For Quick Alerts
  ALLOW NOTIFICATIONS  
  For Daily Alerts

  ಆರ್ಯವೈಶ್ಯರ ಒತ್ತಡಕ್ಕೆ ಮಣಿದು ನೂರು ವರ್ಷಗಳ 'ಚಿಂತಾಮಣಿ ಪದ್ಯ ನಾಟಕಂ' ನಿಷೇಧಿಸಿದ ಜಗನ್ ಸರ್ಕಾರ

  |

  'ಕಾವ್ಯೇಷು ನಾಟಕಂ ರಮ್ಯಂ...' ಕಾಳಿದಾಸನ ಈ ಮಾತು ಎಲ್ಲ ಕಾಲಕ್ಕೂ ಪ್ರಸ್ತುತ. ಕಾವ್ಯ-ಸಾಹಿತ್ಯ ಕೇವಲ ಅದನ್ನ ಅಭ್ಯಾಸಿಸುವ ವರ್ಗಕ್ಕೆ ಮಾತ್ರವೇ ಹತ್ತಿರವಾಗುತ್ತದೆ. ನಾಟಕ ಜನಸಾಮಾನ್ಯರನ್ನು ರಂಜಿಸುತ್ತದೆ ಮತ್ತು ಅದು ಹೇಳಬೇಕಾದ ವಿಚಾರವನ್ನು ಮನಸ್ಸಿಗೆ ನಾಟಿಸುತ್ತದೆ. ಇವತ್ತು ಸಿನಿಮಾ, ಧಾರಾವಾಹಿಗಳ ಪ್ರಪಂಚ ದೊಡ್ಡದಾಗಿ ಬೆಳೆದಿರಬಹುದು, ಆದರೆ ಅದರ ಮೂಲ ಮಾತ್ರ ನಾಟಕವೇ ಆಗಿದೆ. ಈಗಲೂ ಅನೇಕ ಪ್ರದೇಶಗಳಲ್ಲಿ ನಾಟಕಗಳು ಜೀವಂತವಾಗಿವೆ. ಉತ್ತರ ಕರ್ನಾಟಕದಲ್ಲಿ ತಲತಲಾಂತರಗಳಿಂದ 'ಶ್ರೀ ಕೃಷ್ಣ ಪಾರಿಜಾತ' ನಾಟಕವನ್ನು ಉಳಿಸಿಕೊಂಡು ಮತ್ತು ಅದನ್ನು ಬೆಳೆಸಿಕೊಂಡು ಬಂದಿದ್ದಾರೆ. ಇನ್ನು ಸುರಭಿ ನಾಟಕ ಅಕಾಡೆಮಿ ಅವರು 'ಮಾಯಾಬಜಾರ್' ತೆಲುಗು ನಾಟಕವನ್ನು ಹಲವಾರು ವರ್ಷಗಳಿಂದ ದೇಶವಿದೇಶಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಇದೇ ಪರಂಪರೆಯಲ್ಲಿ ಬರುವ ಮತ್ತೊಂದು ನಾಟಕ 'ಚಿಂತಾಮಣಿ' ಇದು ಸುಮಾರು ನೂರು ವರ್ಷಗಳಿಗಿಂತ ಅಧಿಕ ಕಾಲದಿಂದ ಆಂಧ್ರಪ್ರದೇಶದಲ್ಲಿ ನಡೆಸಿಕೊಂಡು ಬಂದಿರುವ ಜನಮನ್ನಣೆ ಹೊಂದಿರುವ ಸಾಮಾಜಿಕ ನಾಟಕ. ಇಂತಹ ನಾಟಕ ಅದು ಅಂತ್ಯವಾಗುವ ಕಾಲ ಸಮೀಪಿಸಿದೆ. ಕಾರಣವಿಷ್ಟೇ ಆಂಧ್ರ ಸರ್ಕಾರ ಇದನ್ನು ಸಂಪೂರ್ಣವಾಗಿ ಆಂಧ್ರದಲ್ಲಿ ಪ್ರದರ್ಶನ ಮಾಡದಂತೆ ನಿಷೇಧ ಹೇರಿದೆ.

  1920 ರಲ್ಲಿ ನಾಟಕಕಾರ ಕಳ್ಳಕೂರಿ ನಾರಾಯಣ ರಾವ್ ಅವರು ರಚಿಸಿದ 'ಚಿಂತಾಮಣಿ ಪದ್ಯ ನಾಟಕ'ವನ್ನು ನೂರು ವರ್ಷಗಳಿಂದ ಪ್ರದರ್ಶನ ಮಾಡಿಕೊಂಡು ಬರಲಾಗುತ್ತಿದೆ. ಈ ನಾಟಕವನ್ನು ವಿವಿಧ ಕಡೆ ಪ್ರದರ್ಶಿಸುವ ಕಲಾವಿದರು 2021 ರಲ್ಲಿ ನಾಟಕದ ಶತಮಾನೋತ್ಸವವನ್ನು ಆಚರಿಸಿದ್ದರು. ಸಮಾಜ ಸುಧಾರಕ ಕಳ್ಳಕೂರಿ ನಾರಾಯಣ ರಾವ್ ಅವರು 1920 ರಲ್ಲಿ ಬರೆದ ಈ ನಾಟಕವು ಚಿಂತಾಮಣಿ ಎಂಬ ವೇಶ್ಯೆ, ಅವಳ ಶ್ರೀಕೃಷ್ಣ ಭಕ್ತಿ ಮತ್ತು ಸುಬ್ಬಿ ಶೆಟ್ಟಿ ಎಂಬ ಜಿಪುಣ ವ್ಯಾಪಾರಿ ಸುತ್ತಲೂ ಹೆಣೆಯಲಾಗಿದೆ.

  ಇಷ್ಟಕ್ಕೂ ನಾಟಕವನ್ನು ನಿಷೇಧಿಸಿರುವುದು ಯಾಕೆ? ಅದರಲ್ಲಿ ಅಂತಹದು ಏನಿದೆ?

  ಇಷ್ಟಕ್ಕೂ ನಾಟಕವನ್ನು ನಿಷೇಧಿಸಿರುವುದು ಯಾಕೆ? ಅದರಲ್ಲಿ ಅಂತಹದು ಏನಿದೆ?

