»   » 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಲ್ಲಿ ಪಂಚಭಾಷಾ ತಾರೆ

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಲ್ಲಿ ಪಂಚಭಾಷಾ ತಾರೆ

Posted By:
Subscribe to Filmibeat Kannada

ಕನ್ನಡಿಗರ ಹೆಮ್ಮೆಯ ಮತ್ತು ನೆಚ್ಚಿನ ಕಿರುತೆರೆ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್'. ಕನ್ನಡನಾಡಿನ ಅಸಮಾನ್ಯ ಪ್ರತಿಭಾವಂತರನ್ನು 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ಕೂರಿಸಿ.. ಅವರ ಸಾಧನೆಯನ್ನು ಅನಾವರಣ ಮಾಡುವ ಈ ಕಾರ್ಯಕ್ರಮವನ್ನು ಕನ್ನಡನಾಡಿನ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುತ್ತಾರೆ.['ವೀಕೆಂಡ್ ವಿತ್ ರಮೇಶ್' ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತುಗಳು]

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ಆರಂಭವಾದಾಗಿನಿಂದಲೂ ಕನ್ನಡಿಗರು ಸಿನಿಮಾ ತಾರೆಗಳನ್ನು ಹೊರತುಪಡಿಸಿ ಇತರೆ ಕ್ಷೇತ್ರದ ಸಾಧಕರನ್ನು ನೋಡಬೇಕು ಎಂದು ಬಯಸಿದ್ದರು. ಜನರ ಕನವರಿಕೆಯಂತೆ ಈಗ ಅನಿಲ್ ಕುಂಬ್ಳೆ ರವರು ರಮೇಶ್ ಅರವಿಂದ್ ಜೊತೆ ವೀಕೆಂಡ್ ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದ್ದು, ರಾಹುಲ್ ದ್ರಾವಿಡ್ ರವರು ಬರುವುದು ಕನ್ಫರ್ಮ್ ಆಗಬೇಕಿದೆ.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!]

Multi language Actress Priyamani participating in 'Weekend With Ramesh-3'.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ಕೂರುವವರ ಪಟ್ಟಿಯನ್ನು ನಾವೇ ನಿಮಗೆ ನೀಡಿದ್ವಿ. ಆದರೆ ಈಗ ಈ ಪಟ್ಟಿಗೆ ಸಾಧಕರ ಹೊಸ ಹೆಸರೊಂದು ಸೇರ್ಪಡೆ ಆಗಿದೆ. ಸಾಧಕರ ಸೀಟಿನಲ್ಲಿ ಭಾರತಿ ವಿಷ್ಣುವರ್ಧನ್ ಅವರ ನಂತರ ಬಹುಭಾಷಾ ನಟಿ ಪ್ರಿಯಾಮಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.['ವೀಕೆಂಡ್'ನಲ್ಲಿ ಸಾಧಕರ ಸೀಟ್ ಮೇಲೆ ಕೂರಲು ದ್ರಾವಿಡ್, ಕುಂಬ್ಳೆ ಒಪ್ಪಿಕೊಂಡ್ರಾ.?]

ಹೌದು, ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಮತ್ತು ಪಂಚಭಾಷಾ ತಾರೆ ಪ್ರಿಯಾಮಣಿ ರವರು ಸಾಧಕರ ಸೀಟ್ ಮೇಲೆ ಕೂರಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಅಂಗಳದಲ್ಲಿಯೂ ಸಿನಿ ಪ್ರಿಯರ ಮನಗೆದ್ದ ಪ್ರಿಯಾಮಣಿ ಜೀವನ ಚರಿತ್ರೆ, ಸಿನಿಮಾ ರಂಗದಲ್ಲಿ ಪಂಚಭಾಷಾ ನಟಿ ಆಗಿ ಗುರುತಿಸಿಕೊಂಡ ಶ್ರಮದ ಬದುಕು ಅನಾವರಣಗೊಳ್ಳಲಿದೆ.

English summary
Multi language Actress Priyamani participating in 'Weekend With Ramesh-3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada