»   » ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ

ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ

Posted By:
Subscribe to Filmibeat Kannada

ಬಾಲ್ಯದಿಂದಲೂ ವಿಜಯ್ ರಾಘವೇಂದ್ರ ರವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಕ್ಲೋಸ್. ಅಪ್ಪು ಜೊತೆ ಸದಾ ಇರುತ್ತಿದ್ದ ವಿಜಯ್ ರಾಘವೇಂದ್ರ, ಒಟ್ಟಿಗೆ ಫುಟ್ ಬಾಲ್ ಆಡಿದ್ದಾರೆ.. ಸೈಕಲ್ ಓಡಿಸಿದ್ದಾರೆ. ಇನ್ ಫ್ಯಾಕ್ಟ್ ವಿಜಯ್ ರಾಘವೇಂದ್ರ ರವರಿಗೆ ಅದನ್ನೆಲ್ಲ ಕಲಿಸಿದ್ದೇ ಅಪ್ಪು. ಇಂದು ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಪ್ರಖ್ಯಾತ ನಟರಾಗಿ ಬೆಳೆದಿದ್ದಾರೆ.

ಒಳ್ಳೆತನ ಹಾಗೂ ಸೌಮ್ಯ ಸ್ವಭಾವದಿಂದ ಜನರ ಮನಸ್ಸಿಗೆ ಹತ್ತಿರವಾಗಿರುವ ವಿಜಯ್ ರಾಘವೇಂದ್ರ ಬಗ್ಗೆ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಹೇಳುವುದು ಹೀಗೆ...

ನಾವಿಬ್ಬರೂ ಕ್ಲೋಸ್ ಫ್ರೆಂಡ್ಸ್

''ಚಿಕ್ಕವಯಸ್ಸಿಂದಲೂ ನಾನು ವಿಜಯ್ ರಾಘವೇಂದ್ರ ರವರನ್ನ ನೋಡಿಕೊಂಡು ಬಂದಿದ್ದೇನೆ. ನಾನು ಮತ್ತು ವಿಜಯ್ ರಾಘವೇಂದ್ರ ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ಸ್. ನಾವು ಒಟ್ಟಿಗೆ ತುಂಬಾ ಕಾಲ ಕಳೆದಿದ್ದೇವೆ. ಎಂಟು-ಒಂಬತ್ತು ವರ್ಷ ಶಬರಿಮಲೈಗೆ ಒಟ್ಟಿಗೆ ಹೋಗಿದ್ದೇವೆ. ಎಷ್ಟೊಂದು ಫುಟ್ ಬಾಲ್ ಮ್ಯಾಚ್ ಆಡಿದ್ದೇವೆ. ಎಷ್ಟೋ ಹೋಟೆಲ್ ಗೆ ಹೋಗಿ ತಿಂದಿದ್ದೇವೆ. ನಮ್ಮ ಅನುಭವ ಶೇರ್ ಮಾಡುತ್ತಾ ಹೋದರೆ, ಸಿಕ್ಕಾಪಟ್ಟೆ ಮಾತನಾಡಬೇಕಾಗುತ್ತದೆ'' - ಪುನೀತ್ ರಾಜ್ ಕುಮಾರ್, ನಟ [ಬಾವ ಡಾ.ರಾಜ್ ನೆನೆದು ಕಣ್ಣೀರಿಟ್ಟ ಬಾಮೈದ ಚಿನ್ನೇಗೌಡ್ರು]

ತುಂಬಾ ಕ್ಯೂಟ್ ಹುಡುಗ

''ವಿಜಯ್ ರಾಘವೇಂದ್ರ ತುಂಬಾ ಮುದ್ದಾಗಿದ್ದ. ನಾನು ಪಾನ್ ಹಾಕಿಕೊಳ್ಳುವಾಗ ವಿಜಯ್ ರಾಘವೇಂದ್ರ ಮೂಗು ಕಚ್ಚಿ, ಕೆಂಪಗೆ ಮಾಡುತ್ತಿದೆ. ಜೋಕರ್ ತರಹ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದ'' - ಶಿವರಾಜ್ ಕುಮಾರ್, ನಟ [ನಟ ವಿಜಯ್ ರಾಘವೇಂದ್ರ ಮಾಡಿರುವ ಸಾಧನೆ ಏನು.?]

ಸ್ಪೈಡರ್ ಮ್ಯಾನ್ ಇದ್ಹಂಗೆ

''ವಿಜಯ್ ರಾಘವೇಂದ್ರ ಒಂಥರಾ ಸ್ಪೈಡರ್ ಮ್ಯಾನ್ ಇದ್ಹಂಗೆ. ನಾವೆಲ್ಲ ಒಟ್ಟಿಗೆ ಆಟಾಡುವಾಗ, ಸ್ವಲ್ಪ ಗೋಡೆ ಹತ್ತಿಸಿದ್ರೆ ಸಾಕು ಮೇಲೆ ಹೋಗ್ಬಿಡ್ತಿದ್ದ. ಅವಾಗ್ಲಿಂದ ವಿಜಯ್ ರಾಘವೇಂದ್ರ ತುಂಬಾ ಆಕ್ಟೀವ್. 'ಪರಶುರಾಮ್' ಸಿನಿಮಾದಲ್ಲಿ ನಾನು ವಿಜಯ್ ರಾಘವೇಂದ್ರ ಒಟ್ಟಿಗೆ ಡ್ಯಾನ್ಸ್ ಮಾಡಿದ್ದೇವೆ'' - ಪುನೀತ್ ರಾಜ್ ಕುಮಾರ್, ನಟ [ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?]

ಶಿವಣ್ಣನಿಗೆ ಆಶ್ಚರ್ಯ

''ಅಪ್ಪು ಜೊತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಿಜಯ್ ರಾಘವೇಂದ್ರ. ಆಗಲೇ ಈ ಹುಡುಗನಿಗೆ ಏನ್ ಟ್ಯಾಲೆಂಟ್ ಇದೆ ಅಂದ್ಕೊಳ್ತಿದ್ವಿ ನಾವು'' - ಶಿವರಾಜ್ ಕುಮಾರ್, ನಟ

ಅಪ್ಪುಗೆ ತುಂಬಾ ಖುಷಿ ಕೊಟ್ಟಿದ್ದು

''ಬಾಲನಟನಾಗಿ ನನ್ನ ಫೇವರಿಟ್ ಫಿಲ್ಮ್ ಅಂದ್ರೆ ಖಂಡಿತ 'ಚಿನ್ನಾರಿ ಮುತ್ತ'. ಅದರಲ್ಲಿ ಅವನಿಗೆ ರಾಜ್ಯ ಪ್ರಶಸ್ತಿ ಬಂತು. 'ಕೊಟ್ರೇಶಿ ಕನಸು' ಸಿನಿಮಾಗಾಗಿ ವಿಜಯ್ ರಾಘವೇಂದ್ರಗೆ ನ್ಯಾಷನಲ್ ಅವಾರ್ಡ್ ಬಂತು. ನನಗೆ ಅದು ತುಂಬಾ ಖುಷಿ ಕೊಡ್ತು'' - ಪುನೀತ್ ರಾಜ್ ಕುಮಾರ್, ನಟ

ನನಗಿಂತ ಅದ್ಭುತ ಡ್ಯಾನ್ಸರ್

''ವಿಜಯ್ ರಾಘವೇಂದ್ರ ಅದ್ಭುತ ಹಾಡುಗಾರ ಕೂಡ. ನನ್ನ ಕೇಳಿದರೆ, ನನಗಿಂತ ವಿಜಯ್ ರಾಘವೇಂದ್ರ ಅದ್ಭುತ ಡ್ಯಾನ್ಸರ್'' - ಪುನೀತ್ ರಾಜ್ ಕುಮಾರ್, ನಟ

ಬಂಡಲ್ ಆಫ್ ಟ್ಯಾಲೆಂಟ್

''ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ 'ಜಗ ಮೆಚ್ಚಿದ ಮಗ' ಸಿನಿಮಾದಲ್ಲಿ ನನ್ನ ಪಾತ್ರದ ಚಿಕ್ಕವಯಸ್ಸಿನ ಕ್ಯಾರೆಕ್ಟರ್ ಪ್ಲೇ ಮಾಡಿದ್ದಾನೆ. 'ರಿಷಿ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಆಕ್ಟ್ ಮಾಡಿದ್ದೇವೆ. ನಂತರ 'ಶ್ರೀಕಂಠ'... ಈಗ 'ಲೀಡರ್'. ತುಂಬಾ ಖುಷಿ ಆಗುತ್ತೆ ವಿಜಯ್ ರಾಘವೇಂದ್ರ ಜೊತೆ ವರ್ಕ್ ಮಾಡೋಕೆ. ವಿಜಯ್ ರಾಘವೇಂದ್ರ ಈಸ್ ಬಂಡಲ್ ಆಫ್ ಟ್ಯಾಲೆಂಟ್'' - ಶಿವರಾಜ್ ಕುಮಾರ್, ನಟ

