀತ್ ಗೆ ಆಗುತ್ತಿರುವ ಪ್ರಾಬ್ಲಂ ಏನು.?

  ಪುನೀತ್ ಗೆ ಆಗುತ್ತಿರುವ ಪ್ರಾಬ್ಲಂ ಏನು.?

  ಪುನೀತ್ ಕೊಟ್ಟ ಡಲ್ ಪರ್ಫಾಮೆನ್ಸ್ ಗೆ ಕಾರಣ ಏನು ಅಂತ ಕೇಳಿದಾಗ, ''ಆದಮ್ ಜೊತೆ ಡ್ಯಾನ್ಸ್ ಮಾಡಲು ಇಷ್ಟ ಆಗುತ್ತೆ. ಆದರೆ, ಪ್ರ್ಯಾಕ್ಟೀಸ್ ಮಾಡುವಾಗ ಬೈಯ್ಯುತ್ತಾರೆ. ಸ್ವಲ್ಪ ರೂಡ್ ಆಗಿ ನಡೆದುಕೊಳ್ಳುತ್ತಾರೆ. ಕೊರಿಯೋಗ್ರಾಫರ್ ''ಮ್ಯಾನೇಜ್ ಮಾಡು'' ಅಂತ ನನಗೆ ಹೇಳುತ್ತಾರೆ, ಯಾಕಂದ್ರೆ ಆದಮ್ ಸೆಲೆಬ್ರಿಟಿ, ನಾನು ಕಾಮನ್ ಮ್ಯಾನ್. ''ಪಾರ್ಟ್ನರ್ ನ ಚೇಂಜ್ ಮಾಡುವೆ'' ಅಂತ ಆದಮ್ ಹೆದರಿಸುತ್ತಾರೆ'' ಎಂದು ವೇದಿಕೆ ಮೇಲೆ ಪುನೀತ್ ಹೇಳಿದರು.

  ಆದಮ್ ಹೇಳುವುದೇನು.?

  ಆದಮ್ ಹೇಳುವುದೇನು.?

  ''ಬೇರೆ ಕೊರಿಯೋಗ್ರಫರ್ ಬಳಿ ಹೋಗಿ ಪುನೀತ್ ಫೀಡ್ ಬ್ಯಾಕ್ ಕೇಳುತ್ತಾರೆ. ಬೇರೆ ಕೊರಿಯೋಗ್ರಫರ್ ನಮಗೆ ಕಾಂಪಿಟೇಶನ್. ಹೀಗಾಗಿ, ಅವರ ಬಳಿ ಯಾಕೆ ಫೀಡ್ ಬ್ಯಾಕ್ ಕೇಳಬೇಕು.? ನಾನು ಸ್ವಲ್ಪ ಹಾರ್ಶ್ ಆಗಿ ಮಾತನಾಡುತ್ತೇನೆ ನಿಜ'' ಎಂದರು ಆದಮ್ ಪಾಶಾ.

  ಅಕುಲ್ ಹೇಳಿದ್ದೇನು.?

  ಅಕುಲ್ ಹೇಳಿದ್ದೇನು.?

  ''ಇಲ್ಲಿ ಬೈಯ್ಯುವ ಹಕ್ಕು ನಿಮಗೆ (ಆದಮ್) ಇಲ್ಲ. ಯಾಕಂದ್ರೆ ನೀವು ಇಲ್ಲಿ ಸಹ ಸ್ಪರ್ಧಿ ಅಷ್ಟೇ. ಇಲ್ಲಿ ಎಲ್ಲರೂ ಒಂದೇ. ಪಾರ್ಟ್ನರ್ ನ ಚೇಂಜ್ ಮಾಡುವ ಹಕ್ಕು ಇಲ್ಲಿ ಯಾರಿಗೂ ಇಲ್ಲ'' ಎಂದರು ಅಕುಲ್ ಬಾಲಾಜಿ.

  ರವಿಚಂದ್ರನ್ ಏನಂದರು.?

  ರವಿಚಂದ್ರನ್ ಏನಂದರು.?

  ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ರವಿಚಂದ್ರನ್, ''ಆದಮ್ ಪಾಶಾ ಚೆನ್ನಾಗಿ ಡ್ಯಾನ್ಸ್ ಮಾಡಿದರು. ಪುನೀತ್ ರಲ್ಲಿ ಎನರ್ಜಿ ಇರಲಿಲ್ಲ. ಡಲ್ ಆಗಿತ್ತು. ಕೋ-ಆರ್ಡಿನೇಷನ್ ಇರಲಿಲ್ಲ. ಇವರಿಬ್ಬರಿಗೂ ಅಂಡರ್ ಸ್ಟಾಂಡಿಂಗ್ ಇಲ್ಲ ಅಂತ ವೇದಿಕೆ ಮೇಲೆ ಗೊತ್ತಾಗುತ್ತಿದೆ. ಅದರ ಮೇಲೆ ನಾವೇನೂ ಕಾಮೆಂಟ್ ಮಾಡೋದು.?'' ಎಂದರು.

  ಕೊನೆಯ ಸ್ಥಾನದಲ್ಲಿ ಆದಮ್ ಪಾಶಾ

  ಕೊನೆಯ ಸ್ಥಾನದಲ್ಲಿ ಆದಮ್ ಪಾಶಾ

  ಡಲ್ ಪರ್ಫಾಮೆನ್ಸ್ ನಿಂದಾಗಿ ಆದಮ್ ಪಾಶಾ ಮತ್ತು ಪುನೀತ್ ನಾಯಕ್ ಕೊನೆಯ ಸ್ಥಾನ (13) ದಲ್ಲಿದ್ದಾರೆ. ಮತ್ತೆ ಡೇಂಜರ್ ಝೋನ್ ಗೆ ಆದಮ್-ಪುನೀತ್ ಬಂದಿದ್ದಾರೆ. ಈ ನಡುವೆ ಸಿಟ್ಟು ಮಾಡಿರುವ ಆದಮ್ ಶೋನಿಂದ ವಾಕ್ ಔಟ್ ಮಾಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  English summary
  Dance Partner Puneeth is upset with Adam Pasha in 'Takadhimita' Dance reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X