X
ಅನಿಲ್

ಅನಿಲ್

Producer/Actor
ಜೀವನ ಚರಿತ್ರೆ :  ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬನಶಂಕರಿ ಬಳಿಯಿರುವ ಕದಿರೇನಹಳ್ಳಿಯ ನಿವಾಸಿ. ವೇಣುಗೋಪಾಲ್ ಹಾಗೂ ಸರಸ್ವತಿ ದಂಪತಿಯ ಮೂರನೇ ಮಗ ಅನಿಲ್. ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ತಂಗಿಯರಿದ್ದಾರೆ. ಭ್ರಮ್ಯ ರವರನ್ನ ಅನಿಲ್ ವಿವಾಹವಾಗಿದ್ದರು.   ಬೀಡಾ ಅಂಗಡಿಯಲ್ಲಿ ಕೆಲಸ : ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ನಟ ಅನಿಲ್ ಕುಮಾರ್ ಅವರು ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ 800 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದ್ದರು. ಕೊನೆಗೆ ಗಾಡಿಗಳನ್ನು ಸೀಜ್ ಮಾಡುವ ಕೆಲಸಕ್ಕೆ ಕೈ ಹಾಕಿದರು   ಸಿನಿಮಾ ಬದುಕಿಗೆ ಎಂಟ್ರಿ ಆಕಸ್ಮಿಕ : ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಅನಿಲ್ ಕುಮಾರ್ ಅವರು ಸಿನಿಮಾ ಜಗತ್ತಿನಲ್ಲಿ ಮಿಂಚುವ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅನಿಲ್ ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.   ಅನಿಲ್ ಸಿನಿಮಾಗೆ ಬರಲು ಕಾರಣ ದುನಿಯಾ ವಿಜಿ : ಅನಿಲ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ ನಟ ದುನಿಯಾ ವಿಜಯ್. ಒಮ್ಮೆ ಗಾಡಿಗಳನ್ನು ಸೀಜ್ ಮಾಡಲು ಅನಿಲ್ ಹೋಗಿದ್ದಾಗ, ಅಲ್ಲಿ ಸಿನಿಮಾದ ಫೈಟರ್ ಗಳನ್ನು ನೋಡಿ ಪರಿಚಯ ಮಾಡಿಕೊಂಡರು. ತದನಂತರ ಕೃಷ್ಣರಾವ್ ಪಾರ್ಕ್ ನಲ್ಲಿ ಫೈಟಿಂಗ್ ತರಬೇತಿ ಪಡೆಯಲು ಹೋದಾಗ, ಅಲ್ಲಿಗೆ ಬಂದಿದ್ದ ದುನಿಯಾ ವಿಜಯ್, ಅನಿಲ್ ಅವರನ್ನು ಪರಿಚಯ ಮಾಡಿಕೊಂಡರು.   ವಿಜಯ್ ಅವರ ಪರಿಚಯ ಆಗುವಷ್ಟರಲ್ಲಿ ಕುಂಗ್ ಫು ಹಾಗೂ ಬಾಕ್ಸಿಂಗ್ ಕಲಿತಿದ್ದ ಅನಿಲ್ ಕುಮಾರ್, ವಿಜಯ್ ಅವರಿಗೆ ಇನ್ನಷ್ಟೂ ಹತ್ತಿರವಾದರು. ಅಷ್ಟೊತ್ತಿಗಾಗಲೇ ವಿಜಿ ಅವರ 'ದುನಿಯಾ' ಸಿನಿಮಾ ಸೆಟ್ಟೇರಿತ್ತು. ಅದರಲ್ಲಿ ಅನಿಲ್ ಗೆ ಪುಟ್ಟ ಅವಕಾಶ ಸಿಕ್ಕಿತು. ಹೀಗೆ 'ದುನಿಯಾ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ ಇದೀಗ 25 ಚಿತ್ರಗಳ ಗಡಿ ಮುಟ್ಟಿದೆ.   ಇವರು 07 ನವೆಂಬರ್ 2016 ನಲ್ಲಿ ವಿಜಿ ಅವರ ಮಾಸ್ತಿ ಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ರಾಮನಗರ ಜಿಲ್ಲೆಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವೊನ್ನೊಪ್ಪಿದ್ದಾರೆ.      
ಮುಂದೆ ಓದಿ

ಅನಿಲ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಮಂಜು ಸ್ವರಾಜ್ 06 Jan 2017
ಚೇತನ್ ಕುಮಾರ್ 15 Sep 2017
ಸಂತೋಷ್ ಆನಂದರಾಮ್ 24 Mar 2017
ನಾಗಶೇಖರ್ 12 May 2017

ಅನಿಲ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನಿಲ್

ಹೆಸರು ಅನಿಲ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನಿಲ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+