»   » 'ಬಾಹುಬಲಿ' ಚಿತ್ರದ್ದು ದಾಖಲೆನೇ ಅಲ್ಲ: ಈ ಚಿತ್ರ 5000 ಕೋಟಿ ಗಳಿಸಿದೆಯಂತೆ.!

'ಬಾಹುಬಲಿ' ಚಿತ್ರದ್ದು ದಾಖಲೆನೇ ಅಲ್ಲ: ಈ ಚಿತ್ರ 5000 ಕೋಟಿ ಗಳಿಸಿದೆಯಂತೆ.!

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಮಾತ್ರವಲ್ಲದೇ ಹೊರ ದೇಶದಲ್ಲೂ ದಾಖಲೆಯ ಕಲೆಕ್ಷನ್ ಮಾಡಿದೆ ಎನ್ನುವುದು ಜಗತ್ ಜಾಹಿರ. ಇದುವರೆಗೂ 1500 ಕೋಟಿ ಗಳಿಸಿರುವ 'ಬಾಹುಬಲಿ' 2000 ಕೋಟಿಯತ್ತ ಹೆಜ್ಜೆ ಹಾಕಿದೆ.[ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ.1', ಹಳೆ ದಾಖಲೆಗಳೆಲ್ಲ ಪುಡಿ.. ಪುಡಿ!]

ಆದ್ರೆ, ಇದ್ಯಾವುದು ದಾಖಲೆಯೇ ಅಲ್ಲ. ಬಾಹುಬಲಿ ಚಿತ್ರ ಯಾವ ದಾಖಲೆಯನ್ನೂ ನಿರ್ಮಾಣ ಮಾಡಿಲ್ಲ ಎಂದು ಬಾಲಿವುಡ್ ನಿರ್ದೇಶಕರೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲ 'ಬಾಹುಬಲಿ' ಚಿತ್ರಕ್ಕೆ ಹೋಲಿಸಿದರೇ ''ಗದರ್: ಏಕ್ ಪ್ರೇಮ ಕಥಾ'' ಚಿತ್ರ 5000 ಕೋಟಿ ಗಳಿಸಿದೆ ಎನ್ನಬಹುದು ಎಂದು 'ಬಾಹುಬಲಿ' ಚಿತ್ರದ ಕಲೆಕ್ಷನ್ ವಿರುದ್ಧ ಗುಡುಗಿದ್ದಾರೆ. ಮುಂದೆ ಓದಿ....

'ಬಾಹುಬಲಿ'ಗಿಂತ ಹೆಚ್ಚು ಗಳಿಸಿದೆ 'ಗದರ್'

ಬಾಹುಬಲಿ ಚಿತ್ರ 1500 ಕೋಟಿ ಗಳಿಸಿರುವುದು ದಾಖಲೆಯೇ ಅಲ್ಲ. ಆಗಿನ ಕಾಲದಲ್ಲಿ ನನ್ನ ಸಿನಿಮಾ ''ಗದರ್: ಏಕ್ ಪ್ರೇಮ ಕಥಾ'' 265 ಕೋಟಿ ಗಳಿಸಿತ್ತು ಅದು ಈಗ 'ಬಾಹುಬಲಿ' ಗಳಿಸಿರುವುದಕ್ಕಿಂತೆ ದೊಡ್ಡ ಮೊತ್ತ''- ಅನಿಲ್ ಶರ್ಮಾ['ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ]

''ಗದರ್: ಏಕ್ ಪ್ರೇಮ ಕಥಾ'' ಗಳಿಕೆ 5000 ಕೋಟಿ!

ಇಂದಿನ ಪರಿಸ್ಥಿತಿಗೆ ಹೋಲಿಸಿದರೇ 2001 ರಲ್ಲಿ ತೆರೆಕಂಡ ''ಗದರ್: ಏಕ್ ಪ್ರೇಮ ಕಥಾ'' ಚಿತ್ರ 5000 ಕೋಟಿ ಗಳಿಸಿದೆ ಎನ್ನಬಹುದು. ಆಗ ಒಂದು ಟಿಕೆಟ್ ಬೆಲೆ 25 ರೂಪಾಯಿ ಇತ್ತು ಅಷ್ಟೇ. ಈಗಿನ ಲೆಕ್ಕಾಚಾರ ನೋಡಿದ್ರೆ, ''ಗದರ್: ಏಕ್ ಪ್ರೇಮ ಕಥಾ'' ಗಳಿಕೆ ಬಾಹುಬಲಿಗಿಂತ ಅತಿ ಹೆಚ್ಚಿದೆ''- ಅನಿಲ್ ಶರ್ಮಾ['ಬಾಹುಬಲಿ' ಚೆನ್ನಾಗಿಲ್ಲ ಅಂದ್ರೆ ಮನೋವೈದ್ಯರ ಸಹಾಯ ಅಗತ್ಯ: ವರ್ಮಾ]

ಬಾಹುಬಲಿ ಯಾವ ರೆಕಾರ್ಡ್ ಸೆಟ್ ಮಾಡಿಲ್ಲ!

''ಒಳ್ಳೆ ಸಿನಿಮಾಗಳು ಬಂದಾಗ ಕೆಲ ದಾಖಲೆಗಳು ಬ್ರೇಕ್ ಆಗುತ್ತವೆ. ನನ್ನ ಪ್ರಕಾರ 'ಬಾಹುಬಲಿ-2' ಈ ವರೆಗೆ ಯಾವುದೇ ರೆಕಾರ್ಡ್‌ನ್ನು ಸೆಟ್ ಮಾಡಿಲ್ಲ ಎಂದು ಅನಿಲ್ ಶರ್ಮ ಹೇಳಿದ್ದಾರೆ.[ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ]

'ಗದರ್: ಏಕ್ ಪ್ರೇಮ ಕಥಾ'' ಚಿತ್ರದ ಬಗ್ಗೆ...

2001 ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ 'ಗದರ್: ಏಕ್ ಪ್ರೇಮ ಕಥಾ. ಅನಿಲ್ ಶರ್ಮಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸನ್ನಿ ಡಿಯೋಲ್, ಅಮಿಶಾ ಪಾಟೇಲ್, ಅಮರೀಶ್ ಪುರಿ, ಸೇರಿದಂತೆ ಹಲವರು ಅಭಿನಯಿಸಿದ್ದರು.['ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ]

English summary
Baahubali 2 hasn’t set any record yet, Gadar earned Rs 5000cr as per valuation says Bollywood Director Anil Sharma

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada