For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಶಿವಣ್ಣ.!

  By Harshitha
  |
  ಕಿಚ್ಚನ ಮಾತಿಗೆ D -Boss ಏನು ಹೇಳಬಹುದು | Oneindia Kannada

  ''ಸ್ಯಾಂಡಲ್ ವುಡ್ ನಲ್ಲಿ ಒಗ್ಗಟ್ಟು ಇಲ್ಲ. ಇಲ್ಲಿ ಒಬ್ಬರನ್ನ ಕಂಡ್ರೆ, ಇನ್ನೊಬ್ಬರಿಗೆ ಆಗಲ್ಲ. ಯಾರಿಗೆ ಯಾವಾಗ ಯಾರ ಮೇಲೆ ಸಿಟ್ಟು ಬರುತ್ತೋ, ಗೊತ್ತಾಗಲ್ಲ'' ಅಂತ ಗಾಂಧಿನಗರದಲ್ಲಿ ಮಾತನಾಡುವವರ ಸಂಖ್ಯೆ ಕಮ್ಮಿ ಏನಿಲ್ಲ.

  ಕನ್ನಡ ಚಿತ್ರರಂಗದಲ್ಲಿ ಇರುವ ಒಗ್ಗಟ್ಟಿನ ಬಗ್ಗೆ ಆಗಾಗ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಯಾರು ಏನೇ ಅಂದರೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತ್ರ ಅಜಾತಶತ್ರು. ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಕೊಡುವ ಶಿವಣ್ಣ, ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಗೆ ಭೇಷ್ ಎಂದಿದ್ದರು.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು. ಈ ವೇಳೆ ಕಿಚ್ಚ ಸುದೀಪ್ ರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡುವ ಸಂದರ್ಭದಲ್ಲಿ ''ಹ್ಯಾಟ್ಸ್ ಆಫ್ ಟು ಯು ಸುದೀಪ್'' ಅಂತ ಶಿವಣ್ಣ ಹೇಳಿದರು.

  ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?

  ''ಎಲ್ಲ ಭಾಷೆಗಳಲ್ಲೂ ಸುದೀಪ್ ನಟಿಸುತ್ತಿದ್ದಾರೆ. ಈಗ ಹಾಲಿವುಡ್ ಸಿನಿಮಾದಲ್ಲೂ ಸುದೀಪ್ ಅಭಿನಯಿಸುತ್ತಿದ್ದಾರೆ. ಎಷ್ಟು ಖುಷಿ ಆಗುತ್ತೆ ಅಂದ್ರೆ, ನಮ್ಮ ಕನ್ನಡದ ನಟ ಹಾಲಿವುಡ್ ಸಿನಿಮಾ ಮಾಡ್ತಿದ್ದಾರೆ. ಹ್ಯಾಟ್ಸ್ ಆಫ್ ಟು ಯು ಸುದೀಪ್. ಕರ್ನಾಟಕದಲ್ಲಿ ಇಂತಹ ಆಕ್ಟರ್ ಇರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು'' ಎಂದರು ಶಿವರಾಜ್ ಕುಮಾರ್.

  'ಕಲಿ' ಚಿತ್ರ ನಿಂತು ಹೋಗಿದ್ಯಾಕೆ.? ಕಡೆಗೂ ಸತ್ಯ ಬಾಯ್ಬಿಟ್ಟ ಕಿಚ್ಚ ಸುದೀಪ್.!'ಕಲಿ' ಚಿತ್ರ ನಿಂತು ಹೋಗಿದ್ಯಾಕೆ.? ಕಡೆಗೂ ಸತ್ಯ ಬಾಯ್ಬಿಟ್ಟ ಕಿಚ್ಚ ಸುದೀಪ್.!

  ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ ಹಾಗೂ ಕ್ರಿಕೆಟ್... ಎಲ್ಲದರಲ್ಲೂ ಸುದೀಪ್ ಎತ್ತಿದ ಕೈ. ಇಂತಿಪ್ಪ ಸುದೀಪ್ ಬಗ್ಗೆ ಸ್ವತಃ ಸ್ಟಾರ್ ಆಗಿ, ಹೆಮ್ಮೆಯ ಮಾತುಗಳನ್ನಾಡಿರುವ ಶಿವಣ್ಣ ರವರ ನಡೆ ಮೆಚ್ಚಲೇಬೇಕು.

  English summary
  Kannada Actor Shiva Rajkumar lauds Kiccha Sudeep in 'No.1 Yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X