  ಆಂಧ್ರ ಸರ್ಕಾರ 100 ವರ್ಷ ಹಳೆಯ 'ಚಿಂತಾಮಣಿ ಪದ್ಯ ನಾಟಕ' ನಿಷೇಧ ಮಾಡಿ ಕಳೆದ ಸೋಮವಾರ ಆದೇಶ ಹೊರಡಿಸಿದೆ. 1920 ರಲ್ಲಿ ನಾಟಕಕಾರ ಕಳ್ಳಕೂರಿ ನಾರಾಯಣ ರಾವ್ ಅವರು ರಚಿಸಿದ 'ಚಿಂತಾಮಣಿ ಪದ್ಯ ನಾಟಕ' ಕಳೆದ ನೂರು ವರ್ಷಗಳಿಂದ ಹಬ್ಬ-ಹರಿದಿನಗಳು ಊರ ಜಾತ್ರೆಗಳಲ್ಲಿ ಈ ನಾಟಕವನ್ನು ವಿಶೇಷವಾಗಿ ಪ್ರದರ್ಶನ ಮಾಡಿಕೊಂಡು ಮಾಡಿಕೊಂಡು ಬರಲಾಗುತ್ತಿದೆ. ಸಾಮಾಜಿಕ ಕಳಕಳಿಯೊಂದಿಗೆ ಈ ನಾಟಕವನ್ನು ನಾರಾಯಣರಾವ್ ಬರೆದಿದ್ದರು ಮತ್ತು ಅದನ್ನು ಅದೇ ಅರ್ಥದಲ್ಲಿ ಪ್ರದರ್ಶನ ಮಾಡಿಕೊಂಡು ಬರಲಾಗುತ್ತಿತ್ತು. ಇದನ್ನು ನಿಷೇಧಿಸುವಂತೆ ಒತ್ತಡ ಹೇರುತ್ತಿರುವುದು ನಾಟಕದ ಕಥಾವಸ್ತುವಿನ ಹಿನ್ನೆಲೆಯಿಂದ ಅಲ್ಲ ಬದಲಾಗಿ ಸುಬ್ಬಶೆಟ್ಟಿ ಪಾತ್ರದ ಚಿತ್ರಣದ ಬಗ್ಗೆ ಆರ್ಯವೈಶ್ಯ ಸಮುದಾಯ ಪ್ರತಿಭಟನೆ ಮಾಡುತ್ತಿರುವುದರಿಂದ. ನಾಟಕದಲ್ಲಿನ ಸಂಭಾಷಣೆಗಳ ಬಗ್ಗೆ ಮತ್ತು ಸುಬ್ಬಿ ಶೆಟ್ಟಿ ಪಾತ್ರದ ನಿರ್ವಹಣೆ ಬಗ್ಗೆ ಆರ್ಯವೈಶ್ಯ ಸಮುದಾಯದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇವರ ಒತ್ತಡಕ್ಕೆ ಮಣಿದಿರುವ ಜಗನ್ ಸರ್ಕಾರ ಸುಮಾರು 100 ವರ್ಷಗಳಿಂದ ಜನರನ್ನು ಆಕರ್ಷಿಸಿದ್ದ ಜನಪ್ರಿಯ 'ಚಿಂತಾಮಣಿ ಪದ್ಯ ನಾಟಕ'ಕ್ಕೆ ತೆರೆ ಎಳೆದಿದೆ. ಗಮನಾರ್ಹ ಈ ತೆಲುಗು ನಾಟಕದಲ್ಲಿನ ಕೆಲವು ಸಂಭಾಷಣೆಗಳು ಮತ್ತು ಸುಬ್ಬಿ ಶೆಟ್ಟಿ ಪಾತ್ರದ ಚಿತ್ರಣವನ್ನು ಆಕ್ಷೇಪಿಸಿ ಸಮುದಾಯದ ಸದಸ್ಯರು ಸಲ್ಲಿಸಿದ ಆಕ್ಷೇಪಣೆಗೆ ಪ್ರತಿಕ್ರಿಯೆಯಾಗಿ ನಾಟಕದ ಪ್ರದರ್ಶನವನ್ನು ನಿಷೇಧಿಸುವ ಆದೇಶ ಸರ್ಕಾರ ಹೊರಡಿಸಿದೆ.

  ಅಷ್ಟಕ್ಕೂ ಸುಬ್ಬಿ ಶೆಟ್ಟಿ ಪಾತ್ರದ ಬಗ್ಗೆ ಆಕ್ಷೇಪ ಯಾಕೆ?

  ಅಷ್ಟಕ್ಕೂ ಸುಬ್ಬಿ ಶೆಟ್ಟಿ ಪಾತ್ರದ ಬಗ್ಗೆ ಆಕ್ಷೇಪ ಯಾಕೆ?

  ಕೆಲವು ಸಾಮಾಜಿಕ ಅನಿಷ್ಟಗಳಿಗೆ ಬಲಿಯಾಗುವ ಮೂಲಕ ಜನರು ತಮ್ಮ ಕುಟುಂಬವನ್ನು ಹೇಗೆ ನಿರ್ಲಕ್ಷಿಸುತ್ತಾರೆ ಎಂಬುದನ್ನು ನಾಟಕ ಪ್ರಸ್ತುತಪಡಿಸುತ್ತದೆ. ಸುಬ್ಬಿಸೆಟ್ಟಿ, ಚಿಂತಾಮಣಿ, ಬಿಲ್ವಮಂಗಲುಡು, ಭವಾನಿ ಶಂಕರಂ ಮತ್ತು ಶ್ರೀಹರಿ ನಾಟಕದ ಕೆಲವು ಪಾತ್ರಗಳು. ನಾಟಕವು ಪ್ರಧಾನವಾಗಿ ಜಿಪುಣ ಶೆಟ್ಟಿ ಮತ್ತು ಶ್ರೀಕೃಷ್ಣನ ಭಕ್ತಳಾದ ಚಿಂತಾಮಣಿ ಎಂಬ ವೇಶ್ಯೆಯ ಮಧ್ಯೆ ನಡೆಯುತ್ತದೆ. ಶೆಟ್ಟಿಯ ಗೊಣಗಾಟ, ಜಿಪುಣತನ, ವೇಶ್ಯಾಗೃಹಕ್ಕೆ ನಿಯಮಿತವಾಗಿ ಭೇಟಿ ನೀಡುವ ದುಷ್ಕೃತ್ಯದಿಂದಾಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುವ ಶೆಟ್ಟಿಯನ್ನು ಒಂದು ರೀತಿಯಲ್ಲಿ ಕಾಮಿಕ್ ಪಾತ್ರವನ್ನಾಗಿ ತೋರಿಸಲಾಗಿದೆ. ಹೀಗಾಗಿ ಸುಬ್ಬಿ ಶೆಟ್ಟಿ ಪಾತ್ರ ತಮ್ಮ ಮನೋಭಾವಗಳಿಗೆ ಧಕ್ಕೆ ತರುತ್ತಿದ್ದು ಈ ನಾಟಕವನ್ನು ನಿಷೇಧಿಸುವಂತೆ ಮೊದಲಿನಿಂದಲೂ ಆರ್ಯವೈಶ್ಯರು ಒತ್ತಾಯಿಸಿಕೊಂಡು ಬಂದಿದ್ದರು. ಅವರ ಒತ್ತಾಯಕ್ಕೆ ಮಣಿದಿರುವ ಪ್ರಸ್ತುತ ಸರ್ಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

  ಆರ್ಯವೈಶ್ಯ ಸಮುದಾಯದಿಂದ ಸ್ವಾಗತ

  ಆರ್ಯವೈಶ್ಯ ಸಮುದಾಯದಿಂದ ಸ್ವಾಗತ

  ಸರ್ಕಾರದ ನಿರ್ಧಾರದಿಂದ ಹರ್ಷಗೊಂಡ ಆಂಧ್ರಪ್ರದೇಶ ಆರ್ಯ-ವೈಶ್ಯ ಮಹಾಸಭಾದ ಅಧ್ಯಕ್ಷ ಎಂ ದ್ವಾರಕಾನಾಥ್, ಸುಮಾರು ನಾಲ್ಕು ತಿಂಗಳ ಹಿಂದೆ ನಾಟಕವನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಕಚೇರಿಗೆ ಪ್ರಾತಿನಿಧ್ಯ ನೀಡಿದ್ದರು, "ನಮ್ಮ ಸಮುದಾಯವು ನಾಟಕವನ್ನು ಆಕ್ಷೇಪಿಸುತ್ತಿದೆ. ಈಗ ಹಲವಾರು ವರ್ಷಗಳಿಂದ, ಹಿಂದೆ ಯಾವುದೇ ಸರ್ಕಾರವು ಗಮನಹರಿಸಲಿಲ್ಲ. ಈಗಿನ ಸರ್ಕಾರ ನಾಟಕವನ್ನು ಪರಿಶೀಲಿಸಿ ಸರಿಯಾದ ನಿರ್ಧಾರ ಕೈಗೊಂಡಿದೆ"ಎನ್ನುವ ಅವರು ನಾಟಕದ ಆಕ್ಷೇಪಣೆಗಳನ್ನು ವಿವರಿಸಿ "ನಾಟಕವು ನಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಸುಬ್ಬಿ ಸೆಟ್ಟಿ ಪಾತ್ರವನ್ನು ಉಲ್ಲೇಖಿಸಿ "ನಮ್ಮನ್ನು ಕತ್ತಲೆಯಾದ, ಕುಳ್ಳಗಿನ ಮತ್ತು ತಮಾಷೆಯ ಭಾಷೆ ಮಾತನಾಡುವ ಜನರು ಎಂದು ತೋರಿಸಲಾಗಿದೆ. ಇದು 100 ವರ್ಷಗಳ ಹಿಂದೆ ಸ್ವೀಕಾರಾರ್ಹವಾಗಿರಬಹುದು, ಆದರೆ ಇನ್ನು ಮುಂದೆ ಅಲ್ಲ. ಇದು ಆಕ್ರಮಣಕಾರಿಯಾಗಿದೆ" ಎಂದಿದ್ದಾರೆ.

  ನಾಟಕದ ಪರವಾಗಿ ಧ್ವನಿಯೆತ್ತಿದ ಸುರಭಿ ತಂಡ

  ನಾಟಕದ ಪರವಾಗಿ ಧ್ವನಿಯೆತ್ತಿದ ಸುರಭಿ ತಂಡ

  'ಸುರಭಿ' ಕಲಾವಿದ ಜಯಚಂದ್ರ ವರ್ಮ 'ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ಸದುದ್ದೇಶದಿಂದ ಲೇಖಕರು ನಾಟಕ ರಚಿಸಿದ್ದಾರೆ.ಆದರೆ, ಕೆಲವು ಕಲಾವಿದರು ನಾಟಕಕ್ಕೆ ಅಸಭ್ಯತೆಯನ್ನು ಸೇರಿಸಿದ್ದಾರೆ ಮತ್ತು ಅದರ ಖ್ಯಾತಿಯನ್ನು ಹಾಳುಮಾಡಿದ್ದಾರೆ.ಐತಿಹಾಸಿಕ ನಾಟಕವನ್ನು ನಿಷೇಧಿಸುವುದು ಸರಿಯಾದ ನಿರ್ಧಾರವಲ್ಲ. 100 ವರ್ಷಗಳ ನಂತರವೂ ಪದ್ಯ ನಾಟಕವನ್ನು ಇಷ್ಟಪಡುವವರು ಅನೇಕರಿದ್ದಾರೆ" ಎಂದು ನಾಟಕವನ್ನು ಬೆಂಬಲಿಸಿದ್ದಾರೆ. ಆರ್ಯವೈಶ್ಯ ಸಮುದಾಯ ಈ ನಾಟಕವನ್ನು ನಿಷೇಧವನ್ನು ಬಗ್ಗೆ ಸ್ವಾಗತಿಸುತ್ತಿದ್ದಾರೆ. ಆದರೆ ಇದಕ್ಕೆ ನಾಟಕ ವಲಯ ಸೇರಿದಂತೆ ಇತರರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವ ಬಗ್ಗೆ ಕೂಡ ಅವರು ಮಾತನಾಡುತ್ತಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ನಾಟಕದ ಮೂಲ ಆಶಯ ನಾಶಮಾಡಲಾಗಿದೆ

  ಇತ್ತೀಚಿನ ದಿನಗಳಲ್ಲಿ ನಾಟಕದ ಮೂಲ ಆಶಯ ನಾಶಮಾಡಲಾಗಿದೆ

  "ಮೂಲತಃ, ನಾಟಕವನ್ನು ಸಾಮಾಜಿಕ ಸಂದೇಶದೊಂದಿಗೆ ಸುಧಾರಣಾಕಾರಕವಾಗಿ ಬರೆಯಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಅದನ್ನು ಹೆಚ್ಚು ಮನರಂಜನೆಗಾಗಿ ಹಲವಾರು ರೂಪಾಂತರಗಳನ್ನು ಮಾಡಲಾಯಿತು, ವಿಶೇಷವಾಗಿ 'ರೆಕಾರ್ಡಿಂಗ್ ಡ್ಯಾನ್ಸ್' (ಜಾನಪದ ನೃತ್ಯದಿಂದ ಕವಲೊಡೆದ ಕಾಮಪ್ರಚೋದಕ ಮನರಂಜನೆ) ಪ್ರವೇಶದ ನಂತರ, ನಾಟಕವು ಸಂಪೂರ್ಣವಾಗಿ ಅಸಭ್ಯವಾಗಿ ಹೊರಹೊಮ್ಮಿತು," ಎಂದು ಪಿಎಚ್‌ಡಿ ವಿದ್ವಾಂಸ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಗತಿಪರ ಥಿಯೇಟರ್ ಗ್ರೂಪ್‌ನ ಸ್ಥಾಪಕ ಸದಸ್ಯರು ಆಗಿರುವ ಶೇಕ್ ಜಾನ್ ಬಶೀರ್ ಅವರು ಅಭಿಪ್ರಾಯಪಡುತ್ತಾರೆ.

  ಹಬ್ಬಗಳ ಸಮಯದಲ್ಲಿ ನಾಟಕದ ಪ್ರದರ್ಶನ

  ಹಬ್ಬಗಳ ಸಮಯದಲ್ಲಿ ನಾಟಕದ ಪ್ರದರ್ಶನ

  "ಹಳ್ಳಿಯ ಹಬ್ಬಗಳ ಸಮಯದಲ್ಲಿ ಜನಸಾಮಾನ್ಯರನ್ನು ಆಕರ್ಷಿಸಲು, ನಾಟಕ ಗುಂಪುಗಳು ನಾಟಕದಲ್ಲಿ ಹಲವಾರು ಲೈಂಗಿಕ ಒಳನುಗ್ಗುವಿಕೆಗಳು ಮತ್ತು ಲೈಂಗಿಕ ಉಲ್ಲೇಖಗಳನ್ನು ಸೇರಿಸಿ, ಮತ್ತು ನಾಟಕದ ನಿಜವಾದ ಉದ್ದೇಶವನ್ನು ಅಪವಿತ್ರಗೊಳಿಸಿದ್ದಾರೆ "ಎಂದು ಬಶೀರ್ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, "ಇದು ಖಂಡನೀಯ. ಸೆನ್ಸಾರ್ಶಿಪ್ ಅನ್ನು ಎಂದಿಗೂ ಪ್ರೋತ್ಸಾಹಿಸಬಾರದು. 1876 ​​ರಲ್ಲಿ, ಬ್ರಿಟಿಷರು ಕಲೆಯ ಮೂಲಕ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯವನ್ನು ಮೊಟಕುಗೊಳಿಸಲು ನಾಟಕೀಯ ಪ್ರದರ್ಶನಗಳ ಕಾಯಿದೆಯನ್ನು ಪರಿಚಯಿಸಿದರು. ಪ್ರಸ್ತುತ ನಿರ್ಧಾರವನ್ನು ಅದರ ವಿಸ್ತರಣೆಯಾಗಿ ನೋಡಬೇಕಾಗುತ್ತದೆ" ಎನ್ನುತ್ತಾರೆ.

  ''ನಾಟಕದ ನಿಷೇಧವನ್ನು ಒಪ್ಪಲು ಸಾಧ್ಯವಿಲ್ಲ''

  ''ನಾಟಕದ ನಿಷೇಧವನ್ನು ಒಪ್ಪಲು ಸಾಧ್ಯವಿಲ್ಲ''

  ನಾಟಕದ ಮೇಲೆ ನಿಷೇಧ ಹೇರುವ ಬದಲು ಸರ್ಕಾರವು ಬದಲಾವಣೆಗಳನ್ನು ಕೇಳಬೇಕಿತ್ತು ಎಂದು ಕೆಲವರು ವಾದಿಸಿದ್ದಾರೆ. ನಾಟಕಕಾರ ಮತ್ತು ನಟ ಗೋವಡ ವೆಂಕಟ್ "ಎಲ್ಲಾ ನಾಟಕಗಳು ಉತ್ತಮ ಸಂದೇಶವನ್ನು ನೀಡುವ ಆಶಯವನ್ನು ಹೊಂದಿರುತ್ತವೆ. ನಾಟಕದಲ್ಲಿ ಕೆಲವು ಪಾತ್ರಗಳ ಬಗ್ಗೆ ಮಾತ್ರ ಎತ್ತಿ ತೋರಿಸುವುದು ಸರಿಯಲ್ಲ. ಒಂದು ಪಾತ್ರವನ್ನು ತೆಗೆದು ಹಾಕಲು ಅಥವಾ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆಯುವಂತೆ ಸೂಚಿಸಲು ಸರ್ಕಾರಕ್ಕೆ ಹಕ್ಕಿದೆ. ಆದರೆ ಐತಿಹಾಸಿಕ ನಾಟಕದ ಮೇಲೆ ನಿಷೇಧ ಹೇರುವುದು ಸರಿಯಲ್ಲ" ಎಂದು ಅಭಿಪ್ರಾಯಪಡುತ್ತಾರೆ.

  English summary
  The Andhra Pradesh government has brought down the curtains down on the popular ' Chinitamani Padya Natakam' which has enthralled people for almost 100 years. The government decision to ban the staging of the play was in response to the representation submitted by the Arya vaishya community, which objecting to certain dialogues and portrayal of a character in the play.
  Thursday, January 27, 2022, 17:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X