ಶಿವಣ್ಣನ ಆಸೆ

''ನನಗೆ ಅಪ್ಪು ಹೇಗೋ.. ಹಾಗೇ ವಿಜಯ್ ರಾಘವೇಂದ್ರ ಕೂಡ. ವಿಜಯ್ ರಾಘವೇಂದ್ರ ಚೆನ್ನಾಗಿ ಬೆಳೆಯಬೇಕು. ಟಾಪ್ ಲೆವೆಲ್ ಗೆ ಹೋಗಬೇಕು ಅನ್ನೋದೇ ನನ್ನ ಆಸೆ'' - ಶಿವರಾಜ್ ಕುಮಾರ್, ನಟ

ನನಗೆ ಎಲ್ಲವನ್ನ ಕಲಿಸಿಕೊಟ್ಟಿದ್ದೇ ಅಪ್ಪು

''ಇದು ನನಗೆ ಬಹಳ ದೊಡ್ಡದು. ನನ್ನ ಬಾಲ್ಯವನ್ನ ನಾನು ಅಪ್ಪು ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ. ನನಗೆ ಸೈಕಲ್ ಓಡಿಸಲು, ಫುಟ್ ಬಾಲ್ ಆಡಲು ಕಲಿಸಿದ್ದೇ ಅವರು'' - ವಿಜಯ್ ರಾಘವೇಂದ್ರ, ನಟ

ಶಿವಣ್ಣನಿಗೆ ಹೊಡೆಯಬೇಕಿತ್ತು.!

''ರಿಷಿ' ಸಿನಿಮಾದಲ್ಲಿ ಶಿವಣ್ಣ ಬಿಟ್ಟರೆ, ಇನ್ಯಾರೂ ಆ ಪಾತ್ರ ಮಾಡಲು ಆಗುತ್ತಿರಲಿಲ್ಲ. ಅವರಿಗೆ ನಾನು ಹೊಡೆಯುವ ಸೀನ್ ಒಂದಿತ್ತು. ನಾನು ಅವರಿಗೆ ಹೊಡೆಯಲ್ಲ ಅಂತ ಕೂತಿದ್ದೆ. ಅವರು ಬಂದು ''ಹೊಡೆಯುತ್ತಿದ್ದೇನೆ ಅಂತ ಯಾಕೆ ಅಂದುಕೊಳ್ತೀಯಾ.? ಆಕ್ಟ್ ಮಾಡುತ್ತಿದ್ದೇನೆ ಎಂದುಕೋ'' ಎಂದು ತುಂಬಾ ಸಪೋರ್ಟ್ ಮಾಡಿದರು'' - ವಿಜಯ್ ರಾಘವೇಂದ್ರ, ನಟ

ದೊಡ್ಡ ಅತ್ತೆ-ದೊಡ್ಡ ಮಾಮ ಕಾರಣ

''ಇವತ್ತು ನಾವು ಏನೇ ಆಗಿದ್ದರೂ, ಅದಕ್ಕೆ ಕಾರಣ ನನ್ನ ದೊಡ್ಡ ಅತ್ತೆ (ಪಾರ್ವತಮ್ಮ ರಾಜ್ ಕುಮಾರ್) ಹಾಗೂ ದೊಡ್ಡ ಮಾಮ (ಡಾ.ರಾಜ್ ಕುಮಾರ್). ಅವರ ಮೇಲೆ ನನ್ನ ಅಭಿಮಾನ, ಪ್ರೀತಿ ಯಾವತ್ತಿಗೂ ಇರುತ್ತದೆ'' - ವಿಜಯ್ ರಾಘವೇಂದ್ರ, ನಟ

English summary
Power Star Puneeth Rajkumar and Century Star Shiva Rajkumar spoke about Vijay Raghavendra in Zee Kannada Channel's popular show 'Weekend with Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada