»   » 3 ದಿನದಲ್ಲಿ 3 ಬಾಕ್ಸ್‌ ಆಫೀಸ್ ರೆಕಾರ್ಡ್‌ ಬ್ರೇಕ್‌ ಮಾಡಿದೆ 'ದಂಗಲ್'

3 ದಿನದಲ್ಲಿ 3 ಬಾಕ್ಸ್‌ ಆಫೀಸ್ ರೆಕಾರ್ಡ್‌ ಬ್ರೇಕ್‌ ಮಾಡಿದೆ 'ದಂಗಲ್'

Posted By:
Subscribe to Filmibeat Kannada

ಅಮೀರ್ ಖಾನ್‌ ಅಭಿನಯದ 'ದಂಗಲ್' ಸಿನಿಮಾ ಸುಲ್ತಾನ್‌ ನಂತರದಲ್ಲಿ ಭಾರತೀಯ ಸಿನಿಮಾಗಳಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾ. ಮಿಸ್ಟರ್ ಪರ್ಫೆಕ್ಟ್‌ ಅಭಿಮಾನಿಗಳು ಈಗಾಗಲೇ 'ದಂಗಲ್' ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ನೀಡಿರುವುದು ಗೊತ್ತೇ ಇದೆ. ವಿಶೇಷ ಅಂದ್ರೆ ಸಿನಿಮಾ ಬಿಡುಗಡೆಗೂ ಮುನ್ನ ಅಮೀರ್ ಸಿಕ್ಕಾಪಟ್ಟೆ ನರ್ವಸ್ ಆಗಿದ್ರಂತೆ.[ದಂಗಲ್ ಪೈರಸಿ ಭಾರತದಿಂದ ಪಾಕಿಸ್ತಾನಕ್ಕೆ ವಯಾ ದುಬೈ!]

ಈಗ ಬಿಡಿ ಅಮೀರ್‌ ಖಾನ್ ಗೆ ಆ ಚಿಂತೆಯೇ ಇಲ್ಲ. ಸಿನಿಮಾದಲ್ಲೂ ಉತ್ತಮ ಅಂಶ ಇರುವುದರಿಂದ ಭಾರತೀಯ ಸಿನಿಮಾಗಳ ಪೈಕಿಯಲ್ಲೂ ಬ್ಲಾಕ್‌ ಬಾಸ್ಟರ್ ಸಿನಿಮಾ ಎಂದು ಗುರುತಿಸಿಕೊಂಡಿದ್ದಾಗಿದೆ. ಅಲ್ಲದೇ ಸಲ್ಮಾನ್‌ ಖಾನ್‌ ಸಿನಿಮಾ ಸೇರಿದಂತೆ 3 ಬಾಕ್ಸ್‌ ಆಫೀಸ್ ರೆಕಾರ್ಡ್‌ ಗಳನ್ನು ಅಮೀರ್ ಖಾನ್ 'ದಂಗಲ್' ಸಿನಿಮಾ ಬ್ರೇಕ್ ಮಾಡಿದೆ. ಉಸಿರು ಬಿಗಿಯಾಗಿ ಇಟ್ಟುಕೊಂಡು ದಂಗಲ್ ಬ್ರೇಕ್ ಮಾಡಿದ ಬಾಕ್ಸ್‌ ಆಫೀಸ್ ರೆಕಾರ್ಡ್‌ ಗಳು ಯಾವುವು ಇಲ್ಲಿ ನೋಡಿ.['ದಂಗಲ್' ಕಲೆಕ್ಷನ್ ಫಸ್ಟ್‌ ಡೇ ಇಷ್ಟಾದ್ರೆ..ವಾರದಲ್ಲಿ 100 ಕೋಟಿ]

ಮೊಟ್ಟ ಮೊದಲ ಬಾರಿಗೆ ಬಿಗ್‌ ಓಪೆನಿಂಗ್

ಸುಲ್ತಾನ್ ರಿಲೀಸ್ ಆಗಿದ್ದು ಬುಧವಾರ. ದಂಗಲ್ ಸಿನಿಮಾ ಶುಕ್ರವಾರ ಬಿಡುಗಡೆ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯ ಬಿಗ್ಗೆಷ್ಟು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಧ್ಯ ಪೂರ್ವದ ತರಣ್ ಆದರ್ಶ ಎಂಬುವವರು ಟ್ವೀಟ್‌ ಮಾಡಿರುವ ಪ್ರಕಾರ AED 3.5 ಮಿಲಿಯನ್ ಗಳಿಸಿದೆ. ಅಮೆರಿಕದ 12 ಥಿಯೇಟರ್‌ಗಳಲ್ಲಿ ತೆರೆಕಾಣುವ ಮೂಲಕ ಇದೇ ಮೊದಲ ಬಾರಿಗೆ ಬಿಗ್ಗೆಷ್ಟ್ ಓಪನಿಂಗ್ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು 1.7 ದಶಲಕ್ಷ ಡಾಲರ್ ಗಳಿಸಿದೆ. ಬ್ರಿಟನ್, ಆಸ್ಟ್ರೇಲಿಯಾ ಗಳಲ್ಲಿಯೂ ಉತ್ತಮ ರೆಸ್ಪಾನ್ಸ್ ಪಡೆದಿದೆ.['ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್]

ಮೂರು ದಿನಕ್ಕೆ 100 ಕೋಟಿ ಬಾಚಿದೆ ದಂಗಲ್

ಕ್ರಿಸ್‌ ಮಸ್‌ ಗೂ ಮುನ್ನ ಶುಕ್ರವಾರ ಬಿಡುಗಡೆಯಾದ ದಂಗಲ್‌ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ ಗೆ ರೂ.29.78 ಕೋಟಿ ತುಂಬಿಸಿಕೊಟ್ಟಿತು. ಉಳಿದಂತೆ ಶನಿವಾರ ರೂ.34.83 ಕೋಟಿ ಮತ್ತು ಭಾನುವಾರ ರೂ.42.35 ಕೋಟಿ ಗಳಿಸಿದೆ. ಅಂತೂ ದಂಗಲ್ ಮೊದಲ ವಾರವೇ ನೂರು ಕೋಟಿಗಿಂತ ಹೆಚ್ಚು ಗಳಿಸಿದೆ. ಸಲ್ಮಾನ್‌ ಖಾನ್ ಸುಲ್ತಾನ್‌ ಗಳಿಸಿದ್ದು ಎಷ್ಟು ಗೊತ್ತೇ? ಮುಂದೆ ಓದಿ...

ಸುಲ್ತಾನ್‌ 5 ದಿನಕ್ಕೆ ಗಳಿಸಿದ್ದು ಇಷ್ಟು..!

ಸಲ್ಮಾನ್‌ ಖಾನ್‌ ಅಭಿನಯದ 'ಸುಲ್ತಾನ್' ಬಿಡುಗಡೆ ಆದ 5 ದಿನಗಳಲ್ಲಿ 180 ಕೋಟಿ ಗಳಿಸಿ ಬಾಕ್ಸ್‌ ಆಫೀಸ್ ಸುಲ್ತಾನನಾಗಿ ಮಾಡಿತ್ತು. ದಂಗಲ್ ರೆಕಾರ್ಡ್‌ ಬಗ್ಗೆ ಹೇಳುವುದಾದರೆ ಮೂರನೇ ದಿನವಾದ ಭಾನುವಾರ ರೂ.42.35 ಕೋಟಿ ಗಳಿಸಿ, ಒಂದೇ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿಕೊಟ್ಟ ಭಾರತದ ಮೊಟ್ಟ ಮೊದಲ ಹಿಂದಿ ಸಿನಿಮಾ ಎಂಬ ದಾಖಲೆ ಮಾಡಿದೆ. ಒಟ್ಟಾರೆ ವೀಕೆಂಡ್ ಕಲೆಕ್ಷನ್ ರೂ.106.95 ಕೋಟಿ.[ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ]

ನೂರು ಕೋಟಿ ಗಳಿಸಿದ ಅಮೀರ್ 5 ನೇ ಸಿನಿಮಾ

ತಾರೆ ಜಮೀನ್ ಪರ್, ಗಜನಿ, ತ್ರಿ ಈಡಿಯಟ್ಸ್, ಧೂಮ್ 3 ಮತ್ತು ಪಿಕೆ ನಂತರ ನೂರು ಕೋಟಿ ಗಳಸಿದ ಅಮೀರ್ ಖಾನ್ ಐದನೇ ಸಿನಿಮಾ 'ದಂಗಲ್'

ಸುಲ್ತಾನ್‌ ನಂತರ ದಂಗಲ್‌

2016 ರಲ್ಲಿ ಸುಲ್ತಾನ್‌ ನಂತರ ಬಿಗ್ಗೆಸ್ಟ್‌ ಓಪೆನಿಂಗ್ ಪಡೆದ ಎರಡನೇ ಸಿನಿಮಾ ದಂಗಲ್‌ ಎಂಬ ರ್ಯಾಂಕ್ ಪಡೆದಿದೆ.

ಮೊದಲ ವೀಕೆಂಡ್‌ನಲ್ಲಿ 200 ಕೋಟಿ ಗಳಿಸಲಿರುವ ಎರಡನೇ ಸಿನಿಮಾ

ಭಾರತೀಯ ಬಾಕ್ಸ್ ಆಫೀಸ್ ಪ್ರಕಾರ, ದಂಗಲ್ ಮೊದಲ ವೀಕೆಂಡ್‌ನಲ್ಲಿ ಪ್ರಪಂಚದಾದ್ಯಂತ ರೂ.200 ಕೋಟಿ ಗಳಿಸಲಿರುವ ಈ ವರ್ಷದ (2016) ಎರಡನೇ ಸಿನಿಮಾ ಆಗಿದೆ. ಮೊದಲ ಸಿನಿಮಾ ಸುಲ್ತಾನ್ ಎಂಬುದನ್ನು ಮರೆಯೋ ಹಾಗಿಲ್ಲ.

English summary
Dangal opened with BO collection of Rs 29.78 crore on Friday ahead of Christmas. The Aamir Khan film continued to rule the cinemas and garnered as much as 34.83 crore and Rs 42.35 crore on Saturday and Sunday respectively, crossing the 100 crore mark in its first weekend. Now Dangal film box office broke these records within 3 days of release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada