Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shrirasthu Shubhamasthu : ಹೊಸ ಜೋಡಿ ಸಮರ್ಥ್-ಸಿರಿ ಮೇಲೆ ಶಿಸ್ತು ಹೇರಿದ ದತ್ತ! ಪಾಲಿಸ್ತಾನಾ ಸಮರ್ಥ್?
ದತ್ತನ ಅತಿಯಾದ ಪ್ರೀತಿ ಸಮರ್ಥ್ ಗೆ ಕಿರಿ ಕಿರಿ ನೀಡುತ್ತಿದೆ. ಮದುವೆ ಆಗಿದ್ದಾಕ್ಕಾಗಿ ಗೆಳೆಯರು ಎಲ್ಲರೂ ಕೂಡಿಕೊಂಡು ಪಾರ್ಟಿ ಇಟ್ಟುಕೊಂಡಿದ್ದರು ಆ ಪಾರ್ಟಿಗೆ ಸಮರ್ಥ್ ಹಾಗೂ ಸಿರಿ ಹೋಗಿ ಎಂಜಾಯ್ ಮಾಡಿಕೊಂಡು ರಾತ್ರಿ ಅಲ್ಲೇ ಉಳಿಯುವ ಪ್ಲಾನ್ ಮಾಡಿದ್ದರು ಆದರೆ ದತ್ತ ಮಾತ್ರ ಇನ್ನೂ ಯಾಕೆ ಸಮರ್ಥ್ ಹಾಗೂ ಸಿರಿ ಮನೆಗೆ ಬಂದಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಬಳಿಕ ತುಳಸಿ ಬಳಿ ಕೇಳುತ್ತಾರೆ ದತ್ತ. ಯಾಕೆ ಇನ್ನೂ ಮನೆಗೆ ಬಂದಿಲ್ಲ, ಎಲ್ಲಿಗೆ ಹೋಗಿದ್ದಾರೆ ಎಂದು. ಇದನ್ನು ಕೇಳಿದ ತುಳಸಿ ಅವರಿಬ್ಬರೂ ಪಾರ್ಟಿಗೆ ಹೋಗಿರುವ ವಿಚಾರವನ್ನು ದತ್ತ ಮುಂದೆ ಹೇಳಿದಾಗ ದತ್ತ ಕೆಂಡಾಮಂಡಲ ಆಗುತ್ತಾರೆ.
ಇನ್ನು ಸಮರ್ಥ್‌ಗೆ ಕರೆ ಮಾಡಿದ ದತ್ತ ಅವನ ಮಾತು ಕೇಳಿಸಿಕೊಳ್ಳದೆ ಸರಿಯಾಗಿ ಬೈಯುತ್ತಾರೆ. ಅತ್ತ ಕಡೆಯಿಂದ ದತ್ತನ ಧ್ವನಿ ಕೇಳಿದ ಹಾಗೆಯೇ ಬೈಗುಳ ನಿಲ್ಲಿಸಿ ಭಯ ಪಡುತ್ತಾನೆ. ಈ ವೇಳೆ ದತ್ತ ಎಲ್ಲಿದಿರಿ ನೀವಿಬ್ಬರೂ ಎಂದು ಕೇಳಿದಾಗ ಪಾರ್ಟಿಯಲ್ಲಿ ನಾವಿಬ್ಬರೂ ಇದ್ದೇವೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ದತ್ತ ಈಗಲೇ ಮನೆಗೆ ಬರಬೇಕು ಏನೂ ನೆಪ ಹೇಳುವುದು ಬೇಡ ಎಂದು ಖಡಕ್ ಆಗಿ ವಾರ್ನಿಂಗ್ ಮಾಡುತ್ತಾನೆ. ಅಲ್ಲಿಂದ ಸಿರಿ ಹಾಗೂ ಸಮರ್ಥ್ ಮನೆಗೆ ಬಂದಾಗ ದತ್ತ ಮಲಗಿರುವುದಿಲ್ಲ.
ತಾತಾ ಎಂದು ಸಮರ್ಥ್ ದತ್ತನ ಕರೆದಾಗ ಕೋಪದಿಂದ ದತ್ತ ಹೇಳುತ್ತಾರೆ ನೀನು ನನ್ನ ಕೈ ಕಾಲು ಮುರಿದು ತೋರಣ ಕಟ್ಟೋ ಹಂತಕ್ಕೆ ಬಂದಿದ್ದೀಯಾ ಎಂದಾಗ ಸಮರ್ಥ್ ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾನೆ. ಬಳಿಕ, ನಾನು ಬೇರೆ ಯಾರನ್ನೋ ಅಂದುಕೊಂಡು ಹಾಗೆ ಹೇಳಿದೆ ಎಂದು ಹೇಳುತ್ತಾನೆ. ಆಗ ದತ್ತ, ಈ ವಿಚಾರ ಇನ್ನೊಂದು ದಿನ ಮಾತನಾಡೋಣ ಈಗ ನಿಮ್ಮನ್ನು ಇಷ್ಟು ಬೇಗ ಬರ ಹೇಳಿದ್ದು ಯಾಕೆ ಎಂದು ಗೊತ್ತಾಯಿತು ತಾನೇ? ಕಾಲ ಸರಿಯಾಗಿಲ್ಲ. ನವ ದಂಪತಿಗಳು ಪಾರ್ಟಿ ಮಾಡುವಾಗ ಸುದ್ದಿ ಬಂತು ಅದಕ್ಕೆ ನಿಮ್ಮನ್ನು ಕರೆಯಿಸಿಕೊಂಡೆ ಎಂದು ಹೇಳುತ್ತಾರೆ.

ಸಮರ್ಥ್ ಸಮಜಾಯಿಷಿ ಒಪ್ಪದ ತಾತ
ಇದನ್ನು ಕೇಳಿದ ಸಮರ್ಥ್ ಹಾಗೆಲ್ಲ ಏನು ಇಲ್ಲ, ನೀವು ಅದರ ಬಗ್ಗೆ ಯೋಚನೆ ಮಾಡಬೇಡಿ ಏನೂ ಆಗಲ್ಲ ಎಂದು ಹೇಳುತ್ತಾರೆ. ಅದಕ್ಕೆ ದತ್ತ, ನಾನು ಇರುವುದು ಯಾರನ್ನು ನಂಬೋಕಾಗದ ಕಲಿಗಾಲದಲ್ಲಿ. ಇನ್ನು ಮೇಲೆ ನೀವು ಇಬ್ಬರು ಸಂಜೆ ಆಗುವುದರ ಒಳಗೆ ಮನೆಗೆ ಬಂದು ಬಿಡಬೇಕು. ಹೀಗೆ ಹೇಳದೆ ಕೇಳದೇ ರಾತ್ರಿ ಎಲ್ಲ ಮನೆಯಿಂದ ಹೊರಗೆ ಹೋಗುವ ಹಾಗೆ ಇಲ್ಲ. ಹೋದರೆ ನಾನು ಸುಮ್ಮನೆ ಇರುವುದು ಇಲ್ಲ. ಇದು ಬರೀ ಮಾತು ಅಲ್ಲ ದತ್ತನ ಶಾಸನ ಎಂದು ಹೇಳುತ್ತಾನೆ. ಬಳಿಕ ಅಲ್ಲಿಂದ ತೆರಳುತ್ತಾನೆ.

ಪೂರ್ಣಿಮಾ ಹಠಕ್ಕೆ ಸೋತ ಗಂಡ
ಇನ್ನು ಮಾಧವನ ಸೊಸೆ ಪೂರ್ಣಿಮಾ, ಹಠ ಹಿಡಿದ ಕಾರಣ ಮಾಧವನ ಮಗ ಪೂರ್ಣಿಮಾ ಬಳಿ ಹೇಳಿ ಅಪ್ಪನನ್ನು ಕರೆಯಿಸಿ ಕೊಳ್ಳುತ್ತಾನೆ ತನ್ನ ಹೆಂಡತಿ ಗರ್ಭಿಣಿ ಆಕೆ ಊಟ ಮಾಡದೇ ಹೋದರೆ ಎಂಬ ಭಯಕ್ಕೆ ಕೂಡ. ಇನ್ನು ಮರೆಯಲ್ಲಿ ಸೊಸೆ, ಮಾವ ಊಟ ಮಾಡುತ್ತಾ ಇರುವುದನ್ನು ನೋಡಿದ ಮಗ ಮನದಲ್ಲಿ ಯೋಚನೆ ಮಾಡುತ್ತಾನೆ. ಒಂದು ಕಡೆ ನಾನು ತುಂಬಾ ದ್ವೇಷ ಮಾಡುವ ಅಪ್ಪ ಒಂದು ಕಡೆ ನಾನು ತುಂಬಾ ಪ್ರೀತಿ ಮಾಡುವ ಹೆಂಡತಿ ಹೇಗೆ ಇವರಿಬ್ಬರನ್ನು ಹೇಗೆ ದೂರಮಾಡಲಿ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ದತ್ತನ ಅವಸ್ಥೆ ಕಂಡು ತುಳಸಿ-ಸಿರಿಗೆ ನಗು
