X
ಹೋಮ್ » ಸೆಲಬ್ರಿಟಿಗಳು » ಸ್ಪಂದನಾ ವಿಜಯ್ ರಾಘವೇಂದ್ರ
ಸ್ಪಂದನಾ ವಿಜಯ್ ರಾಘವೇಂದ್ರ

ಸ್ಪಂದನಾ ವಿಜಯ್ ರಾಘವೇಂದ್ರ

Producer
ಜೀವನ ಚರಿತ್ರೆ :  ಸ್ಪಂದನಾ ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ. ಸ್ಪಂದನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿವರು. ಇವರ ತಂದೆ ಬಿ.ಕೆ.ಶಿವರಾಮ್ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಸ್ಪಂದನಾ ಮದುವೆ ಬಳಿಕ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದರು.  ಮದುವೆ: ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರದ್ದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್. ಮಂಗಳೂರಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದ ವಿಜಯ್, 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯೊಂದರಲ್ಲಿ ಸ್ಪಂದನಾ ಅರನ್ನು ನೋಡಿದ್ದರು. ಈ ವೇಳೆ ಸಂಗೀತದ ವಿಚಾರವಾಗಿ ಇವರಿಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ನಂತರ 2007ರಲ್ಲಿ ಶೇಷಾದ್ರಿಪುರಂ ಕಾಫಿ ಡೇಯಲ್ಲಿ 2ನೇ ಬಾರಿ ಭೇಟಿಯಾಗಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನನ್ನು ಮದುವೆಯಾಗ್ತಿಯಾ ಅಂತ ಕೇಳಿದ್ದರಂತೆ. ಸ್ಪಂದನಾ ಕೂಡ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ನಂತರ ತಂದೆ-ತಾಯಿಯ ಬಳಿ ಪ್ರೀತಿ ವಿಚಾರ ಹೇಳಿದ್ದರಂತೆ.  ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2007ರ ಆಗಸ್ಟ್ 26ರಂದು ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಈ ಜೊಡಿ ಪ್ರೇಮಿಗಳಂತೆಯೇ ಇದ್ದರು. ಈ ದಂಪತಿಗೆ ಶೌರ್ಯ ಎಂಬ 14 ವರ್ಷದ ಓರ್ವ ಮಗನಿದ್ದಾನೆ.   ನಿರ್ಮಾಣ ಹಾಗೂ ನಟನೆ: ಸ್ಪಂದನಾ ವಿಜಯ್ ರಾಘವೇಂದ್ರ ತಮ್ಮ ಪತಿ ನಟಿಸಿರುವ `ಕಿಸ್ಮತ್' ಚಿತ್ರವನ್ನು  ನಿರ್ಮಾಣ ಮಾಡಿದ್ದಾರೆ. ಜೊತೆಗೆ 2016ರಲ್ಲಿ ತೆರೆಕಂಡ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕೂಡ ಅಭಿನಯಿಸಿದ್ದರು.    ನಿಧನ: ಸ್ಪಂದನಾ ವಿಜಯರಾಘವೇಂದ್ರ ಮೂರು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದರು. 2023ರ ಆಗಸ್ಟ್ 6ರಂದು ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.       
ಮುಂದೆ ಓದಿ

ಸ್ಪಂದನಾ ವಿಜಯ್ ರಾಘವೇಂದ್ರ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ವಿಜಯ್ ರಾಘವೇಂದ್ರ 23 Nov 2018

ಸ್ಪಂದನಾ ವಿಜಯ್ ರಾಘವೇಂದ್ರ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸ್ಪಂದನಾ ವಿಜಯ್ ರಾಘವೇಂದ್ರ

ಹೆಸರು ಸ್ಪಂದನಾ ವಿಜಯ್ ರಾಘವೇಂದ್ರ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸ್ಪಂದನಾ ವಿಜಯ್ ರಾಘವೇಂದ್ರ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+