ಇನ್ನು ದತ್ತ ಮನೆಯಲ್ಲಿ ಎಲ್ಲಾ ಮಲಗಿದ ಮೇಲೆ ಅಡುಗೆ ರೂಮ್ ಗೆ ಬಂದು ಮಾಧವ, ತುಳಸಿಗಾಗಿ ಕಳುಹಿಸಿದ್ದ ತಿಂಡಿಯನ್ನು ದತ್ತ ನೋಡಿ ಅದನ್ನು ಚಪ್ಪರಿಸುವ ಹಾಗೆ ತಿನ್ನುತ್ತಾ ಇರುತ್ತಾರೆ. ಇದನ್ನು ನೋಡಿದ ತುಳಸಿ ಹಾಗೂ ಸಿರಿ ಜೋರಾಗಿ ನಗುತ್ತಾರೆ. ಹಿಂದಿರುಗಿ ದತ್ತ ನೋಡಬೇಕಾದರೆ ಅವರಿಬ್ಬರೂ ನೋಡುತ್ತಾ ಇರುವುದನ್ನು ನೋಡಿ ತಿಂಡಿ ಪೊಟ್ಟಣ ಕೆಳಗೆ ಬಿದ್ದಿತ್ತು ಮೇಲೆ ಇಡೋಣ ಅಂದುಕೊಂಡು ಇದ್ದೆ ಎನ್ನುತ್ತಾರೆ. ಬಳಿಕ ಸಿರಿ ತಾತನನ್ನು ನೋಡಿ ಮುಖದ ಬಳಿ ಕೈ ತೋರಿಸುತ್ತಾಳೆ ಇದನ್ನು ನೋಡಿದ ದತ್ತ ಮುಖವನ್ನು ಒರೆಸಿಕೊಳ್ಳುತ್ತಾ ಇವತ್ತು ಬಹಳ ಧೂಳು ಇದೆ. ಇವಳಿಗೆ ಮನೆ ಕ್ಲೀನ್ ಮಾಡಲು ಸಾಧ್ಯ ಆಗಲಿಲ್ಲ. ಏನು ಮನೆ ಕ್ಲೀನ್ ಮಾಡುತ್ತಾಳೆ ಏನೋ ಎಂದು ಹೇಳಿ ರೂಮಿನ ಬಳಿ ಹೋಗುತ್ತಾರೆ.

ತಾತನಿಗೆ ಸೇವೆ ಮಾಡಿದ ಸಿರಿ
ಇದನ್ನು ನೋಡಿದ ಸಿರಿ ಹಾಗೂ ತುಳಸಿ ನಗುತ್ತಾರೆ. ತುಳಸಿ ಮಲಗಲು ಅನುವಾಗುತ್ತಾಳೆ. ಆಕೆ ಹೊರಗೆ ಮಂಚದಲ್ಲಿ ಮಲಗುತ್ತಾಳೆ. ಇದನ್ನು ನೋಡಿದ ಸಿರಿ ಆಕೆಯ ಗಂಡನಿಗೆ ಈ ವಿಚಾರ ತಿಳಿಸುತ್ತಾಳೆ. ನಾವು ಕೆಳಗೆ ಹೋಗಿ ಮಲಗೋಣ ಅಮ್ಮನನ್ನು ಬೆಡ್ ಮೇಲೆ ಮಲಗಿಸಿ ಬಿಡೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಮರ್ಥ್ ಎದ್ದು ಅಮ್ಮನ ಬಳಿ ಬಂದು ರೂಮ್‌ನಲ್ಲಿ ಮಲಗುವಂತೆ ಹೇಳುತ್ತಾನೆ. ತುಳಸಿ ರೂಮ್ ಹೆ ಮಲಗಲು ಹೋದ ಮೇಲೆ ಸಿರಿ ಹಾಗೂ ಸಮರ್ಥ್ ಇನ್ನೇನು ತಬ್ಬಿಕೊಳ್ಳಬೇಕು ಎನ್ನುವಷ್ಟ್ರರಲ್ಲಿ ತಾತಾ, ತುಳಸಿ-ತುಳಸಿ ಎಂದು ಹತ್ತು ಬಾರಿ ಕರೆಯುತ್ತಾರೆ. ಆದರೆ ತಾತನಿಗೆ ಏನು ಬೇಕು ಅದನ್ನು ಸಿರಿಯೆ ಕೊಡುತ್ತಾ ಇದ್ದಳು. ಇದನ್ನೆಲ್ಲ ನೋಡಿದ ಸಮರ್ಥ್ ನೀನು ನನ್ನ ಆರೈಕೆ ಮಾಡದೇ ಬೇರೆಯವರ ಎಲ್ಲರ ಆರೈಕೆ ಮಾಡುತ್ತೀಯಾ ಎಂದು ಹೇಳಿ ಮಲಗುತ್ತಾನೆ.